23-24ರಂದು ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಲಾ ಮೇಳ
Drama Festival and Cultural Arts Festival on 23-24
ಬೆಂಗಳೂರು 20: ವಿ.ಕೆ.ಎಂ. ಕಲಾವಿದರು ಬೆಂಗಳೂರು ಹಾಗೂ ಐಟಿಸಿ ಕನ್ನಡ ಲಲಿತ ಕಲಾ ಸಂಘ ಬೆಂಗಳೂರು ಮತ್ತು ಓರಿಸ್ಸಾ ಕನ್ನಡ ಸಂಘದ ಸಹಕಾರದಲ್ಲಿ ಓರಿಸ್ಸಾ ಪೂರಿ ಅನ್ನಪೂರ್ಣ ಕಲಾಮಂದಿರದಲ್ಲಿ ದಿ..23 ಮತ್ತು 24 ರಂದು 45ನೇ ವರ್ಷದ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಲಾ ಮೇಳ 2026 ಕಾರ್ಯಕ್ರಮ ನಡೆಯಲಿದೆ. ಉದ್ಘಾಟನೆಯನ್ನು ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ಪೂರಿಜಗನ್ನಾಥ ದೇವಸ್ಥಾನ ಮಂಡಳಿ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಮೋಹನ್ ರಾವ್ ಜಂಟಿ ನಿರ್ದೇಶಕರು, ವಾರ್ತಾ ಇಲಾಖೆ, ಒರಿಸ್ಸಾ ಸರ್ಕಾರ, ವಿದೂಷಿ ಶ್ರೀಮತಿ ಶ್ಯಾಮಲಾ ದೇವಿ ಖ್ಯಾತ ಭರತನಾಟ್ಯ ಕಲಾವಿದರು, ಶ್ರೀ ಸಿ.ಎಂ. ತಿಮ್ಮಯ್ಯ ಪ್ರಧಾನ ಕಾರ್ಯದರ್ಶಿಗಳು, ವಿ.ಕೆ.ಎಂ. ಕಲಾವಿದರು, ಬೆಂಗಳೂರು ಆಗಮಿಸುವರು.ದಿ 23 ರಂದು ಕಲಾಮೇಳ, ಡೊಳ್ಳು ಕುಣಿತ, ನಂದಿಕಂಭ, ಮೆರವಣಿಗೆ, ಗಾಯನ, ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ದಿ.24 ರಂದು ಐ.ಟಿ.ಸಿ. ಕನ್ನಡ ಲಲಿತ ಕಲಾ ಸಂಘ, ಬೆಂಗಳೂರು ಇವರಿಂದ ಸಾಮಾಜಿಕ ನಾಟಕಹೆಬ್ಬೆಟ್ಟು ತಂದ ಎಡವಟ್ಟು ಪ್ರದರ್ಶನವಿದೆ.ನಿರ್ದೇಶನ : ಸಿ.ಎಂ. ತಿಮ್ಮಯ್ಯವಿ.ಕೆ.ಎಂ. ಕಲಾವಿದರು, ಬೆಂಗಳೂರು ರವರಿಂದ ಜಾನಪದ ನಾಟಕ ಸಾಕ್ಷಿಕಲ್ಲು ಪ್ರದರ್ಶವಿದೆ.ಜ್ಞಾನವಿ ಸಂಗೀತ ಹಾಗೂ ನಾಟಕ ಶಾಲೆ ರವರಿಂದ ದಿ.14-07-2026 ರಂದು ಸಂಜೆ 6.00 ಗಂಟೆಗೆನಯನ ರಂಗಮಂದಿರ, ಬೆಂಗಳೂರು ಗೊ.ರು. ಚನ್ನಬಸಪ್ಪರವರ ಸಾಕ್ಷಿಕಲ್ಲು ನಾಟಕ ಪ್ರದರ್ಶನವಿದೆ.ಸಂಗೀತ ಮತ್ತು ನಿರ್ದೇಶನ : ಲಕ್ಷ್ಮಣ್ ಸುವರ್ಣಸಹ ನಿರ್ದೇಶನ : ತಿಮ್ಮಯ್ಯ ನೀಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 