ವಿಜಯಪುರ 13: ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕರ್ನಾಟಕ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಜಾಗತಿಕ ಯೋಗಕ್ಷೇಮ ಸಂಗಮ ಕಾರ್ಯಕ್ರಮದಲ್ಲಿ ವಿಶೇಷ ಸಾಧಕ ಪ್ರಶಸ್ತಿಯನ್ನು ಮ್ಯಾರಥಾನ, ಸೈಕ್ಲಿಸ್ಟ್ ಮತ್ತು ಕೈಗಾರಿಕಾ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಅವರಿಗೆ ಮತ್ತು ಆಲಮೇಲದ ವೈದ್ಯಸಾಹಿತಿ, ವ್ಯಂಗ್ಯಚಿತ್ರಕಾರ ಡಾ ಸಮೀರ ಹಾದಿಮನಿಯವರಿಗೆ ಸುತ್ತೂರು ಮಠದ ಪೂಜ್ಯ ಶ್ರೀ ಡಾ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ನೀಡಿ ಗೌರವಿಸಿದರು.
ವೇದಿಕೆ ಮೇಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ, ಎಸ್ -ವ್ಯಾಸ ಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ ಎಚ್ ಆರ್ ನಾಗೇಂದ್ರ ಗುರೂಜಿ, ಆಯುಷ್ ಟಿವಿಯ ಉಪಾಧ್ಯಕ್ಷ ಆರ್ ಹರೀಶ್, ವಿಜಯಕರ್ನಾಟಕದ ಸಿಇಓ ದೀಪಕ ಸಲುಜ, ಎಎಫ್‌ಐ ಅಧ್ಯಕ್ಷ ಡಾ ಮೋಹನ ಬಿರಾದಾರ, ಡಾ ಸೋಮಶೇಖರ್ ಹುದ್ದಾರ, ಡಾ ಜಿ ಬಿ ಕುಂಬಾರ ಉಪಸ್ಥಿತರಿದ್ದರು.