ಕಲಕೇರಿ ಗ್ರಾಮಸ್ಥರಿಂದ ಡಾ. ಪ್ರಭುಗೌಡಗೆ ಸನ್ಮಾನ

ತಾಳಿಕೋಟಿ 23: ದೇವರಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಕುದುರಗೊಂಡ ಕೆರೆಗೆ ನೀರು ಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರೊಂದಿಗೆ ಮಾತನಾಡಿ ನೀರು ಹರಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಕಲಿಕೇರಿ ಗ್ರಾಮಸ್ಥರು ಗ್ರಾಮ ಪಂಚಾಯತ ಅಧ್ಯಕ್ಷರ ನೇತೃತ್ವದಲ್ಲಿ ನಾಡಿನ ಖ್ಯಾತ ನೇತೃ ತಜ್ಞ ಕಾಂಗ್ರೆಸ್ ಮುಖಂಡ ಡಾ. ಪ್ರಭುಗೌಡ ಲಿಂಗದಳ್ಳಿ ಇವರನ್ನು ಸನ್ಮಾನಿಸಿ ಅಭಿನಂದಿಸಿದರು.  

ಕಲಕೇರಿ ಜಿಲ್ಲಾ ಪಂಚಾಯತ ಭಾಗದ ಗ್ರಾಮಗಳಲ್ಲಿ ಬರಗಾಲದಿಂದಾಗಿ ಜನರಿಗೆ ಹಾಗೂ ಧನಕರುಗಳಿಗೆ ಕುಡಿಯುವ ನೀರಿನ ತೀವ್ರ ತೊಂದರೆ ಇತ್ತು ಈ ಗಂಭೀರ ಸಮಸ್ಯೆಯನ್ನು ದೂರೀಕರಿಸಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಕುದುರೆ ಗೊಂಡ ಕೆರೆಗೆ ನೀರಹರಿಸಲು ಸಹಕರಿಸಬೇಕೆಂದು ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರ ನಿಯೋಗ ಡಾ.ಪ್ರಭುಗೌಡರಿಗೆ ಮನವಿ ಮಾಡಿತ್ತು ಇದಕ್ಕಾಗಿ ಡಾ. ಪ್ರಭುಗೌಡರು ಸಚಿವರಾದ ಎಂಬಿ ಪಾಟೀಲರೊಂದಿಗೆ ಮಾತನಾಡಿ ಕೆರೆಗೆ ನೀರು ಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಪ್ರಯತ್ನದ ಪ್ರತಿಫಲವಾಗಿ ಇದೀಗ ಕಳೆದ ನಾಲ್ಕು ದಿನಗಳಿಂದ ಕೆರೆಗೆ ನೀರು ಹರಿದು ಬಂದು ಈ ಭಾಗದ ಜನರು ಹಾಗೂ ರೈತರು ಸಂತೋಷ ಪಡುವಂತಾಗಿದೆ. ಮುಖಂಡ ಡಾ. ಪ್ರಭುಗೌಡರ ಈ ಮಾನವೀಯತೆಯ ಸಹಕಾರಕ್ಕಾಗಿ ಕಲ್ಕೇರಿ ಗ್ರಾಮದ ಗ್ರಾಮಸ್ಥರು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ಸದಸ್ಯರ ನೇತೃತ್ವದಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.  

ಈ ಸಮಯದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ರಾಜ ಅಹ್ಮದ್ ಶಿರಸಗಿ, ಉಪಾಧ್ಯಕ್ಷ ಪರುಷರಾಮ ದೊರೆಗೋಳ, ದೇವರ ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರಸೇಠ ಬೇಪಾರಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೆಬೂಬ ಮೇಲಿನಮನಿ, ಮುಖಂಡರಾದ ಜಹಾಂಗೀರ ಸಿರಸಗಿ, ಚಾಂದಪಾಷಾ ಹವಾಲ್ದಾರ, ನಬಿಲಾಲ ನಾಯ್ಕೋಡಿ, ಸಂಜು ಪವಾರ, ದೇವೇಂದ್ರ ಬಡಿಗೇರ, ಹುಸೇನ ದೊಡಮನಿ, ಹಾಗೂ ಶಫಿಕ ಸಿಪಾಯಿ ಇದ್ದರು.