ಅತಿ ಮೊಬೈಲ್ ಫೋನ್ ಬಳಕೆ ಆರೋಗ್ಯಕ್ಕೆ ಮಾರಕ: ತುಷಾರ ಕುಲಕರ್ಣಿ

Excessive mobile phone use is harmful to health: Thushara Kulkarni

ಲೋಕದರ್ಶನ ವರದಿ 

ಅತಿ ಮೊಬೈಲ್ ಫೋನ್ ಬಳಕೆ ಆರೋಗ್ಯಕ್ಕೆ ಮಾರಕ: ತುಷಾರ ಕುಲಕರ್ಣಿ  

ಬೆಳಗಾವಿ 24: ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್‌ನ್ನು ಅತಿಯಾಗಿ ಬಳಸುತ್ತಿದ್ದಾರೆ. ಮೋಬೈಲ್ ಇಲ್ಲದೆ ಒಂದು ನಿಮಿಷ ಕೂಡ ಇರುವುದು ಇಂದಿನವರಿಗೆ ಕಷ್ಟವೆನಿಸುತ್ತಿದೆ. ಆದರೆ ಇದು ಯುವ ಜನಾಂಗದ ಆರೋಗ್ಯಕ್ಕೆ ಮಾರಕವಾಗಿದೆ ಎಂದು ತುಷಾರ್ ಎಸ್‌. ಕುಲಕರ್ಣಿ ಕಳವಳ ವ್ಯಕ್ತಪಡಿಸಿದರು. 

 ಎಸ್‌.ಜಿ.ಬಿ.ಐ.ಟಿ.ಯ ಕಾಯಕ ಕ್ಲಬ್, ಬೆಳಗಾವಿಯ ಎಸ್‌.ಜಿ. ಬಾಳೇಕುಂದ್ರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗಾಗಿ ದಿ. 23ರಂದು ಸಂಬರಗಿಮಠ ಸೆಮಿನಾರ್ ಹಾಲ್‌ನಲ್ಲಿ ದಿ ಸ್ಮಾರ್ಟ್‌ ಮಾನ್ಸ್ಟರ್, ದಿ ಸೀರಿಯಸ್ ಚಾಲೆಂಜಸ್ ಫಾರ್ ಯೂತ್" ಎಂಬ ವಿಷಯದ ಕುರಿತು ತಜ್ಞರ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.  

ಹೆಚ್ಚಿನ ಫೋನ್ ಬಳಕೆಯು ಮೆದುಳಿಗೆ ಹಾನಿ ಮಾಡುತ್ತದೆ. ನಿದ್ದೆ ಹಸಿವು, ಕಣ್ಣಿ ಆರೋಗ್ಯದ ಮೇಲೂ ಪರಿಣಾಮ ಉಂಟಾಗಿ ಒಟ್ಟಾರೆ ಅನೇಕ ಯುವ ಮೊಗ್ಗುಗಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಮೊಬೈಲ್ ಫೋನ್ ಬಳಕೆಯಲ್ಲಿನ ಗಂಭೀರ ಸಮಸ್ಯೆಗಳನ್ನು ವಿವರಿಸಿದರು. 

ಎಸ್‌.ಜಿ.ಬಿ.ಐ.ಟಿ.ಯ ಡಾ. ಎಫ್‌.ವಿ. ಮಾನ್ವಿ, ಪ್ರಾಂಶುಪಾಲ ಡಾ. ಬಿ. ಆರ್‌. ಪಟಗುಂದಿ, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ಆರ್‌. ಎಂ. ಗಲಗಲಿ, ಫ್ಯಾಕಲ್ಟಿ ಸಂಯೋಜಕರು ಪ್ರೊ. ಮಲ್ಲಿಕಾರ್ಜುನ್ ಭಗವತಿ ಮತ್ತು ಹೇಮಲತಾ ಎಚ್ ಮತ್ತು ವಿದ್ಯಾರ್ಥಿ ಸಂಯೋಜಕ ಆನಂದ್ ಶಿವಯೋಗಿಮಠ ಉಪಸ್ಥಿತರಿದ್ದರು.  

ವಿನಯಾ ಬಿ. ಗಲಗಲಿ ಮತ್ತು ವಿನುತಾ ಬಿ. ಗಲಗಲಿ ನಿರೂಪಿಸಿ, ವಂದಿಸಿದರು.