ಧಾರವಾಡ 18: ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ದಿ.15ರಂದು ಸಾಧನಕೇರಿಯ ಬೇಂದ್ರೆ ಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಭಾವಗೀತ ಗಾಯನ ಸಂಜೆ ಕಾರ್ಯಕ್ರಮವು ವೈವಿಧ್ಯಮಯ ಗೀತೆಗಳ ಪ್ರಸ್ತುತಿಯೊಂದಿಗೆ ಯಶಸ್ವಿಯಾಗಿ ಜರುಗಿತು.
ಸಿರಸಿಯ ಹಿರಿಯ ಗಾಯಕ ಡಾ.ಕೃಷ್ಣಮೂತರ್ಿ ಭಟ್ಟ ಅವರು ಅಂಬಿಕಾತನಯದತ್ತರ ರಚನೆಗಳಾದ ಮೂಡಲ ಮನೆಯಾ, ಕಬ್ಬಿಣ ಕೈಕಡಗ ಕುಣಿಕೋಲು ಕೂದಲ, ಕೊಡುವುದೇನು ಕೊಂಬುದೇನು, ದೇಹ ಒಂದು ದೇವವೀಣೆ ಹಾಗೂ ಕನ್ನಡದ ಹಿರಿಯ ಕವಿಗಳ ಜನಪ್ರಿಯ ಗೀತೆಗಳಾದ ನನ್ನೀ ಜೀವನ ಸಮುದ್ರ ಯಾಣಕೆ, ನಿನ್ನ ಪ್ರೀತಿಗೆ ಅವರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ, ಕವಿಯ ಕನಸಿನ ಎದೆಯ ಪರದೆಯ ಸರಸಿ, ತಂಗಿಯ ನೆನೆದರ ತೊಂದರೆಯು ನೀಡುವುದು ಮುಂತಾದ ಕವಿತೆಗಳನ್ನು ಅತ್ಯಂತ ಪ್ರೌಢಿಮೆಯಿಂದ ಹಾಡಿ ಶ್ರೋತುೃಗಳನ್ನು ಮುದಗೊಳಿಸಿದರು.
ತಬಲಾದಲ್ಲಿ ಅಲ್ಲಮಪ್ರಭು ಕಡಕೋಳ ಹಾಗೂ ಹಾಮರ್ೊನಿಯಂದಲ್ಲಿ ಶರಣಬಸಯ್ಯ ಹಿರೇಮಠ ಉತ್ತಮ ಸಾಥ್ ನೀಡಿದರು. ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ. ಸತೀಶ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಗಣ್ಯರಾದ ನರಸಿಂಹ ಪರಾಂಜಪೆ, ಡಾ.ಬಸವರಾಜ ಡೋಣೂರ, ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಹ.ಶಿ.ಬೈರನಟ್ಟಿ, ಕೆ.ವಿ.ಹಾವನೂರ, ಬಸವರಾಜ ಪೊಲೀಸ್ಗೌಡರ, ಚಂದ್ರಶೇಖರ ನಸಬಿ, ಪುನರ್ವಸು ಬೇಂದ್ರೆ, ದಮಯಂತಿ ನರೆಗಲ್ಲ, ಡಾ.ಶ್ರೀನಿವಾಸ ದೇಶಪಾಂಡೆ, ಸಿ.ಐ.ಬುಯ್ಯಾರ, ಸುರೇಶ ಹಿರೇಮಠ, ಎಸ್.ಎಸ್.ಬಂಗಾರಿಮಠ ಮುಂತಾದವರು ಉಪಸ್ಥಿತರಿದ್ದರು.