ಹೂವಿನ ಹಡಗಲಿ

ಉತ್ತಂಗಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಉತ್ತಂಗಿ ಬಳಿ ಚಾಲಕನ  ನಿಯಂತ್ರಣ ತಪ್ಪಿ ಕಾರು ಪಲ್ಟಿ

ಲೋಕದರ್ಶನ ವರದಿ 

ಹೂವಿನಹಡಗಲಿ 10 : ಚಾಲಕನ ನಿಯಂತ್ರಣ ತಪ್ಪಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಒಂದು ಕಾರು ರಸ್ತೆ ಬದಿ ಪಲ್ಟಿಯಾದ ಘಟನೆ  ತಾಲ್ಲೂಕಿನ ಉತ್ತಂಗಿ ಗ್ರಾಮದ ತೀರ್ಥರಾಮೇಶ್ವರ ಪ್ಲಾಟ್ ಬಳಿ ಗುರುವಾರಸಂಭವಿಸಿದೆ. ಹೂವಿನಹಡಗಲಿಯಿಂದ ಇಟ್ಟಿಗಿ ಕಡೆ ಹೊರಟಿದ್ದ ಕಾರು ಮತ್ತು ಇಟ್ಟಿಗಿ ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಯಾವುದೇ ಪ್ರಾಣಾ ಹಾನಿಯಾಗಿಲ್ಲ. ಮಾರ್ಗದಲ್ಲಿ ಹೊರಟಿದ್ದ ಪ್ರಯಾಣಿಕರು ಹಾಗೂ ಹೊಸ ಪ್ಲಾಟ್ ನಿವಾಸಿಗಳು ಧಾವಿಸಿ ಕಾರಿನಲ್ಲಿದ್ದವರ-ನ್ನು ರಕ್ಷಿಸಿದ್ದಾರೆ.’ಅರಭಾವಿ- ಚಳ್ಳಕೆರೆ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳಲ್ಲಿ ದುರಸ್ತಿ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ರಸ್ತೆ ಅಗೆದು ಜಲ್ಲಿಕಲ್ಲು ಹರಡಿ ಎರಡೂರು ತಿಂಗಳಾದರೂ ಕಾಮಗಾರಿ ಇನ್ನೂ ಪೂರ್ಣಗೊ ಳಿಸಿಲ್ಲ. ವೇಗದಲ್ಲಿರುವ ವಾಹನಗಳು ಇಲ್ಲಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುತ್ತಿವೆ. ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ’ ಎಂದು ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್‌.ಎಂ. ಸಿದ್ದೇಶ ಆರೋಪಿಸಿದ್ದಾರೆ. 


ಸುದ್ದಿ ಓದಿ