ಕೈಮಗ್ಗ ನೇಕಾರರಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ, ಸಹಕಾರ ನೀಡಬೇಕು: ಮೀನಾಕ್ಷಿ ಬಣ್ಣದ ಬಾವಿ

ಕೈಮಗ್ಗ ನೇಕಾರರಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ, ಸಹಕಾರ ನೀಡಬೇಕು: ಮೀನಾಕ್ಷಿ ಬಣ್ಣದ ಬಾವಿ  Everyone should extend encouragement and cooperation to handloom weavers: Meenakshi Bannada Bavi

ಕೊಪ್ಪಳ 10: ನೇಕಾರಿಕೆ ವೃತ್ತಿಯಲ್ಲಿ ತಮ್ಮ ಬದುಕು ಕಟ್ಟಿಕೊಂಡಿರುವ ಕೈಮಗ್ಗ ನೇಕಾರರಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕು ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ (316) ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಬಣ್ಣದ ಬಾವಿ ಹೇಳಿದರು.  

ಇಲ್ಲಿಗೆ ಸಮೀಪದ ಭಾಗ್ಯನಗರ ಪಟ್ಟಣದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ (316) ವತಿಯಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಸ್ನೇಹ ದಿನಾಚರಣೆ ಅಂಗವಾಗಿ ಹಿರಿಯ ನೇಕಾರರನ್ನು ಸನ್ಮಾನಿಸಿ, ಅವರೊಂದಿಗೆ ಸ್ನೇಹದ ಬಾಂಧವ್ಯ ಬೆಸೆಯುವ ಮೂಲಕ ಗೌರವ ಸಲ್ಲಿಸಲಾಯಿತು. ಬಳಿಕ ನಡೆದ ಸರಳ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.  

ನೇಕಾರರ ಸಮರಾ​‍್ಣ ಮನೋಭಾವ ಹಾಗೂ ಅವರ ಅನುಭವವನ್ನು ಗೌರವಿಸುವ ಮೂಲಕ ಅವರಿಗೆ ಅಗತ್ಯ ಸಹಕಾರ ನೀಡಬೇಕು. ನೇಕಾರರು ಕೈಮಗ್ಗದಲ್ಲಿ ತಯಾರಿಸುವ ವಸ್ತ್ರಗಳನ್ನು ನಾವೂ ಖರೀದಿಸುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಆಸರೆಯಾಗಬೇಕು ಎಂದು ಮೀನಾಕ್ಷಿ ಬಣ್ಣದ ಬಾವಿ ಹೇಳಿದರು.  

ಇಡೀ ಜೀವನವನ್ನೇ ನೇಕಾರಿಕೆಗೆ ಮುಡಿಪಾಗಿಟ್ಟಿರುವ ಹಿರಿಯ ಜೀವಿಗಳನ್ನು ಕೊಪ್ಪಳ ಇನ್ನರ್ ವೀಲ್ ಕ್ಲಬ್ ವತಿಯಿಂದ ಸನ್ಮಾನಿಸಿರುವುದು ಎಲ್ಲರಿಗೂ ಸಂತಸ ಹಾಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.  

ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಶ್ರೀದೇವಿ, ಎಐಎಸ್‌ಒ ಲತಾ ಪಟ್ಟಣಶೆಟ್ಟಿ, ಎಡಿಟರ್ ಮಾಲಾ ಎಸ್‌., ಕಾಂಚಿ, ಖಜಾಂಚಿ ಶಿಲ್ಪಾ ರಾಜು ಸೇರಿದಂತೆ ಕ್ಲಬ್ ಸದಸ್ಯರು, ಮಹಿಳೆಯರು, ಗ್ರಾಮಸ್ಥರು, ನೇಕಾರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.