ಜೆಇಇ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ

ಬೆಳಗಾವಿ, 26: ಕೆ.ಎಲ್‌.ಇ ಸಂಸ್ಥೆಯ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು 2024 ನೇ ಸಾಲಿನ ಜೆಇಇ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ಜೆಇಇ ಪರೀಕ್ಷೆಯಲ್ಲಿ ಅತ್ಯುತ್ತಮ ಪರ್ಸ್‌ಂಟೈಲ್ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ಚಿನ್ಮಯಿ ಸಿದ್ದಾಪೂರ 98.79, ಸೃಷ್ಟಿ ರಾಯ 98.40, ಸೃಷ್ಠಿ ಹವಾಲದಾರ 98.14, ಅಶುತೋಷ ಪೊರವಾಲ್ 98.08,ಎಸ್ ದಿವ್ಯಾ 97.83, ಚಿನ್ಮಯ ಹಿರೇಮಠ97.02, ಪರ್ಸ್‌ಂಟೈಲ್ ಪಡೆದಿದ್ದಾರೆ. ಹಾಗೂ ವಾಣಿಜ್ಯ ವಿಭಾಗದಿಂದ ರಾಜ್ಯಕ್ಕೆ 8ನೇ ರಾ​‍್ಯಂಕ ಶ್ರದ್ದಾ ಮಾಡಲಗಿ ಹಾಗೂ ರಾಜ್ಯಕ್ಕೆ 9ನೇ ರಾ​‍್ಯಂಕ ಪಡೆದ ಶರ್ವರಿ ಸಾಳುಕೆ ಈ ಎಲ್ಲ ವಿದ್ಯಾರ್ಥಿಗಳಿಗೆ ಪುಷ್ಪಗುಚ್ಚ ನೀಡುವುದರ ಮೂಲಕ ಕೆ.ಎಲ್‌.ಇ ಸಂಸ್ಥೆಯ ಪರವಾಗಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು ಹಾಗೂ ಎಲ್ಲ ಉಪನ್ಯಾಸಕರು ಸಿಬ್ಬಂದಿಗಳ ಮೂಲಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.