ಭವನವಲ್ಲ ಪಾಳು ಬಿದ್ದಿರುವ ಡಾ.ಬಾಬು ಜಗಜೀವನರಾಮ್ 1 ಕೋಟಿ ರೂ ಬೃಹತ್ ಕಟ್ಟಡ ಅಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿ
Dr. Babu Jagjivanram, whose house is not in ruins, is a testament to the irresponsibility of the aut
ಲೋಕದರ್ಶನ ವರದಿ
ಮಹಾಂತೇಶ ತೋಪಲಕಟ್ಟಿ
ಹುನಗುಂದ 30: ಸರ್ಕಾರಿ ಕಾರ್ಯಕ್ರಮ, ಸಾರ್ವಜನಿಕರಿಗೆ ಅನುಕೂಲವಾಗಲೆಂದು ಭವನ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣವಾಗಿ ವರ್ಷಗಳೇ ಗತಿಸಿದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಸದ್ಯ ಅದರ ಪರಿಸ್ಥಿತಿ ನೋಡಿದರೆ ಶೋಚನೀಯವಾಗಿದೆ. ಪಟ್ಟಣದ ರಾಮವಾಡಗಿ ರಸ್ತೆಯಲ್ಲಿ ನಿರ್ಮಿಸಲಾದ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನದ ಪರಿಸ್ಥಿತಿ ಇದು. ಮುಕ್ತಾಯವಾಗಿ ಹಲವು ವರ್ಷಗಳು ಕಳೆದರೂ ಉದ್ಘಾಟನೆಗೆ ಮುಹೂರ್ತವೇ ಕೂಡಿ ಬಂದಿಲ್ಲ. ಯಾವೊಬ್ಬ ಆದಿಕಾರಿ ಇತ್ತ ತಿರುಗಿ ನೋಡಿಲ್ಲ ಎನ್ನುವುದೇ ದುರಂತ ಸಂಗತಿ. ಸಮಾಜ ಕಲ್ಯಾಣ ಇಲಾಖೆಯ 1 ಕೋಟಿ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಕುಂಟುತ್ತ, ತೆವಳುತ್ತ ಕೊನೆಗೂ ಕಾಮಗಾರಿ ಪೂರ್ಣಗೊಂಡಿದೆ. ಆಯಾ ಸಮುದಾಯದವರು ಅದರಲ್ಲೂ ತಳ ಸಮುದಾಯದವರ ಆನುಕೂಲಕ್ಕಾಗಿ ವಿವಿಧ ಕಾರ್ಯಕ್ರಮಗಳಿಗೆ ನಿರ್ಮಿಸಲಾದ ಭವನ ಸಮರ್ಕ ನಿರ್ವಹಣೆ ಇಲ್ಲದೆ ಸಂಪೂರ್ಣ ಪಾಳು ಬಿದ್ದಿದೆ. ಅಕ್ರಮ ಚಟುವಟಿಕೆ ತಾಣವಾದ ಕಟ್ಟಡ.
ಸಮುದಾಯ ಭವನ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಮಳೆಗಾಲದಲ್ಲಿ ಅಲ್ಲಲ್ಲಿ ಸೋರುತ್ತಿದೆ. ಜನವಸತಿ ಪ್ರದೇಶದಿಂದ ದೂರವಿರುವ ಕಾರಣ ಅಕ್ರಮ ಚಟುವಟಿಕೆ ತಾಣವಾಗಿದೆ. ಸಾರಾಯಿ ಬಾಟಲ್, ಪಾನಬೀಡಾ ಎಲ್ಲೆಂದರಲ್ಲಿ ಬಿದ್ದಿವೆ. ಕಸದ ರಾಶಿಯೇ ಕಣ್ಣು ಮುಂದೆ ರಾಚುತ್ತದೆ. ಭವನದ ಸುತ್ತಮುತ್ತಲೂ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಭವನ ತಲುಪಲು ಹರಸಹಾಸ ಪಡಬೇಕು. ಸರ್ಕಾರವು ಕೋಟ್ಯಂತರ ರೂ. ವೆಚ್ಚ ಮಾಡಿ ಭವನ ನಿರ್ಮಿಸಿದೆ. ಆದರೆ ಅಕಾರಿಗಳ ನಿರ್ಲಕ್ಷ್ಯದಿಂದ ಕಟ್ಟಡಗಳು ಪಾಳು ಬಿದ್ದಿದ್ದಕ್ಕೆ ಪ್ರಜ್ಞಾವಂತ ನಾಗರಿಕರು ಅಸಮಾನ್ಯಾನ ಹೊರ ಹಾಕುತ್ತಿದ್ದಾರೆ. ಎರಡು ಇಲಾಖೆಗಳ ಜಟಾಪಟಿ- ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಪವನ ನಿರ್ಮಿಸಲಾಗಿದೆ. ಎರಡು ಸರ್ಕಾರಗಳು, ಹತ್ತಾರು ಅಕಾರಿಗಳು ಬದಲಾದರೂ ಲೋಕಾರೆ್ಣ ಭಾಗ್ಯ ಸಿಕ್ಕಿಲ್ಲ. ಬದಲಿಗೆ ಎರಡು ಇಲಾಖೆಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಕಾರಿಗಳು ಪುರಸಭೆಗೆ ಹಸ್ತಾಂತರ ಮಾಡಿದ್ದೇವೆ ಅಂತಾರೆ. ಪುರಸಭೆಯವರು ನಮಗೆ ನೀಡಿಲ್ಲ ಅಂತ ಹೇಳುತ್ತಿದ್ದಾರೆ. ಇದರಿಂದ ಭವನದ ಪರಿಸ್ಥಿತಿ ಆಧೋಗತಿಗೆ ಇಳಿದಿದೆ.
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ 