ನಿ.ಡಿವೈಎಸ್ಪಿ ಹುಲ್ಲೂರ ಕಾರ್ಯ ಶ್ಲಾಘನಿಯ: ಸಿದ್ದರಮಾನಂದಪುರಿಶ್ರೀ

ತಂದೆಯ ನೆನಪಿಗಾಗಿ ಕೋಟಿ ಬೆಲೆಬಾಳುವ ಜಮೀನು ಮಠಕ್ಕೆ ದಾನ 

ಮುದ್ದೇಬಿಹಾಳ 20:  ತಾಲೂಕಿನ ಬಿದರಕುಂದಿ ಗ್ರಾಮದ ತಾಲೂಕಿನ ಕುರುಬ ಸಮಾಜದ ಹಿರಿಯ ಮುಖಂಡ ಎಸ್ ಎಸ್ ಹುಲ್ಲೂರ ಅವರು ಅವರ ತಂದೆಯ ನೆನಪಿಗಾಗಿ ಪಟ್ಟಣದ ಸಂಗಮೇಶ್ವರ ನಗರ ಬಡಾವಣೆಯ ಬೀರಲಿಂಗೇಶ್ವರ  ದೇವಸ್ಥಾನದ ಹತ್ತಿರವಿರುವ  ಸುಮಾರು ಒಂದು ಕೋಟಿ ಬೆಲೆ ಬಾಳುವ ಖುಲ್ಲಾ ಜಮೀನನ್ನು ತಿಂಥಣಿ ಬ್ರಿಜ್ ಕಾಗೆನೆಲೆ  ಕನಕಗುರು ಪೀಠದ ಪೀಠಾಧಿಪತಿ ಸಿದ್ದರಮಾನಂದಪುರಿ ಮಹಾಸ್ವಾಮಿಗಳ ಮಠಕ್ಕೆ ಶೈಕ್ಷಣಿಕ ಉದ್ದೇಶಕ್ಕಾಗಿ ಉಚಿತ ದಾನವಾಗಿ ನೀಡಿದರು. 

ತಿಂಥಣಿ ಬ್ರಿಜ್ ಕಾಗೆನೆಲೆ  ಕನಕಗುರು ಪೀಠದ ಪೀಠಾಧಿಪತಿ ಸಿದ್ದರಮಾನಂದಪುರಿ ಮಹಾಸ್ವಾಮಿಗಳು ಮಾತನಾಡಿ ಹಣವಂತರು ತಾವು ಗಳಿಸಿದ ಒಂದು ಭಾಗವನ್ನು ಮನುಷ್ಯ ದಾನ ಧರ್ಮದ ಮೂಲಕ ಮಾನವಿಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಸಾಕಷ್ಟು ಜನ ಶ್ರೀಮಂತರಿದ್ದಾರೆ ಆದರೇ ದಾನ ಮಾಡುವ ಇಚ್ಚಾಶಕ್ತಿ ಇರುವುದಿಲ್ಲ ಆದರೇ ನಿವೃತ್ತ ಡಿವೈಎಸ್ಪಿ ಎಸ್ ಎಸ್ ಹುಲ್ಲೂರ ಅವರು ಸುಮಾರು ಒಂದು ಕೋಟಿ ರೂಗಳ ಬೆಲೆ ಬಾಳುವ ಆಸ್ತಿಯನ್ನು ನಮ್ಮ ಮಠದಿಂದ ನೂತನವಾಗಿ ನಿರ್ಮಿಸಲಾಗುತ್ತಿರುವ ರೇವಣಸಿದ್ದೇಶ್ವರ ವಾಣಿಜ್ಯ ಪದವಿ ಮಹಾವಿದ್ಯಾಲಯ ನಿರ್ಮಾಣಕ್ಕೆ ಸುಮಾರು 20 ಗುಂಟೆ ಜಮೀನನ್ನು ತಮ್ಮ ತಂದೆಯವರ ಹೆಸರಿನಲ್ಲಿ ದಾನದ ರೂಪದಲ್ಲಿ ದಾಖಲೆಗಳ ಸಮೇತ ಭಕ್ತರ ಸಮ್ಮುಖದಲ್ಲಿ ನೀಡಿದ್ದು ನಿಜಕ್ಕೂ ಶ್ಲಾಘನಿಯ ಎಂದರು. 

ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಹಾಗೂ ಅಭ್ಯೂದಯ ಪಿಯು ಸಾಯನ್ಸ್‌ ಕಾಲೇಜಿನ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ, ಕೆಂಚಪ್ಪ ಬಿರಾದಾರ, ಬಿ.ಎಸ್‌. ಮೇಟಿ,ನಾಗಪ್ಪ ರೂಢಗಿ, ಮೈಹಿಬೂಬ ಗೂರಿಕಾರ, ಬಿ ಜಿ ಬಿರಾದಾರ, ರವಿ ಜಗಲಿ, ಪ್ರದೀಪ ಜಗ್ಗಲ, ಈರಣ್ಣ ಬಡಿಗೇರ, ಸಂಗಮೇಶ ನಾಗೂರ ಸೇರಿದಂತೆ ಹಲವರು ಇದ್ದರು.