ರಕ್ತದಾನ ಮಾಡಿ ಮಾದರಿಯಾದ ಡಾ.ಗೀರಿಶ್ ಪಾಟೀಲ
Dr. Girish Patil becomes a role model by donating blood
ಇಂಡಿ 16: ತಾಲೂಕಿನ ಸುಕ್ಷೇತ್ರ ತಡವಲಗಾ (ಜೋಡಗುಡಿ) ಗ್ರಾಮದ ಮರುಳಸಿದ್ದೇಶ್ವರ ರಥೋತ್ಸವ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀ ದೇವಸ್ಥಾನ ಕಳಸಾ ರೋಣ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಿಮಿತ್ತವಾಗಿ ಎರಡೂ ದಿನಗಳ ಕಾಲ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ತಾವೇ ಮೊದಲು ರಕ್ತದಾನ ಮಾಡಿದ ತಡವಲಗಾ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗೀರೀಶ್ ಪಾಟೀಲ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ನಂತರ ಮಾತನಾಡಿದ ಅವರು ರಕ್ತದಾನವು ಜೀವ ಉಳಿಸುವ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಒಂದು ಮಹತ್ವದ ಕಾರ್ಯವಾಗಿದೆ. ಇದು ತುರ್ತು ಸಂದರ್ಭಗಳಲ್ಲಿ, ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಮತ್ತು ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯವಿರುವ ರೋಗಿಗಳಿಗೆ ಸಹಾಯ ಮಾಡುತ್ತದೆ. ದಾನಿಯಿಂದ ದೇಹದ ಕಬ್ಬಿಣದ ಮಟ್ಟವನ್ನು ನಿಯಂತ್ರಿಸಲು, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು, ಮತ್ತು ಉಚಿತ ಆರೋಗ್ಯ ತಪಾಸಣೆಯನ್ನು ಪಡೆಯಲು ಇದು ಸಹಾಯಕವಾಗಿದೆ ಎಂದು ಹೇಳಿದರು.
ಪೋಲಿಸ್ ಇಲಾಖೆಯ ಶ್ರೀಶೈಲ ಗಾಯನವರ ಕೂಡಾ ಅವರು ರಕ್ತದಾನ ಮಾಡಿ ಮಾದಿರಿ ಆದರೂ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ರೇವಣಸಿದ್ದ ಲಾಳಸಂಗಿ, ಮಾಯಪ್ಪ ಬಗಲಿ, ರಘು ಚವ್ಹಾಣ, ಡಾ ಸೀಮಾ ಮಮದಾಪೂರ, ರೇಖಾ ಸಿಂಪಿ, ಸಪ್ನಾ ಅಂಗಡಿ, ಅರುಣ ಕುಮಾರ್ ಕಾಂಬ್ಳೆ ಹಾಗೂ ಗ್ರಾಮದ ಹಿರಿಯರಾದ ಬಸವರಾಜ ಇಂಡಿ, ಕೃಷ್ಣಪ್ಪ ಮಿರ್ಜಿ, ಸಂಪತಕುಮಾರ ಹಿಳ್ಳಿ, ಕೆ ಎನ್ ಕಲ್ಯಾಣಿ, ತಮ್ಮಣ್ಣ ಪೂಜಾರಿ, ಮಳಸಿದ್ದಪ್ಪ ಖಸ್ಕಿ, ಜೇಟ್ಟಪ ಪಂತೋಜಿ, ಸಿದ್ದು ಲಾಳಸಂಗಿ, ಅಣಪ್ಪ ಜಾಲವಾದ, ಪೋಲಿಸ್ ಇಲಾಖೆ ಡಿ ಎಸ್ ಗಾಯಕವಾಡ, ಶ್ರೀಶೈಲ ಗಾಯನವರ, ಧಶರತ ಮಾದರ, ಎಚ್ ಬಬಲಾದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 