ವಿಮಾನಯಾನ ಪ್ರಯಾಣಕ್ಕಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ

Exam for students for air travel

ಲೋಕದರ್ಶನ ವರದಿ 

ವಿಮಾನಯಾನ ಪ್ರಯಾಣಕ್ಕಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ 

ಕೊಪ್ಪಳ 14: ತಾಲೂಕಿನ ಬಹದ್ದೂರಬಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಬೀರ​‍್ಪ ಅಂಡಗಿ ಚಿಲವಾಡಗಿ ಅವರು ತಮ್ಮ ಸ್ವಂತ ಖರ್ಚಿನ 24 ವಿದ್ಯಾರ್ಥಿಗಳನ್ನು ಹೈದ್ರಬಾದ್‌ಗೆ ವಿಮಾನದ ಮೂಲಕ ಕರೆದುಕೊಂಡು ಹೋಗುವ ಸಲುವಾಗಿ ಸೋಮವಾರ 5 ನೇ ತರಗತಿಯಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಯಿತು. 

ಪರೀಕ್ಷೆಯು ಪಾರದರ್ಶಕವಾಗಿ ಇರಲಿ ಎಂಬ ಉದ್ದೇಶದಿಂದ ಬಹದ್ದೂರಬಂಡಿ ಶಿಕ್ಷಕರು ಪ್ರಶ್ನೆ ಪತ್ರಿಕೆಯನ್ನು ತಯಾರು ಮಾಡುವುದಲ್ಲದೇ ಪರೀಕ್ಷೆ ನಡೆಸದೇ ಹ್ಯಾಟಿ ಮುಂಡರಗಿ ಶಾಲೆಯ ಶಿಕ್ಷಕರಾದ ಕೆ.ಎಂ.ಅಲಿಯವರು ಸ್ವತ ಪ್ರಶ್ನೆ ಪತ್ರಿಕೆ ತಯಾರಿಕೆ,ಪರೀಕ್ಷೆ ನಡೆಸುವುದು ಹಾಗೂ ಮೌಲ್ಯಮಾಪನ ಮಾಡಿ 24 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 

ಬಹದ್ದೂರಬಂಡಿ ಶಾಲೆಯಲ್ಲಿ 5 ನೇ ತರಗತಿಯಿಂದ 8ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಿ ಅದರಲ್ಲಿ 5ನೇ ತರಗತಿಲ್ಲಿ 6 ವಿದ್ಯಾರ್ಥಿಗಳು,6ನೇ ತರಗತಿಯಲ್ಲಿ 6 ವಿದ್ಯಾರ್ಥಿಗಳನ್ನು,7ನೇ ತರಗತಿಯಲ್ಲಿ 6 ವಿದ್ಯಾರ್ಥಿಗಳನ್ನು ಮತ್ತು 8ನೇ ತರಗತಿಯಲ್ಲಿ 6 ವಿದ್ಯಾರ್ಥಿಗಳನ್ನು ಒಟ್ಟು 24 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯಲ್ಲಿ ಹಾಗೂ ಸ್ಪರ್ಧಾ ಮನೋಭಾವ ಮೂಡಲಿ ಎಂಬ ಉದ್ದೇಶದಿಂದ ಮುಖ್ಯೋಪಾಧ್ಯಾಯರು ಇಂತ ಕಾರ್ಯ ಕೈಗೊಂಡಿದ್ದಾರೆ.