ಸಾವಿನಲ್ಲೂ ಒಂದಾದ ವೃದ್ಧ ದಂಪತಿ: ವಾರದ ಅಂತರದಲ್ಲಿ ಇಬ್ಬರ ನಿಧನ
Elderly couple united even in death: Both passed away within a week of each other
ಗಂಗಾವತಿ 20: ಜೀವಮಾನವೀಡೀ ಒಬ್ಬರನ್ನೊಬ್ಬರು ಅಗಲಿ ಇರಲಾರದಷ್ಟು ಅನ್ಯೋನ್ಯವಾಗಿದ್ದ ವೃದ್ಧ ದಂಪತಿಯೊಬ್ಬರು, ಸಾವಿನಲ್ಲೂ ಒಂದಾಗುವ ಮೂಲಕ ನಾಡಿಗೆ ಅಪರೂಪದ ಪ್ರೀತಿಯ ಸಂದೇಶ ಸಾರಿ ಹೊರಟುಹೋಗಿದ್ದಾರೆ. ತಾಲೂಕಿನ ಹೊಸಕೇರಾ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಪತ್ನಿ ಮೃತಪಟ್ಟ ಕೇವಲ ಒಂದೇ ವಾರದಲ್ಲಿ ಪತಿಯೂ ಕೊನೆಯುಸಿರೆಳೆದಿದ್ದಾರೆ. ಗ್ರಾಮದ ಹಿರಿಯ ಜೀವಿಗಳಾದ ಮಲ್ಲಮ್ಮ ಶೇಖರ್ಪ ಮುದೇನೂರು (80) ಅವರು ಕಳೆದ ಭಾನುವಾರದಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ಪತ್ನಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪತಿ ಶೇಖರ್ಪ ಮುದೇನೂರು (85) ಅವರು, ಕಳೆದೆರಡು ದಿನಗಳ ಹಿಂದಷ್ಟೇ ಪತ್ನಿಯ ಶ್ರದ್ಧಾಂಜಲಿ ಹಾಗೂ ಅಂತ್ಯಕ್ರಿಯೆಯ ಕಾರ್ಯಗಳನ್ನು ಮುಗಿಸಿದ್ದರು.
ಪತ್ನಿಯ ಅಗಲಿಕೆಯ ದುಃಖವನ್ನು ತಾಳಲಾರದ ಅವರು, ಈ ಭಾನುವಾರ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಂಪೂರ್ಣ ಆರೋಗ್ಯವಂತರಾಗಿದ್ದ ಶೇಖರ್ಪ ಅವರು ಪತ್ನಿಯ ಅಗಲಿಕೆಯ ಶೋಕದಿಂದಲೇ ತೀರಿಕೊಂಡಿದ್ದಾರೆ ಎಂದು ಕುಟುಂಬಸ್ಥರು ದುಃಖತಪ್ತರಾಗಿ ತಿಳಿಸಿದ್ದಾರೆ. ಒಂದೇ ವಾರದ ಅಂತರದಲ್ಲಿ ಮನೆಯ ಇಬ್ಬರು ಹಿರಿಯ ಜೀವಿಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ. ಮೃತ ದಂಪತಿಯ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಹೊಸಕೇರಾ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಪತ್ನಿ ಮಲ್ಲಮ್ಮ ಅವರ ಸಮಾಧಿಯ ಪಕ್ಕದಲ್ಲೇ ಪತಿ ಶೇಖರ್ಪ ಅವರ ಸಮಾಧಿಯನ್ನೂ ಮಾಡಿ, ಅಂತಿಮ ಸಂಸ್ಕಾರ ಪೂರೈಸಲಾಯಿತು. ಸಾವಿನಲ್ಲೂ ಒಂದಾದ ಈ ದಂಪತಿಯ ಅಗಲಿಕೆಗೆ ಇಡೀ ಗ್ರಾಮವೇ ಕಣ್ಣೀರಿಟ್ಟಿದ್ದು, ಅವರ ಪವಿತ್ರ ಪ್ರೀತಿಯನ್ನು ಸ್ಮರಿಸಿದೆ.
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ 