ವಿಜಯಪುರ

ನಿವೃತ್ತ ಮುಖ್ಯ ಶಿಕ್ಷಕ ಎಲ್‌.ಆರ್‌. ಕೆಲವಡಿ ಅವರಿಗೆ ಅಭಿನಂದನಾ ಸಮಾರಂಭ

ನಿವೃತ್ತ ಮುಖ್ಯ ಶಿಕ್ಷಕ ಎಲ್‌.ಆರ್‌. ಕೆಲವಡಿ ಅವರಿಗೆ ಅಭಿನಂದನಾ ಸಮಾರಂಭ

ಕೋಲಾರ 10:  ಪಟ್ಟಣದ ಸಮುದಾಯ ಭವನದಲ್ಲಿ ವಿವಿಧ ಸಂಘಟನೆಗಳು ಹಾಗೂ ಪಟ್ಟಣದ ಗುರುಹಿರಿಯರ ನೇತೃತ್ವದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಎಲ್‌.ಆರ್‌. ಕೆಲವಡಿ ಅವರ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ದೇಸಾಯಿ, “ಸರ್ಕಾರಿ ಕೆಲಸವೆಂದರೆ ದೇವರ ಕೆಲಸ ಎಂಬ ಭಾವನೆ ಎಲ್ಲ ನೌಕರರಲ್ಲೂ ಇರಬೇಕು. ಅದರಲ್ಲೂ ಶಿಕ್ಷಕರ ಕಾರ್ಯವು ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದೆ. ಆದ್ದರಿಂದ ಶಿಕ್ಷಕರು ತಮ್ಮ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು” ಎಂದು ಕಿವಿಮಾತು ಹೇಳಿದರು.  

ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಾ ಕಲಬುರಗಿ, ಶಿಕ್ಷಣ ಇಲಾಖೆಯ ಎಲ್ಲ ಸಿಬ್ಬಂದಿಯೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವೇಂದ್ರ ಬಡಿಗೇರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೀನೀತ ದೇಸಾಯಿ, ಎಚ್‌.ಜಿ. ಮಿರ್ಜಿ, ಸಿ.ಆರ್‌. ಓಣಿ, ಟಿ.ಟಿ. ಹಗೆದಾಳ, ಶರಣು ಸಾಹುಕಾರ, ಪೀರಮಹ್ಮದ್ ಗಿರಗಾಂವಿ, ಸುನೀಲ್ ನಾಯಕ್, ವಿ.ಎಚ್‌. ಪುರೋಹಿತ್, ಶಿವಶರಣ ತಡಲಗಿ, ಸಂಗಮೇಶ ಜಂಗಮ ಶೆಟ್ಟಿ, ಆನಂದ ಪವಾರ್, ಎಂ.ಎಚ್‌. ಜಮುನ, ಟಿ.ಪಿ. ದಳವಾಯಿ, ಅಶೋಕ ಗಿಡ್ಡಪ್ಪಗೋಳ, ಜಿ.ಜಿ. ಕುಲಕರ್ಣಿ, ಶ್ರೀಕಾಂತ ಪಾರಗೋಂಡ, ಕೃಷ್ಣಾ ರಾಜಪೂತ, ಟಿ.ಕೆ. ಮಕಾನದಾರ, ಎನ್‌.ಎ. ಬನಸೋಡೆ, ಬಸವರಾಜ ಮಮದಾಪೂರ, ಆರ್‌.ಎಸ್‌. ಗಿಡ್ಡಪ್ಪಗೋಳ, ಬಿ.ಎಸ್‌. ಹಂಗರಗಿ ಹಾಗೂ ಬಿ.ಎಸ್‌. ನಿಂಬಾಳ್ಕರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಶಿಕ್ಷಕರು ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ