ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಿ
ಗದಗ 23: ಗ್ರಾಮದ ಸ್ವಚ್ಛತೆಯ ಜೊತೆಗೆ ಸುತ್ತಮುತ್ತಲಿನ ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹಾಗೂ ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಿ ಎಂದು ಅಸೂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಯ ಎಸ್.ಎಚ್.ಭಜೇಂತ್ರಿ ನುಡಿದರು.
ರೋಣ ತಾಲೂಕಿನ ಅಸೂಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಗ್ರಾಮ ಸಂಪರ್ಕ ಯೋಜನೆಯಡಿ ಸರಕಾರದ ಯೋಜನೆಯಗಳ ಕುರಿತು ಜನಜಾಗೃತಿ ಮೂಡಿಸಲು ಕ್ಷೇತ್ರ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಡವಿಸೋಮಾಪುರದ ಗೋಣಿಬಸವೇಶ್ವರ ಜಾನಪದ ಮೇಳ ಜನಪದ ಸಂಗೀತಗಳ ಮೂಲಕ ಹಾಗೂ ಕೊಣ್ಣೂರು ಜೈ ಕಿಸಾನ ಯುವ ಮಂಡಳದವರು ರಾಜ್ಯ ಸರ್ಕಾರ ನೇಕಾರ ಮತ್ತು ಮೀನುಗಾರ ಸಾಲ ಮನ್ನಾ, ರೈತ ಸಮ್ಮಾನ ಯೋಜನೆ ಫಲಾನುಭವಿಗಳಿಗೆ ವಾರ್ಷಿಕ್ ಹೆಚ್ಚುವರಿ 4 ಸಾವಿರ ರೂಪಾಯ ನೀಡುತ್ತಿರುವ ಸೌಲಭ್ಯದ ಯೋಜನೆ ಸೇರಿದಂತೆ ಪ್ರತಿ ಗ್ರಾಮದ ಸ್ವಚ್ಚತೆ ಹಾಗೂ ಸರ್ಕಾರದ ದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಂ.ಟಿ.ನೇಮರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲೆಯ ಸಹ ಶಿಕ್ಷಕರಾದ ಎಮ್.ವಿ.ಮೆಣಸಗಿ, ಬಿ.ವಿ ದಿಂಡೂರು, ಎಮ್.ಬಿ.ಕಾತರಕಿ, ಬಿ.ಬಿ.ಕಮ್ಮಾರ, ಎನ್.ಎಚ್.ಗೊಂದಿ. ಜಿ.ಜಿ.ಯರಗೊಪ್ಪ, ಹಾಗೂ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಸ್.ಎನ್. ಪೋಲಿಸಗೌಡ್ರ, ಶಾಲೆಯ ವಿದ್ಯಾಥರ್ಿಗಳು ಭಾಗವಹಿಸಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 