ಡಾ. ಅಂಬೇಡ್ಕರ ಒಂದು ಜಾತಿಗೆ ಸೀಮಿತರಲ್ಲ: ಜೈ ಭೀಮ

ತಾಳಿಕೋಟಿ 14  ಮಹಾಮಾನವತವಾದಿ ಸಮಾನತೆಯ ಹರಿಕಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ ಅವರು ಎಲ್ಲ ಜಾತಿ ಜನಾಂಗದವರ ಏಳಿಗೆಯನ್ನು ಬಯಸಿದರು ಅವರು ರಚಿಸಿದ ಸಂವಿಧಾನದಲ್ಲಿ ಎಲ್ಲ ಜನರಿಗೂ ಸಮಾನ ಅವಕಾಶಗಳಿವೆ ಇಂತಹ ಮಹಾನ್ ವ್ಯಕ್ತಿಯನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸ ಮಾಡಬಾರದು ಎಂದು ದಲಿತ ಮುಖಂಡ ಜೈ ಭೀಮ ಮುತ್ತಗಿ ಹೇಳಿದರು.  

ಭಾನುವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ 133 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ. ಅಂಬೇಡ್ಕರ್ ಅವರು ತಮ್ಮ ಜೀವನ ದುದ್ದಕ್ಕೂ ಅವಮಾನ ಮತ್ತು ನೋವನ್ನು ಅನುಭವಿಸಿದರು ಆದರೂ ತಮ್ಮ ಜೀವನದ ಗುರಿಯನ್ನು ತಲುಪಲು ಅವರು ನಿರಂತರವಾಗಿ ಪ್ರಯತ್ನಿಸಿ ಯಶಸ್ವಿಯಾದರು. ಅವರು ನಮಗೆ ವಿಶ್ವವಿಖ್ಯಾತವಾದ ಸಂವಿಧಾನವನ್ನು ಕೊಟ್ಟು ಹೋಗಿದ್ದಾರೆ ಇಂಥ ಶ್ರೇಷ್ಠ ಗ್ರಂಥವನ್ನು ಬದಲಿಸುವ ಮಾತುಗಳನ್ನು ಕೆಲವರು ಹೇಳುತ್ತಿದ್ದಾರೆ ಇದು ಎಂದಿಗೂ ಸಾಧ್ಯವಾಗುವುದಿಲ್ಲ ಎಂಬುದು ಅವರು ತಿಳಿಯಬೇಕಾಗಿದೆ ಎಂದರು.  

ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸಿಲ್ದಾರ ಕೀರ್ತಿ ಚಾಲಕ್ ಅವರು ಶ್ರೇಷ್ಠ ದಾರ್ಶನಿಕರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಶ್ರೇಷ್ಠವಾದ ಸಂವಿಧಾನವನ್ನು ನಮಗೆ ಕೊಟ್ಟು ಹೋಗಿದ್ದಾರೆ ಅದರಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು ಹಾಗೂ ಕರ್ತವ್ಯಗಳನ್ನು ತಿಳಿಸಲಾಗಿದೆ. ಡಾ. ಬಿ .ಆರ್‌. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನೆಡೆಯಬೇಕಾಗಿದೆ ಎಂದರು. ಕಾರ್ಯಕ್ರಮದ ಮುನ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ತಾಲೂಕು ಆಡಳಿತ ಹಾಗೂ ಅಂಬೇಡ್ಕರ ಸಮಾಜದ ವತಿಯಿಂದ ಮಾಲಾರೆ​‍್ಣ ಮಾಡಿ ಗೌರವ ನಮನ ಸಲ್ಲಿಸಲಾಯಿತು.  

ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ. ತಾಪಂ.ಇಒ ಬಿ.ಆರಿ​‍್ಬರಾದಾರ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಬಿ. ಕಟ್ಟಿಮನಿ, ಪಿಎಸ್‌ಐ ಎಂ. ಡಿ. ಘೋರಿ, ದಲಿತ ಮುಖಂಡರಾದ ಮುತ್ತಪ್ಪ ಚಮಲಾಪೂರ, ಪುರಸಭೆ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ, ಬಸವರಾಜ ಕಟ್ಟಿಮನಿ, ಕಸಾಪ ಅಧ್ಯಕ್ಷ ಆರ್‌. ಎಲ್ ಕೊಪ್ಪದ, ದೇವು ಹಾದಿಮನಿ, ಕಾರ್ತಿಕ್ ಕಟ್ಟಿಮನಿ, ನಾಗೇಶ್ ಕಟ್ಟಿಮನಿ, ಮಹೇಶ ಚಲವಾದಿ, ಮುರಿಗೆಪ್ಪ ಸರಶೆಟ್ಟಿ, ಅಲ್ಲಾಬಕ್ಷ ನಮಾಜಕಟ್ಟಿ, ಮಾಸೂಮಸಾಬ ಕೆಂಭಾವಿ, ಮಂಜುನಾಥ ಶಟ್ಟಿ, ಇಬ್ರಾಹೀಂ ಮನ್ಸೂರ, ಗಂಗಾಧರ ಕಸ್ತೂರಿ, ಸಿಆರ್ಸಿ ರಾಜು ವಿಜಾಪೂರ, ಇಬ್ರಾಹಿಂ ಅಲಮೇಲ, ಪ್ರಮೋದ ಅಗರವಾಲ, ವಿಶ್ವ ಹಿಂದೂ ಪರಿಷತ ನಗರ ಅಧ್ಯಕ್ಷರು, ಗೋಪಾಲ ಕಟ್ಟಿಮನಿ, ಅಬೂಬಕರ ಲಾಹೋರಿ, ನಬಿ ಲಾಹೋರಿ, ಜೆ. ಆರ್‌.ಜೈನಾಪೂರ, ಸಮಾಜ ಕಲ್ಯಾಣ ಇಲಾಖೆಯ ಎಸ್‌. ಎಂ. ಕಲಬುರಗಿ ಕೋರಿ. ಪುರಸಭೆ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.