ಖ್ಯಾತ ಬಾಡಿಬಿಲ್ಡರ್ ಜಸ್ಟಿನ್ ವಿಕ್ಕಿ ದುರಂತ ಅಂತ್ಯ:210 ಕೆಜಿ ವೈಟ್ ಲಿಫ್ಟಿಂಗ್ ವೇಳೆ ಘಟನೆ

ಬಾಲಿ ಜು.22: ಖ್ಯಾತ ಬಾಡಿಬಿಲ್ಡರ್, ಫಿಟ್ನೆಸ್ ತರಬೇತುದಾರ ಜಸ್ಟಿನ್ ವಿಕ್ಕಿ ದುರಂತ ಅಂತ್ಯ ಕಂಡಿದ್ದಾರೆ. ಹಲವು ಬಾಲಿಬಿಲ್ಡಿಂಗ್ ಶೋ ಮೂಲಕ ಖ್ಯಾತಿ ಗಳಿಸಿದ ಜಸ್ಟಿನ್ ವಿಕ್ಕಿ, ಜಿಮ್ನಲ್ಲಿ ಬರೋಬ್ಬರಿ 210 ಕೆಜಿ ಭಾರ ಎತ್ತಲು ಹೋಗಿ ಎಡವಟ್ಟು ಮಾಡಿದ್ದಾರೆ. ಅತೀವ ಭಾರ ಎತ್ತುವ ವೇಳೆ ಕತ್ತು ಮುರಿತಕ್ಕೊಳಗಾಗಿದೆ. ಇದರಿಂದ ಜಸ್ಟಿನ್ ವಿಕ್ಕಿ ದುರಂತ ಸಾವು ಕಂಡಿದ್ದಾರೆ. 33 ವರ್ಷದ ಜಸ್ಟಿನ್ ವಿಕ್ಕಿ ಇಂಡೋನೇಷಿಯಾದ ಖ್ಯಾತ ಬಾಡಿಬಿಲ್ಡರ್ ಸಾವಿಗೆ ದೇಶದ ವಿದೇಶದ ಹಲವರು ಸಂತಾಪ ಸೂಚಿಸಿದ್ದಾರೆ. 

ಬರೋಬ್ಬರಿ 210 ಕೆಜಿ ಭಾರ ಎತ್ತಲು ಮುಂದಾಗಿದ್ದರು. ಸಾಮಥ್ರ್ಯಕ್ಕೂ ಮೀರಿದ ಸಾಹಸ ಮಾಡುವಾಗ ವಿಕ್ಕಿ ಸಮತೋಲನ ತಪ್ಪಿದೆ. ಇದರಿಂದ ಜಸ್ಟಿನ್ ವಿಕ್ಕಿ ಹಿಂಭಾಗಕ್ಕೆ ಜಾರಿದ್ದಾರೆ. ಇದರಿಂದ ಹಿಂಭಾಗದಲ್ಲಿದ್ದ ತರಬೇತುದಾರ ಕೂಡ 210 ಕೆಜಿ ಭಾರವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಬ್ಯಾಲೆನ್ಸ್ ತಪ್ಪಿದ ಬೆನ್ನಲ್ಲೇ ವೈಟ್ ಲಿಫ್ಟಿಂಗ್ ಜಾರಿದೆ. ಇದರಿಂದ ಜಸ್ಟಿನ್ ವಿಕ್ಕಿ ಕತ್ತು ಮುರಿತಕ್ಕೊಳಗಾಗಿದೆ. ಇನ್ನು ಮೆದುಳು ಸಂಪಕರ್ಿಸುವ ನರಗಳಿಗೆ ಸಮಸ್ಸೆಯಾಗಿದೆ. 

ಕುಸಿದು ಬಿದ್ದ ಜಸ್ಟಿನ್ ವಿಕ್ಕಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ತುತರ್ು ನಿಘಾ ಘಟಕ್ಕೆ ದಾಖಲಿಸಿದ ವಿಕ್ಕಿಗೆ ವೈದ್ಯರು ತ್ವರಿತ ಶಸ್ತ್ರಚಿಕಿತ್ಸೆಗೆ ಮುಂದಾದರು. ಆದರೆ ಶಸ್ತ್ರಚಿಕಿತ್ಸೆ ವೇಳೆ ಜಸ್ಟಿನ್ ವಿಕ್ಕಿ ದುರಂತ ಅಂತ್ಯಕಂಡಿದ್ದಾರೆ.