ಬೆಳಗಾವಿ

ಸ್ಪರ್ಧಾತ್ಮಕ ಪರೀಕ್ಷೆ ಓದುಗರಿಗೆ ಉತ್ತಮ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯ: ನಾಗನೂರ

ಸ್ಪರ್ಧಾತ್ಮಕ ಪರೀಕ್ಷೆ ಓದುಗರಿಗೆ ಉತ್ತಮ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯ: ನಾಗನೂರ

ಪಾಲಬಾವಿ 12:  ಗ್ರಂಥಾಲಯಗಳಲ್ಲಿ ಕಥೆ, ಕಾದಂಬರಿಗಳು ಆಧ್ಯಾತ್ಮಿಕ ಧರ್ಮ ಗ್ರಂಥಗಳು, ಕ್ರೀಡೆಗೆ ಸಂಬಂಧಿಸಿದ ಉತ್ತಮ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಂತಹ ಓದುಗರಿಗೆ ಉತ್ತಮ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿವೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಗ್ರಂಥಾಲಯದ ಪುಸ್ತಕಗಳನ್ನು ಓದಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಪಿಡಿಓ ಬಿ.ಎಸ್‌.ನಾಗನೂರ ಹೇಳಿದರು   

ಅವರು ಗ್ರಾಪಂ ಕಪ್ಪಲಗುದ್ದಿ, ಅರಿವು ಕೇಂದ್ರ ಕಪ್ಪಲಗುದ್ದಿ ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್‌ 12ರಂದು ಮುಂಜಾನೆ 10ಗಂಟೆಗೆ ಗ್ರಂಥಾಲಯ ಚಳುವಳಿ, ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾಕ್ಟರ್ ಎಸ್‌.ಆರ್‌.ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ಗ್ರಂಥ ಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾಕ್ಟರ್ ಎಸ್‌.ಆರ್‌.ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡುತ್ತ, ಗ್ರಂಥಾಲಯದ ಬದುಕಿನ ಹಾದಿಯನ್ನೇ ಬದಲಿಸಿ, ವಿಶ್ವಕ್ಕೆ ಮಾದರಿ ಗ್ರಂಥಾಲಯ ತೋರಿಸಿದ ಮಹಾನ್ ವ್ಯಕ್ತಿ ಡಾಕ್ಟರ್ ಎಸ್‌.ಆರ್‌.ರಂಗನಾಥನ್,

ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾಕ್ಟರ್ ಎಸ್‌.ಆರ್‌.ರಂಗನಾಥನ್ ಎಂಬ ನಾಮದಿಂದಲೇ ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಚಿರಪರಿಚಿತರಾದವರು. ಗ್ರಂಥಾಲಯದಲ್ಲಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ, ಇಂದಿನ ಸಾವಿರಾರು ಗ್ರಂಥ ಪಾಲಕರಿಗೆ ಬೆಳಗಾದವರು ಎಂದು ತಿಳಿಸಿದರು. ಗ್ರಂಥಪಾಲಕಿ ಗಂಗವ್ವ ಸುಭಾನಿ, ಗ್ರಾಪಂ ಸಿಬ್ಬಂದಿಗಳಾದ ಶಂಕರ ಖಾನಗೌಡ, ರಾಜು ಹಂಚಿನಾಳ, ಸಂಗಮೇಶ ಮಂಟೂರ, ಪ್ರಕಾಶ ಅಮ್ಮನಗಿ, ರೋಹನ ಮೇತ್ರಿ ಇದ್ದರು. 


ಸುದ್ದಿ ಓದಿ