ಮೋಹನ ನಿಂಗಪ್ಪ ದಂಡಿನಗೆ ಸನ್ಮಾನ
Felicitation Mohana Ningappa's Dandin
ಹಾವೇರಿ 11: ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ(ಆಡಳಿತ) ಉಪನಿರ್ದೇಶಕರಾಗಿ ವರ್ಗಾವಣೆಯಾಗಿ ಆಗಮಿಸಿದ ಮೋಹನ ನಿಂಗಪ್ಪ ದಂಡಿನ ಅವರನ್ನು ಜಿಲ್ಲಾಡಳಿತ ಭನವದ ಶಿಕ್ಷಣ ಇಲಾಖೆಯ ಕಛೇರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ ಮಾತನಾಡಿ ಹಾವೇರಿ ಜಿಲ್ಲೆಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಆಗಮಿಸಿದ ಮೋಹನ ನಿಂಗಪ್ಪ ದಂಡಿನ ಅವರನ್ನು ಡಿಎಸ್‌ಎಸ್ ಹಾಗೂ ಜಿಲ್ಲೆಯ ಪರವಾಗಿ ಸ್ವಾಗತಿಸುತ್ತೇವೆ. ತಮ್ಮ ಸೇವೆ ಜಿಲ್ಲೆಗೆ ಹೆಚ್ಚು ಸಲ್ಲಿಕೆಯಾಗಲಿ.ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾವೇರಿ ಜಿಲ್ಲೆ ಉನ್ನತ ಸ್ಥಾನ ಗಳಿಸಲು ತಮ್ಮ ಆಡಳಿತ ವ್ಯವಸ್ಥೆ ಸಹಕಾರಿಯಾಗಲಿ ಎಂದು ಉಡಚಪ್ಪ ಮಾಳಗಿ ಅವರನ್ನು ಸ್ವಾಗತಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಾಪುರ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ, ಕರಾಟೆ ಅಸೋಶೆಷನ್ ಅಧ್ಯಕ್ಷರಾದ ಮಂಜುನಾಥ ಕೆರೆಕೊಪ್ಪ ಮುಖಂಡರಾದ ಹರೀಶ ಮಾಳಗಿ, ಹನುಮಂತಪ್ಪ ಹೌಂಸಿ, ಫಕ್ಕಿರೇಶ ಹರಿಜನ, ಪ್ರದೀಪ ಉಪ್ಪಾರ, ಶ್ರೀಧರ ಬ್ಯಾಡಗಿ, ಗಂಗಾಧರ ಜೆಡಿಮಠ ಸೇರಿದಂತೆ ಅನೇಕರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 