ಕುರಿ ಕದ್ದುಕೊಂಡು ಸಾಗುತ್ತಿದ್ದ ಕಳ್ಳರನ್ನು ಹಿಡಿದ ರೈತ
Farmer catches thieves stealing sheep
ಲೋಕದರ್ಶನ ವರದಿ
ಇಂಡಿ, 09 : ದ್ವಿಚಕ್ರ ವಾಹನದ ಮೇಲೆ ಕುರಿ ಕದ್ದುಕೊಂಡು ಸಾಗುತ್ತಿದ್ದ ಕಳ್ಳರನ್ನು ರೈತನೋರ್ವ ಸಿನಿಮಿಯ ರೀತಿಯಲ್ಲಿ ವಾಹನದ ಮೇಲೆ ಬೆನ್ನಟ್ಟಿದಾಗ ಕುರಿಯನ್ನು ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.
ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಂತಿ ನಗರದಲ್ಲಿರುವ ಶ್ರೀನಿವಾಸ ತಳವಾರ ಎಂಬ ರೈತನ ಮನೆಯ ಮುಂದೆ ಕಟ್ಟಿರುವ ಕುರಿಯನ್ನು ಬಿಚ್ಚಿಕೊಂಡು ಕಳ್ಳರು ದ್ವಿಚಕ್ರವಾಹನದಲ್ಲಿ ಓಡಿ ಹೋಗುತ್ತೀರುವ ಸಂದರ್ಭದಲ್ಲಿ ಅವರನ್ನು ರೈತ ಶ್ರೀನಿವಾಸ್ ತಳವಾರ ದ್ವಿಚಕ್ರದ ವಾಹನದ ಬೆನ್ನಟ್ಟಿ ಅವರನ್ನು ಹಿಡಿಯಲು ಪ್ರಯತ್ನ ಮಾಡಿದ್ದಾರೆ. ಆದರೆ ಕಳ್ಳರು ಇಂಡಿ ನಗರದ ಅಗ್ನಿಶಾಮಕ ಠಾಣೆ ಹತ್ತಿರ ಕುರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.ಒಂದೇ ದ್ವೀಚಕ್ರವಾಹನದಲ್ಲಿದ್ದ ಮೂವರು ಕಳ್ಳರು ವೆಹಿಕಲ್ ಸಂಖ್ಯೆ ಕೆಎ 28 ಕ್ಯೂ 5523 ಹೊಂದಿದ್ದು ಇಂಡಿ ನಗರ ಸೇರಿಕೊಂಡು ಪರಾರಿಯಾಗಿದ್ದಾರೆ. ಇಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 