ಶಿಕ್ಷಣ ಉತ್ತಮ ನಾಗರಿಕರನ್ನು ರೂಪಿಸುವ ಕಮ್ಮಟ: ಈರಣ್ಣಾ ಹೊಸಮನಿ
Education Makes Better Citizens: Eranna Hosmani
ಯರಗಟ್ಟಿ, 03 ; ಶಿಕ್ಷಣವು ಉತ್ತಮ ನಾಗರಿಕರನ್ನು ರೂಪಿಸುವ ಕಮ್ಮಟ. ಉತ್ತಮ ಶಿಕ್ಷಣ ಪಡೆದು, ಸಮಾಜದಲ್ಲಿ ಅಗ್ರಗಣ್ಯರಾಗಬೇಕು ಎಂದು ಕಾಲೇಜು ಎಸ್‌ಡಿಎಮ್‌ಸಿ ಸದಸ್ಯ ಈರಣ್ಣಾ ಹೊಸಮನಿ ಹೇಳಿದರು.
ಸಮೀಪದ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಕಾಲೇಜು ವಿಭಾಗದ ಪಿಯು ಕಾಲೇಜಿನಲ್ಲಿ ಮಂಗಳವಾರ ನಡೆದ ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಬೇಕು. ಸಮಾಜವನ್ನು ನೀವು ಹಿಂಬಾಲಿಸದೆ ಸಮಾಜ ನಿಮ್ಮನ್ನು ಹಿಂಬಾಲಿಸುವಂತೆ ಕಾರ್ಯಪ್ರವೃತ್ತರಾಗಿ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಕಾಲೇಜು ಎಸ್‌ಡಿಎಮ್‌ಸಿ ಉಪಾಧ್ಯಕ್ಷ ಬಂಗಾರೆಪ್ಪ ಹರಳಿ ಮಾತನಾಡಿದರು.ವಿದ್ಯಾರ್ಥಿಗಳಾದ ಪೂಜಾ ರೈನಾಪೂರ, ರತ್ನಾವ್ವ ಪಾಗದ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕರಾದ ಬಿ.ಸಿ.ಮೋದಗಿ, ಬಿ.ಬಿ.ಪಾಟೀಲ, ಸವಿತಾ ಪಾಟೀಲ, ರುಕ್ಮಿಣಿ ಪೂಜೇರಿಪ್ರಾಚಾರ್ಯರಾದ ನಾಗರಾಜು ಕೆ, ಉಪನ್ಯಾಸಕರಾದ ಎಸ್.ಟಿ. ಹಲಕಿ, ಬಿ.ಎಸ್. ದೊಡಮನಿ, ಬಿ.ಆಯ್. ಹರಳಿ, ಬಿ.ಎಂ. ಬಿಷ್ಟಣ್ಣವರ, ಯು.ಬಿ. ಮೂಲಂಗಿ, ಏನ್.ಎಂ. ಮಾದರ, ಎಸ್.ಬಿ. ನದಾಫ್, ದ್ವಿತೀಯ ದರ್ಜೆ ಸಹಾಯಕರು ಯು. ವಾಯ್. ಧಾಮನೇಕರ್ ಇದ್ದರು.ಕುಮಾರ, ಸಂತೋಷ ಪಟ್ಟೆದ ಸ್ವಾಗತಿಸಿದರು, ಕುಮಾರಿ ಶಿಲ್ಪಾ ಉಳ್ಳೆಗಡ್ಡಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 