ಪರಿಸರ ಸ್ವಚ್ಛತೆ ನಮ್ಮೆಲ್ಲರ ಕರ್ತವ್ಯ: ಅಧ್ಯಕ್ಷ ಪಾಟೀಲ
Environmental cleanliness is everyone's duty: President Patil
ತಾಳಿಕೋಟಿ 02: ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಶಿಸ್ತು ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ಪಾಟೀಲ ಬಾವೂರ ಹೇಳಿದರು. ಸೋಮವಾರ ಪಟ್ಟಣದ ಎಸ್ ಎಸ್ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ಸರ್ಕಾರ ಪೌರಾಡಳಿತ ನಿರ್ದೇಶನಾಲಯ ,ಬೆಂಗಳೂರು.ಜಿಲ್ಲಾಡಳಿತ ವಿಜಯಪುರ, ಜಿಲ್ಲಾ ನಗರಾಭಿವೃದ್ಧಿ ಕೋಶ ಪುರಸಭೆ ಕಾರ್ಯಾಲಯ ತಾಳಿಕೋಟಿ.ಶ್ರೀ ಎಸ್.ಎಸ್.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಸಹಯೋಗದಲ್ಲಿ ಹಮ್ಮಿಕೊಂಡ ತ್ಯಾಜ್ಯ ವಿಂಗಡನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪುರಸಭೆಹಿರಿಯ ಆರೋಗ್ಯ ನೀರಿಕ್ಷಕ ಫಿರೋಜ್ ಮುಲ್ಲಾ,ಕಿರಿಯ ಅಭಿಯಂತರ ಸಂದೀಪ ವಠಾರ,ಕಿರಿಯ ಆರೋಗ್ಯ ನೀರಿಕ್ಷಕ ಶಿವಾನಂದ ಜುಮ್ನಾಳ ಪುರಸಭೆಯಶ್ರೀಪಾದ ಜೋಶಿ, ಕಿರಿಯ ಆರೋಗ್ಯ ನೀರಿಕ್ಷಕ ರಂಗನಾಥ್ ಅಜಮನಿ ವೇದಿಕೆ ಯಲ್ಲಿ ಇದ್ದರು.
ಸ್ವಚ್ಛ ಭಾರತ ಮಿಶನ್ (2.0) ನಗರ ಮಿಶನ ಅಡಿಯಲ್ಲಿ ಶಿಕ್ಷಣ ಸಂವಹಣ ್ಘ ತರಭೇತಿ ಕಾರ್ಯಾಗಾರದಲ್ಲಿ ಪಿರೋಜ ಮುಲ್ಲಾ.ಸಂದೀಪ ವಠಾರ,ಶಿವಾನಂದ ಜುಮನಾಳ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಸ್ವಚ್ಛ ಭಾರತ,ಶ್ರೇಷ್ಠ ಭಾರತ.ಸ್ವಚ್ಚತೆಯ ಹಾದಿ,ದೇಶದ ಬುನಾದಿ.ಪೂಜೆಗೆ ಮೊದಲು ಶೌಚ,ಅದುವೆ ಬಾಳಿಗೆ ಕವಚ.ಹಸಿರು ಬೂಮಿ ಸ್ವಚ್ಚತೆಯ ಸಂಕೇತವಾಗಿದೆ.ಸ್ವಚ್ಚತೆಯು ಉಸಿರಾದರೇ,ಜೀವನವೇ ಹಸಿರಾಗುತ್ತೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಿಯು ವಿದ್ಯಾರ್ಥಿನಿ ಕಾವ್ಯಾ ಮಸಕನಾಳ ಪ್ರಾರ್ಥಿಸಿದರು. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ದೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಥಮ,ದ್ವಿತೀಯ ಮತ್ತು ತೃತೀಯ ಬಹುಮಾನ ಕೊಟ್ಡರು. ಶಿಕ್ಷಕ ಎಸ್.ಸಿ.ಗುಡಗುಂಟಿ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 