ಬಿಜೆಪಿ ತ್ರಿಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದರೂ ಮಹದಾಯಿ ಯೋಜನೆ ಜಾರಿ ಮಾಡುತ್ತಿಲ್ಲ : ಕೋನರಡ್ಡಿ

ನವಲಗುಂದ : ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಗಳಲ್ಲಿ ಬಿಜೆಪಿ ನೇತೃತ್ವದ ತ್ರಿಬಲ್ ಇಂಜೀನ್ ಸರ್ಕಾರವಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯೋಜನೆ ಜಾರಿ ಮಾಡುತ್ತಿಲ್ಲ ಎಂದು ನವಲಗುಂದ ವಿದಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್‌.ಹೆಚ್‌. ಕೋನರಡ್ಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದರು. 

ಅವರು ಇಂದು ನವಲಗುಂದ-ನರಗುಂದ ರೈತ ಬಂಡಾಯದ ಜುಲೈ 21ರ ನವಲಗುಂದ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರೆ​‍್ಣ ಮಾಡಿ  ನವಲಗುಂದ ಮಹಾದಯಿ ರೈತಪರ ಹೋರಾಟ ಸಮಿತಿ ವತಿಯಿಂದ ಗೌರವ ಸಲ್ಲಿಸಿ ಮಾತನಾಡಿದ ಅವರು ಮಹಾದಾಯಿ ನ್ಯಾಯಾಧೀಕರಣ ತೀರ​‍್ಿನಲ್ಲಿ ಕರ್ನಾಟಕ ರಾಜ್ಯಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿದ ನಂತರ ಗೋವಾ ಸರ್ಕಾರದ ತಕರಾರನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ಮಾಡಿ ಮಹಾದಾಯಿ ತೀರ​‍್ಿನ ಪ್ರಕಾರ ನೀರನ್ನು ಹಂಚಿಕೆ ಮಾಡಿದ ಆದೇಶದ ಪ್ರಕಾರ ಕೇಂದ್ರ ಸರ್ಕಾರಕ್ಕೆ ಅಧಿಸೂಚನೆ ಹೊರಡಿಸಲು ಆದೇಶಿಸಿದ ನಂತರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವದು ಬಾಕಿ ಇದೆ. ಪ್ರಭಾವಿ ಕೇಂದ್ರ ಸಚಿವರಾದ ಮಹಾದಾಯಿ ಯೋಜನೆ ವ್ಯಾಪ್ತಿಗೆ ಬರುವ ಪ್ರಹ್ಲಾದ ಜೋಶಿ ಅವರೇ ಅಧಿಕಾರದಲ್ಲಿದ್ದರೂ ಯೋಜನೆ ಜಾರಿಯಾಗುತ್ತಿಲ್ಲ. ಕೇಂದ್ರದಲ್ಲಿ ಹಾಗೂ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಅಧಿಕಾರದಲ್ಲಿದ್ದರೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಇನ್ನು ಉತ್ತರ ಕರ್ನಾಟಕದವರೇ ನೀರಾವರಿ ಸಚಿವರಾದ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ, ಸಕ್ಕರೆ ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ ಅವರೂ ಕೂಡ ಇದೇ ಭಾಗವದರಾಗಿದ್ದಾರೆ. 

ನಾನು ಶಾಸಕನಿದ್ದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದಾಗ ಪ್ರಧಾನಿಯವರಿಗೆ ಎರಡು ಬಾರಿ ವಿಧಾನಸಭೆಯ ಎಲ್ಲ ಸದಸ್ಯರು ಸೇರಿ ಮಹಾದಾಯಿ ಯೋಜನೆ ಜಾರಿಗೆ ಒಮ್ಮತ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಎರಡು ಬಾರಿ ಪ್ರಧಾನಮಂತ್ರಿಗಳ ಬಳಿ ನಿಯೋಗ ಕರೆದೊಯ್ಯಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೂ ಮಹಾದಾಯಿ ನ್ಯಾಯಾಧೀಕರಣ ಹಾಗೂ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಯೋಜನೆ ಜಾರಿಗೆ ಅನುಮತಿ ಸಿಕ್ಕರೂ ಕೆಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆ ಜಾರಿ ಮಾಡುತ್ತಿಲ್ಲ ಎಂದು ಕೋನರಡ್ಡಿ ಬೇಸರ ವ್ಯಕ್ತಪಡಿಸಿದರು. 

ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆ, ಅತಿವೃಷ್ಟಿ ಪರಿಹಾರ, ಬೆಲೆ ಏರಿಕೆ, ಸಾರ್ವಜನಿಕರು ಉಪಯೋಗಿಸುವ ಪದಾರ್ಥಗಳಿಗೆ ಜೆಎಸ್‌ಟಿ ಹೇರಿಕೆ ಹೀಗೆ ವಿರೋಧ ಪಕ್ಷಗಳ ಮೇಲೆ ಸೇಡಿನ ರಾಜಕಾರಣ ಮಾಡುತ್ತಾ ಸರ್ಕಾರದ ಆದೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುತ್ತಿದ್ದಾರೆ ಎಂದು ಕೋನರಡ್ಡಿ ಟೀಕಿಸಿದರು. 

ಈ ಸಂದರ್ಭದಲ್ಲಿ ನವಲಗುಂದ ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಹೋರಾಟಗಾರರಾದ ಡಿ.ಕೆ. ಹಳ್ಳದ, ಶಿವಣ್ಣ ಹುಬ್ಬಳ್ಳಿ, ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಕಲ್ಲಪ್ಪ ಹುಬ್ಬಳ್ಳಿ, ಸಿದ್ದಲಿಂಗಪ್ಪ ಮದ್ನೂರ, ಭಗವಂತ ಪುಟ್ಟಣ್ಣವರ, ಶಂಕರ​‍್ಪ ಗಾಣಿಗೇರ, ರಮೇಶ ನವಲಗುಂದ, ಪ್ರಕಾಶ ಕೊಣ್ಣೂರ, ಪ್ರದೀಪ ಲೆಂಕನಗೌಡ್ರ, ಮಲ್ಲಪ್ಪ ಕುರಹಟ್ಟಿ, ಎಮ್‌.ಎಸ್‌. ರೋಣದ, ಡಿ.ಜಿ. ಜಂತ್ಲಿ, ಬಸವರಾಜ ಬೀರಣ್ಣವರ, ಬಸಪ್ಪ ಕರ್ಲವಾಡ, ಗೀರೀಶ ಮಾಸ್ತಿ, ಸಿದ್ಲಿಂಗಪ್ಪ ಅಂಗಡಿ, ಎಸ್‌.ವಿ. ಬಳಿಗೇರ, ಉಸ್ಮಾನ ಬಬರ್ಚಿ, ದೇವೆಂದ್ರ​‍್ಪ ರೋಣದ, ಅರುಣಕುಮಾರ ಮಜ್ಜಗಿ, ಆನಂದ ಹವಳಕೋಡ, ಶರಣು ಹಿರೇಮಠ, ರಮೇಶ ಕರೆಟ್ಟನವರ, ಗುರುಶಿದ್ದಪ್ಪ ಕೊಪ್ಪದ, ಮಕ್ತುಮಸಾಬ ಹಳೇಮಸೂತಿ, ಪರ​‍್ಪ ಗಾಣಿಗೇರ, ಮೈಲಾರಿ ವೈಧ್ಯ, ಅಪ್ಪಣ್ಣ ಸುರಭಿ, ಖಾದರಸಾಬ ಬಸಾಪೂರ, ಸುರೇಶ ಮಾಗಡಿ, ಸುಲೆಮಾನ ನಾಶಿಪುಡಿ, ಅಜ್ಜು ನವಲಗುಂದ, ದ್ಯಾಮಣ್ಣ ಆಡಕಾವು, ಅಸ್ಪಾಕ ಚಾಹುಸೇನ, ನೂರಜಹಾನ ದವಲತ್ತಾರ, ನಂದಿನಿ ಹಾದಿಮನಿ, ಚಿಕ್ಕನರಗುಂದ ವಕೀಲರು, ರೇಣುಕಾ ಹೊಂಗಲ, ನವಲಗುಂದ ಹಾಗೂ ಅಣ್ಣಿಗೇರಿ ಪುರಸಭೆ ಸ್ಥಾಯಿ ಸಮೀತಿ ಚೇರಮನ್ ಸುರೇಶ ಮೇಟಿ, ಬಾಬಾಜಾನ ಮುಲ್ಲಾನವರ, ಸದಸ್ಯರುಗಳಾದ ಜೀವನ ಪವಾರ, ಮಂಜುನಾಥ ಜಾಧವ, ಮೊದೀನಸಾಬ ಶಿರೂರ, ಮಹಾಂತೇಶ ಭೋವಿ, ಹನಮಂತ ವಾಲಿಕಾರ,   ಹುಸೇನಬಿ ಧಾರವಾಡ, ಚಂದ್ರಲೇಖಾ ಮಳಗಿ, ಮಹಮ್ಮದಸಾದೀಕ ಠಾಣೇದ, ನಾಗಪ್ಪ ದಳವಾಯಿ ಹಾಗೂ ಇತರರು ಉಪಸ್ಥಿತರಿದ್ದರು.