ಬಿಎಲ್‌ಡಿ ಕಾಲೇಜಿನ ಮಹಾವಿದ್ಯಾಲಯ ವಜ್ರಮಹೋತ್ಸವದಲ್ಲಿ ಶಿಕ್ಷಣಕ್ಕೆ ದೊಡ್ಡ ಶಕ್ತಿಯಿದೆ.: ಕುಲಸಚಿವ ಸಂತೋಷ ಕಾಮಗೌಡ
ಜಮಖಂಡಿ 16 : ಶಿಕ್ಷಣಕ್ಕೆ ದೊಡ್ಡ ಶಕ್ತಿಯಿದೆ. ಓದಲಿಕ್ಕೆ, ಕಲಿಯಲ್ಲಿಕ್ಕೆ ಕೊನೆಯೇ ಇಲ್ಲ. ಯಾರಲ್ಲಿ ಸಾಧನೆ ಮಾಡುವ ಹಂಬಲವಿರುತ್ತದೆ ಅವರು ತಮ್ಮ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆಂದು ಬೆಳಗಾವಿ ವಿ,ವಿ,ರಾಣಿಚನ್ನಮ್ಮ ಕುಲಸಚಿವ ಸಂತೋಷ ಕಾಮಗೌಡ ಹೇಳಿದರು.
ನಗರದ ಬಿಎಲ್‌ಡಿ ಕಾಲೇಜಿನ ದರಬಾರ ಹಾಲ್‌ನಲ್ಲಿ ನಡೆದ ವಾಣಿಜ್ಯ ಬಿ,ಎಚ್, ಎಸ್, ಕಲೆ ಮತ್ತು ಟಿ,ಜಿ,ಪಿ ವಿಜ್ಞಾನ ಮಹಾವಿದ್ಯಾಲಯ ವಜ್ರಮಹೋತ್ಸವ ವರ್ಷಾಚರಣೆ ಹಾಗೂ 2024-25 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಒಕ್ಕೂಟ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬಡತನ ಕುಟುಂಬದಿಂದ ಬಂದವರು ಉನ್ನತ ಹುದ್ದೆಯಲ್ಲಿ ಇದ್ದಾರೆ. ಮೊದಲು ಶಿಸ್ತು, ಸಮತೆ, ಭದತ್ಯಯ ಪಾಲನೆ ಮಾಡಿಕೊಳ್ಳಬೇಕು. ನಾವುಗಳು ಯಾಕೆ ಓದಬೇಕು ಹಾಗೂ ಯಾರ ಜೊತೆಯಲ್ಲಿ ಇರಬೇಕು ಎಂಬುವುದು ತಿಳಿದುಕೊಲ್ಳಬೇಕು. ನನ್ನಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬುವದನ್ನು ಮೊದಲು ಬಿಡಬೇಕು. ಸಾಧನೆಗೆ ವಯೋಮಿತಿ ಇರುವುದಿಲ್ಲ. ಕಷ್ಟ ಯಾರ ಬಳಿ ಇರುತ್ತದೆ ಅವರಲ್ಲಿ ಬಡತನ ಇರುತ್ತದೆ. ಬಡತನ ಇರುವ ಕಾರಣದಿಂದ ಜೀವನ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಬಡವರು ಮತ್ತು ಶ್ರೀಮಂತರು ಸಹ ಸಾಧನೆಯನ್ನು ಮಾಡಬಹುದು ಎಂದರು.ಸಾಧನೆ ಮಾಡಲು ಕೈ-ಕಾಲುಗಳು ಇಲ್ಲದೆ ಇರುವ ವ್ಯಕ್ತಿಯು ಸಹ ಸಾಧನೆಯನ್ನು ಮಾಡಿ ಮತ್ತೊಬರಿಗೆ ಪ್ರೇರಣೆ ಆಗಿರುವ ಉದ್ದಾಹರಣೆಗಳು ದೊರೆಯುತ್ತವೆ. ಸಾಧನೆಗೆ ಸಣ್ಣಪುಟ್ಟ ಹೆಜ್ಜೆಯನ್ನು ಇಡುವ ಮೊದಲು ಪ್ರಯತ್ನ ಮಾಡಬೇಕು. ಓದುವ ಕಡೆಗೆ ಶ್ರಮ, ಶ್ರದ್ಧೆ, ಏಕಾಗ್ರತೆ ಇರಬೇಕು. ಇಂದಿನ ದಿನಗಳ ಬಗ್ಗೆ ಮೊದಲು ತಿಳಿದುಕೊಳಬೇಕು. ಗುರಿಯನ್ನು ತಲುಪುವಬೇಕಾದರೆ ಮೊದಲು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ತಿಳಿದುಕೊಳ್ಳಬೇಕು. ದೈಹಿಕವಾಗಿ ಇದರೆ ಮಾತ್ರ ಮಾನಸಿಕ ಸದೃಢತೆ ಹೊಂದಲು ಸಾಧ್ಯ. ಪ್ರತಿದಿನ ಕೆಲಸದಲ್ಲಿ ಹೆಜ್ಜೆಯ ಮಟ್ಟಿಲುಗಳನ್ನು ಬದಲಾವಣೆ ಮಾಡಿಕೊಳ್ಳವದು ಎಲ್ಲರೂ ತಿಳಿದುಕೊಳಬೇಕು ಎಂದರು.ಇದೇ ಸಂದರ್ಭದಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು, ವೇದಿಕೆಯಲ್ಲಿ ಆಡಳಿತಾಧಿಕಾರಿ ಡಾ, ಎಸ್.ಎಚ್.ಲಗಳಿ, ಡಾ, ಡಿ.ಎಸ್.ನಿಟ್ಟೂರ, ಡಾ,ಎಸ್.ಬಿ.ಕಮತಿ ಇದ್ದರು. ಪ್ರಾಚಾರ್ಯ ಡಾ,ಪಿ.ಡಿ.ಪೋಳ ಸ್ವಾಗತಿಸಿ. ಪ್ರಾಸ್ತಾವಿಕ ಮಾತನಾಡಿದರು. ಡಾ. ಆನಂದ ಉಪ್ಪಾರ. ಡಾ, ಕೆಎಂ.ಶಿರಹಟ್ಟಿ ವರದಿ ವಾಚನ ಮಾಡಿದರು. ಗಣೇಶ ಮಾದರ ಪ್ರಾರ್ಥನಿಸಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು.