ಜ್ಞಾನಜ್ಯೋತಿ ಕನ್ನಡ ಮಾಧ್ಯಮ, ಪ್ರಿನ್ಸ್‌ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Excellent performance of Gyanajyothi Kannada medium, Prince English medium students

 ಜ್ಞಾನಜ್ಯೋತಿ ಕನ್ನಡ ಮಾಧ್ಯಮ, ಪ್ರಿನ್ಸ್‌ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ  

ದೇವರಹಿಪ್ಪರಗಿ 04: ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ಜ್ಞಾನಜ್ಯೋತಿ ಕನ್ನಡ ಮಾಧ್ಯಮ ಹಾಗೂ ಪ್ರಿನ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ನಾನಾಗೌಡ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಪ್ರಿನ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಪವಿತ್ರಾ ಯಲ್ಲಪ್ಪ ದೇವಣಗಾಂವ ಶೇ.95 ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಭರತ ಸಂಗಪ್ಪ ಬಿಜ್ಜೂರ ಶೇ.93.15 ರಷ್ಟು  ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ ,ಸಭಾ ಶಬ್ಬೀರ್ ಕರ್ನಾಚಿ ಶೇ.90.05 ರಷ್ಟು ಅಂಕ ಪಡೆದು ತೃತೀಯ ಸ್ಥಾನ ಹಾಗೂ ಸಾಗರ ಬಾಬುರಾಯ ಕಳಸರೆಡ್ಡಿ ಶೇ.88.12 ರಷ್ಟು ಅಂಕ ಪಡೆದಿದ್ದಾರೆ. ಜ್ಞಾನಜ್ಯೋತಿ ಪ್ರೌಢಶಾಲೆ ವಿದ್ಯಾರ್ಥಿಯಾದ ಅಭಿಷೇಕ ಮಸಬಿನಹಾಳ ಶೇ.88 ರಷ್ಟು ಅಂಕ ಪಡೆದಿದ್ದಾರೆ ಹಾಗೂ ಸಾಹಿಲ್ ಮತಾಬ್ ಗಂಗೂರ ಶೇ.85 ರಷ್ಟು ಅಂಕ ಪಡೆಯುವ ಮೂಲಕ ಜ್ಞಾನ ಜ್ಯೋತಿ ಸಮೂಹ ಸಂಸ್ಥೆಯ ಹೆಸರು ಹೆಚ್ಚಿಸಿದ್ದಾರೆ.   

2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಶಾಲೆಯ ಹೆಸರು ಹೆಚ್ಚಿಸಿದ್ದಾರೆ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ನಾನಾಗೌಡ ಪಾಟೀಲ, ಮುಖ್ಯ ಗುರುಗಳಾದ ಅಖಿಲ್ ಬಾಗವಾನ, ಜ್ಯೋತಿ ಬಾಗೇವಾಡಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಪಾಲಕರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ.