ವಸ್ತುಸ್ಥಿತಿ ಆಧಾರಿತ ಸಾಹಿತ್ಯ: ಇಂದಿನ ಅಗತ್ಯ
Fact-based Literature: The Need of the Hour
ಲೋಕದರ್ಶನ ವರದಿ
ಹೊಸಪೇಟೆ 9 : ವಸ್ತುಸ್ಥಿತಿ ಆಧಾರಿತ ಸಾಹಿತ್ಯ ದಿಂದ ಸಮಾಜದಲ್ಲಿ ಸಾಕಷ್ಟು ಸ್ಥಿತ್ಯಂತರಗಳು ಆಗಲು ಸಾಧ್ಯವಿದೆ ಎಂದು ಹಿರಿಯ ಕವಿ ಜಂಬುನಾಥ ಹಿರೇಮಠ ತಿಳಿಸಿದರು. ಚಿತ್ತವಾಡ್ಗಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆ.9 ರಂದು ಬೆ.10.30ಕ್ಕೆ ವಿಜಯನಗರ ಕನ್ನಡದ ಕಟ್ಟೆ ಸಂಸ್ಥೆಯಿಂದ ನಡೆದ 10ನೇ ಮಾಸಿಕ ಚಿಂತನ ಕಾರ್ಯಕ್ರಮದಲ್ಲಿ ಕವಿ ಜಿ.ಯರಿಸ್ವಾಮಿರವರ ಮಧ್ಯೆ ಹಾಗೇ ಉಳಿದಿದ್ದೇವೆ ಎನ್ನುವ ಪುಸ್ತಕ ಕುರಿತು ಮಾತನಾಡಿ, ಸಮಾಜದಲ್ಲಿ ಬವಣೆಗಳು, ಸಂಕಷ್ಟಗಳು, ಆರ್ಥಿಕ ಅಧಃಪತನಗಳು, ನಿರುದ್ಯೋಗ, ಬಡತನ, ರಾಜಕೀಯ ದಿವಾಳಿತನ, ಕೋಮುವಾದ, ಜಾತಿ ವೈಶಮ್ಯ, ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವುದು ಹೀಗೆ ಅನೇಕ ಜ್ವಾಲಂತ ಸಮಸ್ಯೆಗಳ ಬಗ್ಗೆ ಇಂದಿನ ಬರಹಗಾರರು ತಮ್ಮ ತೀಕ್ಷ್ಣವಾದ ಬರವಣಿಗೆಗಳ ಮುಖಾಂತ ತಿದ್ದುವ ಅನಿವಾರ್ಯತೆ ಇದೆ ಎಂದು ತಿಳಿಸಿ, ಜಿ.ಯರಿಸ್ವಾಮಿರವರ ಐದು ಕವನಗಳನ್ನು ವಿಮರ್ಶಿಸಿ ಜಂಬುನಾಥ ಹೆಚ್.ಎಂ. ಮಾತನಾಡಿದರು.
ಜಿ.ಯರಿಸ್ವಾಮಿಯವರ ಅನೇಕ ಕವನಗಳು ಅಮೇರಿಕಾದ ಕವಿ ವಾಲ್ಟ್ ವೈಟ್ಮ್ಯನ್ರವರ ಕವಿತೆಯಂತೆ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಿವೆ ಎಂದು ಕವಿಯತ್ರಿ ಹೆಚ್. ಕವಿತಾ ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದರು. ಕವಿಯತ್ರಿ ನೂರ್ ಜಹಾನ್, ಶೀಲಾ ಬಡಿಗೇರ, ಕವಿ ವಿಶಾಲ್ ಮ್ಯಾಸರ್, ಕೆ.ಎಂ.ಬಸವರಾಜ, ಸೊ.ದ.ವೀರುಪಾಕ್ಷಗೌಡ, ಉಪನ್ಯಾಸಕ ಜಗದೀಶ್ ಬೆನ್ನೂರ, ದಯಾನಂದ ಕಿನ್ನಾಳ, ಕಿಚಿಡಿ ಚೆನ್ನಪ್ಪ ಇವರು ಜಿ.ಯರಿಸ್ವಾಮಿಯವರ ಅನೇಕ ಕವನಗಳ ಕುರಿತು ವಿಮರ್ಶಾತ್ಮಕವಾಗಿ ಮಾತನಾಡಿದರು. ಮಾಸಿಕ ಚಿಂತನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗೋವಿಂದಪ್ಪ, ನಾಗರಾಜ ಮತ್ತು ಹೆಚ್.ರಾಘವೇಂದ್ರ ಉಪಸ್ಥಿತರಿದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆ; ಕಾಣೆಯಾದ ನಾಟಕ, 6 ತಿಂಗಳ ಬಳಿಕ ಪ್ರಕರಣ ಬಯಲು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 