ಹೂಡಿಕೆದಾರರ ವರ್ತನಾ ಪೂರ್ವಾಗ್ರಹಗಳ ಕುರಿತು ಡಾ. ರಂಜನಾ ಉಪಾಶಿ ಸಂಶೋಧನೆಗೆ ಪಿಎಚ್‌.ಡಿ.

ಹೂಡಿಕೆದಾರರ ವರ್ತನಾ ಪೂರ್ವಾಗ್ರಹಗಳ ಕುರಿತು ಡಾ. ರಂಜನಾ ಉಪಾಶಿ ಸಂಶೋಧನೆಗೆ ಪಿಎಚ್‌.ಡಿ.  Dr. Ranjana Upashi awarded PhD for research on investors' behavioral biases


ಬೆಳಗಾವಿ ಸೆ. 4: ಭಾರತೇಶ ಎಜುಕೇಶನ್ ಟ್ರಸ್ಟ್ನ ಸಮರ​‍್ಿತ ಬೋಧಕಿ, ಸಂಶೋಧಕಿ ಹಾಗೂ ವಿದ್ವಾಂಸರಾದ ಡಾ. ರಂಜನಾ ಉಪಾಶಿ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಮ್ಯಾನೇಜ್ಮೆಂಟ್ ವಿಷಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌.ಡಿ.) ಪದವಿಯನ್ನು ಯಶಸ್ವಿಯಾಗಿ ಪಡೆದಿದ್ದಾರೆ.  

ಡಾ. ರಂಜನಾ ಉಪಾಶಿ ಅವರು ಹೂಡಿಕೆದಾರರ ಹೂಡಿಕೆ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ವಿವಿಧ ವರ್ತನಾ ಪೂರ್ವಾಗ್ರಹಗಳ ಕುರಿತು ತಮ್ಮ ಡಾಕ್ಟರೇಟ್ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ. ಈ ಸಂಶೋಧನಾ ಕಾರ್ಯಕ್ಕೆ ಏಋಖ, ಏಗಆನ ಪ್ರಾಧ್ಯಾಪಕರಾದ ಡಾ. ಎ. ಎಂ. ಕದಕೋಳ ಅವರು ಮಾರ್ಗದರ್ಶನ ನೀಡಿದ್ದಾರೆ.  

ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಹೂಡಿಕೆದಾರರ ಹೂಡಿಕೆ ನಿರ್ಧಾರ ಪ್ರಕ್ರಿಯೆಯ ಕುರಿತು ಆಳವಾದ ವಿಶ್ಲೇಷಣೆ ನಡೆಸಲಾಗಿದ್ದು, ಹಣಕಾಸು ನಿರ್ವಹಣೆ, ಹೂಡಿಕೆ ಯೋಜನೆ ಹಾಗೂ ವೈಯಕ್ತಿಕ ಹಣಕಾಸು ನಿರ್ವಹಣೆ ಕ್ಷೇತ್ರಗಳಿಗೆ ಸಂಶೋಧನೆಯು ಮಹತ್ವದ ಕೊಡುಗೆ ನೀಡಲಿದೆ.  

ವರ್ಷಗಳ ಕಾಲ ನಡೆಸಿದ ಕಠಿಣ ಪರಿಶ್ರಮ, ನಿರಂತರ ಅಧ್ಯಯನ, ಸಂಶೋಧನೆಯಲ್ಲಿನ ಬದ್ಧತೆ ಹಾಗೂ ಜ್ಞಾನವೃದ್ಧಿಯ ಮೇಲಿನ ಆಸಕ್ತಿಯ ಫಲವಾಗಿ ಡಾ. ರಂಜನಾ ಉಪಾಶಿ ಅವರು ಈ ಶೈಕ್ಷಣಿಕ ಸಾಧನೆ ಮಾಡಿದ್ದಾರೆ. ಅವರ ಸಂಶೋಧನೆಯ ಮೂಲತತ್ವ, ಆಳವಾದ ಅಧ್ಯಯನ ಹಾಗೂ ಪ್ರಾಯೋಗಿಕ ಉಪಯುಕ್ತತೆ ಗಮನಾರ್ಹವಾಗಿದೆ.