ಜೆ.ಇ.ಇ ಪರೀಕ್ಷೆಯಲ್ಲಿ ಜೆ.ಎಸ್‌.ಎಸ್‌. ಆರ್‌.ಎಸ್‌.ಹುಕ್ಕೇರಿಕರ ಕಾಲೇಜಿನ ಅತ್ಯುತ್ತಮ ಸಾಧನೆ






ಧಾರವಾಡ, 27: ನಗರದ ವಿದ್ಯಾಗಿರಿಯ ಜೆ.ಎಸ್‌.ಎಸ್‌.ಆರ್‌.ಎಸ್‌. ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯದ 2023-2024ರ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಹೆಚ್ಚಿನ ವಿದ್ಯಾರ್ಥಿಗಳು ಜೆ.ಇ.ಇ ಪರೀಕ್ಷೆಯಲ್ಲಿ ಹಾಜರಾಗಿದ್ದು, ಫಲಿತಾಂಶದಲ್ಲಿ ಈ ಕೆಳಕಂಡ 11 ವಿದ್ಯಾರ್ಥಿಗಳು ಜೆ.ಇ.ಇ. ಬಿ.ಇ/ಬಿ.ಟೆಕ್ ವಿಭಾಗದ ಮೇನ್ಸ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು, ಅಡ್ವಾನ್ಸ್‌-್ಡ ಪರೀಕ್ಷೆ ಬರೆಯುವ ಅರ್ಹತೆ ಪಡೆದಿದ್ದಾರೆ. 

Sl. No. Name of the Student Percentile

1. ಕೊಮ್ಮಾಶ್ರೀಯಾ ರೆಡ್ಡಿ 96.30 

2. ಐಮನ್ ಎ ನವಾಬ 96.16 

3. ನಿಖಿತಾ ಪಿ ಉಪ್ಪಾರ 95.837 

4. ಅಕ್ಷತ ಎ ಪುರೋಹಿತ 92.585 

5. ಮೊಹಮ್ಮದ ರಿಜ್ವಾನ ಶೇಖ 91.954 

6. ಅಬ್ದುಲ್ ಖಾದರ ಡಿ ಜಮಾದಾರ 91.916 

7. ತುಷಾರ ಸಿ ಹರಿಹರ 91.09 

8. ನಿರಜ ಶೆಟ್ಟಿ 90.992 

9. ಶ್ರದ್ಧಾ ಕುರಕುರಿ 86.59 

10. ಅಕ್ಷಯ ಪಿ ಮಾಯಾಚಾರಿ 89.66 

11. ಅನುಷಾ ಮತ್ತಿಕಟ್ಟಿ 86.338 

ಈ ವಿದ್ಯಾರ್ಥಿಗಳ ಉತ್ಕೃಷ್ಠ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಹಾಗೂ ಪ್ರಾಧ್ಯಾಪಕರನ್ನು ಜನತಾ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಉಡುಪಿಯ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಯವರು, ಕಾರ್ಯಾಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸಿದ್ದಾರೆ. ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಅವರು ಶ್ಲಾಘಿಸಿದ್ದಾರೆ. ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಭಾರತಿ ಶಾನಭಾಗ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಸಾಧನೆಗೈದ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.