ಗುಳೆ ತಪ್ಪಿಸಲು ಉದ್ಯೋಗ ಖಾತ್ರಿ ಜಾಗೃತಿ ಮೂಡಿಸಿ: ಮೇಘಣ್ಣವರ

ಗದಗ 23: ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ಗದಗ ಜಿಲ್ಲೆಯ ಬರ ಪರಿಸ್ಥಿತಿಯನ್ನು ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಕುಟುಂಬಗಳು ಗುಳೆ ಹೋಗುವದನ್ನು ತಪ್ಪಿಸಲು ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಉದ್ಯೋಗ ಒದಗಿಸುವ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಪಿ.ಎ. ಮೇಘಣ್ಣವರ ಸೂಚಿಸಿದರು.

     ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಬರ ನಿರ್ವಹಣೆ ಕುರಿತು ಜಿಲ್ಲಾಡಳಿತ ಕೈಗೊಳ್ಳುತ್ತಿರುವ ಸಿದ್ದತಾ ಕ್ರಮಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಉದ್ಯೋಗವನ್ನರಸಿ ಬೇರೆ ಪ್ರದೇಶಗಳಿಗೆ ತೆರಳುವ ಕುಟುಂಬಗಳು ವಿವಿಧ ರೀತಿ ತೊಂದರೆ ಎದುರಿಸುತ್ತಿದ್ದು ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಕಾಮರ್ಿಕರಿಗೆ ದಿನಕ್ಕೆ 249 ರೂ. ಕೂಲಿ ನೀಡುವ ಅವಕಾಶವಿದ್ದು, ಬರ ಪರಿಸ್ಥಿತಿಯಲ್ಲಿ ಹೆಚ್ಚನ ಉದ್ಯೋಗ ಒದಗಿಸಲು ಹೆಚ್ಚುವರಿ 50 ದಿನಗಳ ಉದ್ಯೋಗ ನೀಡಿಕೆಗೆ ಸಕರ್ಾರ ಅವಕಾಶ ಕಲ್ಪಿಸಿದೆ ಈ ಕುರಿತು ತಹಶೀಲ್ದಾರರು, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳುವಳಿಕೆ ನೀಡಲು ಕ್ರಮ ಜರುಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಅಗತ್ಯವಿರುವ  ಪ್ರತಿ ಗ್ರಾಮದಲ್ಲಿ ಜಾನುವಾರುಗಳಿಗೆ ನೀರಿನ ತೊಟ್ಟಿಗಳನ್ನು ನಿಮರ್ಿಸಲು ಅವಕಾಶವಿದ್ದು ಜಿಲ್ಲಾ ಪಂಚಾಯತ ಈ ವರೆಗೆ ನಿಮರ್ಿಸಿರುವ  ಮಾಹಿತಿ ಒದಗಿಸಲು ಮೇಘಣ್ಣವರ ತಿಳಿಸಿದರು.

    ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 22 ಲಕ್ಷ ಮಾನವ ದಿನಗಳ ಗುರಿ ಪೈಕಿ 16 ಲಕ್ಷ ಮಾನವದಿನಗಳ ಉದ್ಯೋಗ ಕಲ್ಪಿಸಿ ರಾಜ್ಯಕ್ಕೆ 11ನೇ ಸ್ಥಾನದಲ್ಲಿದೆ. ಜಿಲ್ಲೆಗೆ ನದಿ ಪಾತ್ರಗಳಿಂದ ಗ್ರಾಮೀಣ ಭಾಗದಲ್ಲಿ ಡಿಬಿಓಟಿ ನೀರು ಪೂರೈಕೆ ಯೋಜನೆಯಿಂದಾಗಿ ಗ್ರಾಮೀಣ ಪ್ರದೇಶದ ನೀರಿನ ಪೂರೈಕೆಯನ್ನು ನಿಭಾಯಿಸಲಾಗುತ್ತಿದೆ ಎಂದರು.  ರೋಣ, ಹಾಗೂ ಗಜೇಂದ್ರಗಡ ಪಟ್ಟಣ ಪ್ರದೇಶಗಳಿಗೆ ಈಗಾಗಲೇ ಪ್ರಗತಿಯಲ್ಲಿರುವ ನೀರು ಪೂರೈಕೆ ಕಾಮಗಾರಿ ಪೂರ್ಣವಾಗುವವರೆಗೆ ಹಾಗೂ ಮುಳಗುಂದಕ್ಕೆ ಡಿಬಿಓಟಿ ಯೋಜನೆಯಡಿ ನೀರನ್ನು ಪೂರೈಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ಮಂಜೂರಾತಿ ನೀರಿಕ್ಷಿಸಿ ಅಗತ್ಯದ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶ ನೀಡಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ ನುಡಿದರು. ಈ ಕುರಿತು ಅಗತ್ಯದ ಕ್ರಮಕ್ಕೆ ಜರುಗಿಸಲು ಪ್ರಾದೇಶಿಕ ಆಯುಕ್ತರು ಸೂಚಿಸಿದರು.

     ಜಿಲ್ಲೆಯಲ್ಲಿನ ಮಳೆಕೊರತೆಯ ಬೆಳೆಹಾನಿಯಿಂದಾಗಿ ಮೇವು ಅಗತ್ಯ ಕುರಿತಂತೆ ಪಶು ಸಂಗೋಪನೆ ಇಲಾಖೆ ಲೆಕ್ಕಾಚಾರ ತಪ್ಪಬಹುದಾಗಿದ್ದು ತಕ್ಷಣ ಜಾನುವಾರು ಪರೀಕ್ಷರಿಂದ ಅವರ ವ್ಯಾಪ್ತಿಯಲ್ಲಿ ವಾಸ್ತವವಾಗಿ ಲಭ್ಯವಿರುವ ಮೇವು ಹಾಗೂ ಮುಂದಿನ ಅಗತ್ಯಗಳ ವರದಿ ಪಡೆದು ಮೇವು ಕೊರತೆಯಾಗದಂತೆ ಪಯರ್ಾಯ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯದ ಸ್ಥಳಗಳಲ್ಲಿ ಮೇವು ಬ್ಯಾಂಕ ಆರಂಭಕ್ಕೆ ಮತ್ತು ಮೇವಿನ ಕಿಟ್ಗಳ ವಿತರಣೆ ಕುರಿತಂತೆ ಜನಪ್ರತಿನಿಧಿಗಳಿಗೆ ಮಾಹಿತಿ ಒದಗಿಸಲು ತಕ್ಷಣ ಕ್ರಮ ಜರುಗಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಕಟ್ಟುನಿಟ್ಟಿನ  ಸೂಚನೆ ನೀಡಿದರು.

     ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿ.ಪಂ.ಉಪಕಾರ್ಯದಶರ್ಿ ಎಸ್.ಸಿ.ಮಹೇಶ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಕೃಷಿ ಜಂಟಿ ನಿದರ್ೇಶಕ ಬಾಲರೆಡ್ಡಿ, ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಪ್ರದೀಪ, ಗ್ರಾಮೀಣ ನೀರು ಪೂರೈಕೆ, ಪಶುಪಾಲನೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.