ಊರಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು: ಲ್ಯಾಂಡ್ ಲಾರ್ಡ್‌ ವರುಣಗೌಡ ಪಾಟೀಲ

ಶಿಗ್ಗಾವಿ 24 :ತುತ್ತು ಅನ್ನ ತಿನ್ನುತ್ತಿದ್ದೆವೆ ಎಂದರೆ ಅದು ಶ್ಯಾಡಂಬಿ ಗ್ರಾಮ ಕಾರಣ ಹಾಗಾಗಿ ಈ ಗ್ರಾಮದ ಎಲ್ಲ ಸಾಮಾಜಿಕ ಕಾರ್ಯಕ್ರಮಗಳಿಗೆ ನಾವು ಕೈಲಾದ ಸಹಾಯ ಮಾಡುತ್ತೆವೆ ಸದಾ ಗ್ರಾಮದ ಬೆನ್ನೆಲುಬಾಗಿ ಸೇವೆ ಮಾಡುತ್ತೆವೆ ಹಾಗಾಗಿ ಊರಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಲ್ಯಾಂಡ್ ಲಾರ್ಡ್‌ ವರುಣಗೌಡ ಪಾಟೀಲ ಹೇಳಿದರು. 

ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಆಯೋಜಿಸಲಾದ ಗ್ರಾಮದೇವಿ ನೂತನ ದೇವಸ್ಥಾನ ಕಳಸಾರೋಹಣ, ನೂತನದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಲೋಕಾರೆ​‍್ಣ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸುಮಾರು ವರ್ಷಗಳ ನಂತರ ಈ ಗ್ರಾಮದಲ್ಲಿ ಇಂತಹ ಐತಿಹಾಸಿಕ ಕಾರ್ಯಕ್ರಮವನ್ನು ಎಲ್ಲರು ಒಟ್ಟಾಗಿ ಸೇರಿ ಆಯೋಜನೆ ಮಾಡಿರುವುದು ಸಂತೋಷವಾಗಿದೆ. ನೂತನ ದೇವಸ್ಥಾನವನ್ನು ಕೇವಲ ಜಾತ್ರಾ ಸಮಯದಲ್ಲಿ ಮಾತ್ರ ಖಾಳಜಿ ವಹಿಸದೆ ಪ್ರತಿ ದಿನ ಅಲ್ಲಿ ಪೂಜೆ ಪುನಸ್ಕಾರ ನಡೆಯಬೇಕು ದೇವಸ್ಥಾನ ಸ್ವಚ್ಚವಾಗಿರಬೇಕು ಅದಕ್ಕಾಗಿ ನಾನು ಗ್ರಾಮದೇವಿ ದೇವಸ್ಥಾನಕ್ಕೆ ಪ್ರತಿ ತಿಂಗಳು 2000 ಸಾವಿರರೂ ವರ್ಷಕ್ಕೆ 24000 ರೂಗಳನ್ನು ಪ್ರತಿ ದಿನ ಪೂಜೆ ಪುನಸ್ಕಾರಕ್ಕಾಗಿ ದೇವಸ್ಥಾನದ ಸ್ವಚ್ಚತೆಗಾಗಿ ನೀಡುತ್ತೆನೆ ಇವತ್ತು ಸಮಾಜ ನಮ್ಮನ್ನು ಗೌರವಿಸಿ ಪ್ರೀತಿಸುತ್ತಿದೆ ಎಂದರೆ ಅದು ಶ್ಯಾಡಂಬಿ ಗ್ರಾಮ ಕಾರಣ ಎಂದರು. 

ಮಾಜಿ ಸಂಸದ ಮಂಜುನಾಥ ಕುನ್ನೂರ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿ ಗ್ರಾಮಕ್ಕೆ ಒಳ್ಳೆಯದಾಗಬೇಕು, ರೈತರಿಗೆ ಮಳೆ, ಬೆಳೆ ಸರಿಯಾಗಿ ಆಗಲಿ ಕಷ್ಟ ಕಾರ​‍್ಪಣಯಗಳನ್ನು ದೂರ ಮಾಡಲಿ ಎನ್ನುವ ಬೇಡಿಕೆ ಜನ ದೇವರ ಮುಂದೆ ಇಡುತ್ತಾರೆ ದೈವಶಕ್ತಿಯ ಆಧಾರದ ಮೇಲೆ ಭಕ್ತರ ಇಷ್ಟಾರ್ಥ ಈಡೇರುತ್ತವೆ.  ಎಂದರು. ಮೆಡಕಾಟ್ ವಿಲ್ಲಾ ಮಾಲಕರಾದ ಹೇಮಂತ ಮೋದಿಯವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಹುಬ್ಬಳ್ಳಿಯ ರುದ್ರಾಕ್ಷಿ ಮಠದ ಬಸವಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ದೇವತೆಗಳು ಜೀರ್ಣೋದ್ದಾರ ಆಗಬೇಕಾದರೆ ದೈವ ಬಲ ದೊಡ್ಡದು, ಎಲ್ಲ ಪೂಜಾ ಕೈಂಕರ್ಯ ಮಾಡಿದಾಗ ಗ್ರಾಮದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲು ಕಾರಣವಾಗುತ್ತದೆ ಎಂದರು. 

ವಿರಕ್ತಮಠ ಶಿಗ್ಗಾಂವ ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಎಲ್ಲರೂಒಟ್ಟುಗೂಡಿ, ಉಣ್ಣುವದು, ಪರಸ್ಪರ ಯೋಗಕ್ಷೇಮ ವಿಚಾರ ಮಾಡುವುದು, ಸಂತೋಷದಿಂದ ಆಚರಣೆ ಮಾಡುವುದೇ ಜಾತ್ರೆಯಾಗಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಜಾತ್ರೆಗಳು ಹದಗೆಟ್ಟಿವೆ ಹಿಂದಿನ ಪ್ರೀತಿ, ವಿಶ್ವಾಸ ಈಗಿಲ್ಲ ಎಂದರು. 

ಗ್ರಾಮದ ಮುಖಂಡರಾದ ಪರಶುರಾಮ ಕಾಳಿ ಮಾತನಾಡಿ 14 ವರ್ಷಗಳಿಂದ ದೇವೀಯ ಜಾತ್ರೆಯನ್ನು ಮಾಡಬೇಕು ದೇವಸ್ಥಾನ ಕಟ್ಟಬೇಕು, ದೇವಿ ಪ್ರಾಮಾ ಪ್ರತಿಷ್ಠಾಪನೆ ಮಾಡಬೇಕು ಎನ್ನುವ ಕನಸ್ಸು ಈಗ ಪೂರ್ಣಗೊಂಡಿದೆ. ಇದಕ್ಕೆ ನಮ್ಮೂರ ಯುವಕರ ಪಾತ್ರದೊಡ್ಡದಿದೆ. ದಾನಿಗಳು ನೀಡಿರುವ ಸಹಕಾರದಿಂದ ಈ ಕಾರ್ಯಕ್ರಮ ರೂಪುಗೊಂಡಿದೆ ಎಂದರು. 

ಮಾಜಿ ತಾಲೂಕು ಪಂಚಾಯತ್ ಸದಸ್ಯ ಈಶ್ವರಗೌಡ ಪಾಟೀಲ ಹಿರಿಯ ಪತ್ರಕರ್ತ ಬಿ.ಎಸ್ ಹಿರೇಮಠ, ಮಡ್ಲಿಗ್ರಾಮ ಪಂಚಾಯತ ಸದಸ್ಯ ರುದ್ರಗೌಡ ಪಾಟೀಲ ಮಾತನಾಡಿದರು. ಕರ್ನಾಟಕ ಜಾನಪದ ವಿವಿ ಕಿರಿಯ ಸಹಾಯಕ ಶರೀಫ ಮಾಕಪ್ಪನವರ ನಿರೂಪಿಸಿದರು, ಮಂಜುನಾಥ ಕಾಳಿ ಸ್ವಾಗತಿಸಿದರು, ಗ್ರಾಮ ಪಂಚಾಯತ ಉಪಾಧ್ಯಕ್ಷೆ ಲಕ್ಷ್ಮವ್ವ ನಡಿಗೇರ, ಸದಸ್ಯರಾದ ಬಸನಗೌಡ ಪಾಟೀಲ ಯಲ್ಲಪ್ಪ ನಡುವಿನಮನಿ, ಚಂದ್ರಣ್ಣ ನಡುವಿನಮನಿ ಜಿನ್ನಪ್ಪ ವರೂರ, ರುದ್ರ​‍್ಪ ಕಾಳಿ, ಶಿವಪ್ಪ ಈಟಿ, ತಾರಕೇಶ ಮಠದ, ಧರ್ಮಣ್ಣ ಕಿವಡನವರ, ಮಲ್ಲಿಕಾರ್ಜುನ ಅಗಸರ. ಶಿವಾನಂದ ದೊಡ್ಡಮನಿ.ನಾಗರಾಜ ಕ್ಯಾಬಳ್ಳಿ ಹಾಗೂ ಗ್ರಾಮದೇವಿ ಸೇವಾ ಸಮೀತಿಯ ಸದಸ್ಯರು ಹಾಜರಿದ್ದರು.