ಈರಣ್ಣ ತೆಲ್ಲೂರ ಅವರಿಗೆ ಸತ್ಕರಿಸಿ ಬೀಳ್ಕೊಡುಗೆ
Farewell to Iranna Tellura
ಲೋಕದರ್ಶನ ವರದಿ
ಇಂಡಿ 27 : ತಾಲೂಕಿನ ಅಹಿರಸಂಘ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮತ್ತು ಅಹಿರಸಂಘ ಕಬ್ಬು ಬೆಳೆಗರಾರ ಸಹಕಾರ ಸಂಘದ ವತಿಯಿಂದ ಸೇವಾ ನಿವೃತ್ತಿ ಹೊಂದಿದ ಬಿಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಈರಣ್ಣ ತೆಲ್ಲೂರ ಅವರಿಗೆ ಸತ್ಕರಿಸಿ ಬಿಳ್ಕೊಡಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಈರಣ್ಣ ತೆಲ್ಲೂರ, ವಿಜಯಪುರ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬಲಿಷ್ಠವಾಗಿದ್ದು, ಸಹಕಾರಿ ಧುರಿಣರು, ಮಾಜಿ ಸಚಿವರು, ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಶಾಸಕರಾದ ಶಿವಾನಂದ ಪಾಟೀಲ ಇವರ ದೂರ ದೃಷ್ಟಿ ಹಾಗೂ ಮುಂದಾಳತ್ವದಲ್ಲಿ ಪ್ಯಾಕ್ಸುಗಳು ಮತ್ತು ಡಿಸಿಸಿ ಬ್ಯಾಂಕು ಗಮನಾರ್ಹ ಪ್ರಗತಿ ಸಾಧಿಸಿವೆ. ಸಹಾರ ಸಂಘ ಸಂಸ್ಥೆಗಳು ರೈತರು ಮತ್ತು ಜನತೆಗೆ ಸಾಕಾಲಿಕವಾಗಿ ಉತ್ತಮ ಸೇವೆ ನೀಡುತ್ತಿರುವದು ಸಂತಸದ ಸಂಗತಿ.
ಅಹಿರಸಂಘ ಒಂದೇ ಗ್ರಾಮದಲ್ಲಿ ಎರಡೂ ಸಂಘಗಳು ಉತ್ತಮವಾಗಿ ಲಾಭದಲ್ಲಿದ್ದು ’ಅ ವರ್ಗದಲ್ಲಿರುವದು ವಿಶೇಷವೆಂದು ಎರಡೂ ಸಂಘಗಳು ಉತ್ಯುಂಗಕ್ಕೇರಲಿ ಎಂದು ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೆಂಕಟೇಶ ಕುಲಕರ್ಣಿ ಮಾತನಾಡಿ, ಐ.ಎನ್. ತೆಲ್ಲೂರ ಇವರು ಕಳೆದ 3 ದಶಕಗಳಿಂದ ಪ್ರತಿಷ್ಟಿತ ವಿಜಯಪುರ ಡಿಸಿಸಿ ಬ್ಯಾಂಕಿನಲ್ಲಿ ಪ್ರಾಮಾಣಿಕ, ನಿಷ್ಠೆಯಿಂದ ಸೇವೆ ಸಲ್ಲಿಸಿ, ಎಲ್ಲ ಸಹಕಾರ ಸಂಘ ಸಂಸ್ಥೆಗಳು ಹಾಗೂ ಗ್ರಾಹಕರು ಮತ್ತು ರೈತರ ಮೆಚ್ಚುಗೆಗೆ ಪಾತ್ರರಾಗಿದ್ದು, ಅವರ ನಿಸ್ವಾರ್ಥ ಸೇವೆ ಸ್ಮರಣಿಯವಾಗಿದೆ ಎಂದರು.
ಸಮಾರಂಭದಲ್ಲಿ ಅಹಿರಸಂಘ ಕಬ್ಬು ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ, ನ್ಯಾಯವಾದಿ ಎಸ್.ಬಿ. ಬೂದಿಹಾಳ ಇವರು ಅಧಿಕಾರಿಗಳ ಸಹಕಾರ, ಮಾರ್ಗದರ್ಶನದಿಂದ ಸಹಕಾರ ಸಂಸ್ಥೆ ಬೆಳೆಯಲು ಸಾಧ್ಯ ಈ ಡಿಸೆಯಲ್ಲಿ ತೆಲ್ಲೂರ ರವರ ಸೇವೆ ನಮ್ಮ ಸಂಘಗಳ ಬೆಳವಣಿಗೆಗೆ ಕಾರಣವಾಗಿದೆ ಎಂದು ತಿಳಿಸಿ ಶ್ರೀಯುತರ ನಿವೃತ್ತಿ ಜೀವನ ಸುಖಕರವಾಹಗಿರಲಿ ಎಂದರು. ಸಮಾರಂಭದಲ್ಲಿ ಸಂಘಗಳ ನಿರ್ದೇಶಕರು, ಸಿಬ್ಬಂದಿ ವರ್ಗದವರು, ಹಿರಿಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಹೂವಣ್ಣ ಡೆಂಗಿ ಇವರು ಸ್ವಾಗತಿಸಿದರು, ರವಿಕಾಂತ ಬಿರಾದಾರ ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 