ಕೊಪ್ಪಳ 06: ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೊಪ್ಪಳದ ಕೌಮಾರಭೃತ್ಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಡಾ. ಶ್ರಾವಣಿ. ಕೆ. ಎಸ್ ಇವರು 2025 ನೇ ಶೈಕ್ಷಣಿಕ ವರ್ಷದ ರಾಜೀವ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಆದ್ದರಿಂದ ಡಾ. ಶ್ರಾವಣಿ. ಕೆ. ಎಸ್ ಇವರಿಗೆ 27 ನೇ ರಾಜೀವ ಗಾಂಧಿ ವಿಶ್ವವಿದ್ಯಾಲಯದ ಪದವಿ ಪ್ರಧಾನ ಸಮಾರಂಭದಲ್ಲಿ ಚಿನ್ನದ ಪದಕವನ್ನು ದಿನಾಂಕ 06 ರಂದು ಪ್ರಧಾನಿಸಲಾಯಿತು.
ಡಾ. ಶ್ರಾವಣಿ. ಕೆ. ಎಸ್ ಇವರ ಸಂಶೋಧನೆ ಹಾಗೂ ವೈದ್ಯ ಕಲಿಕಾ ತರಬೇತಿಯು ಡಾ. ಸೂರ್ಯನಾರಾಯಣ ಮತ್ತು ಡಾ. ರಾಧಿಕಾ ಇಂಜಮುರಿ ಇವರುಗಳ ಮಾರ್ಗದರ್ಶನದಲ್ಲಿ ನಡೆದಿದೆ. ಇದಲ್ಲದೇ ಮಹಾವಿದ್ಯಾಲಯದ ಕ್ರಿಯಾ ಶಾರೀರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ಡಾ.ಸೌರಭಾ ಭಟ್ 2ನೇ ರಾ್ಯಂಕ್ ಹಾಗೂ ಡಾ.ಪಲ್ಲಭಿ ಮಂಜರಿ 6ನೇ ರಾ್ಯಂಕ್ನ್ನು ಪಡೆದಿದ್ದಾರೆ. ಶಲ್ಯ ತಂತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ಡಾ. ಅರ್ಚನಾ.ಎಂ.ಪಿ 7ನೇ ರಾ್ಯಂಕ್ ಹಾಗೂ ಡಾ.ಎಸ್. ವೈಷ್ಣವಿ 10 ನೇ ರಾ್ಯಂಕ್, ಪಂಚಕರ್ಮ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಡಾ. ಶ್ವೇತಾ ಅಂಗಡಿ 7ನೇ ರಾ್ಯಂಕ್ ಮತ್ತು ಕೌಮಾರಭೃತ್ಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಡಾ. ಡಿ. ದೀಪಕ 8ನೇ ರಾ್ಯಂಕ್ನ್ನು ರಾಜೀವ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದರ ಮೂಲಕ ಯಶಸ್ವಿಗೆ ಪಾತ್ರರಾಗಿದ್ದಾರೆ.
ಈ ಕ್ಷಣವು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದ್ದು ಇವರ ವಿಶಿಷ್ಟ ಸಾಧನೆಗೆ ಮಹಾವಿದ್ಯಾಲಯದ ಚೇರಮನ್‌ರಾದ ಸಂಜಯ ಕೊತಬಾಳ ಹಾಗೂ ಪ್ರಾಂಶುಪಾಲರಾದ ಡಾ. ಮಹಾಂತೇಶ ಸಾಲಿಮಠ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿ, ಶುಭಾಶಯಗಳನ್ನು ಕೋರಿದ್ದಾರೆ.