ಬಳ್ಳಾರಿ ರಿಂಗ್ರಸ್ತೆಗೆ 170 ಕೋಟಿ ರೂ.ಬಿಡುಗಡೆ ಮಾಡಿ
ಬಳ್ಳಾರಿ,ಜು.02: ಬಳ್ಳಾರಿ ನಗರದ ಉತ್ತರ ಭಾಗದ ರಾಷ್ಟ್ರೀಯ ಹೆದ್ದಾರಿ-63ರಿಂದ ಪ್ರಸ್ತಾಪಿತ ವಿಮಾನ ನಿಲ್ದಾಣಕ್ಕೆ ಸಂಪರ್ಕ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು 170 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಪ್ರಸ್ತಾಪಿತ ವಿಮಾನ ನಿಲ್ದಾಣಕ್ಕೆ ಸಂಪರ್ಕ ರಸ್ತೆ ಅಗತ್ಯತೆ ಮತ್ತು ಬುಡಾ ಸಭೆಯಲ್ಲಿ ಇತ್ತೀಚೆಗೆ ಜರುಗಿದ ಚಚರ್ೆ ಸೇರಿದಂತೆ ಇನ್ನೀತರ ವಿಷಯಗಳನ್ನು ಸವಿವರವಾಗಿ ವಿವರಿಸಿದರು.
ಮನವಿ ಪತ್ರ ಸ್ವೀಕರಿಸಿ ಬುಡಾ ಅಧ್ಯಕ್ಷರ ಮನವಿಯನ್ನು ಆಲಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಅವರು ಈ ಪ್ರಸ್ತಾವನೆಯನ್ನು ಕೂಡಲೇ ಸಲ್ಲಿಸುವಂತೆ ಇಲಾಖೆಯ ಕಾರ್ಯದಶರ್ಿಗಳಿಗೆ ಸೂಚನೆ ನೀಡಿದರು.
ಈ ರಿಂಗ್ ರಸ್ತೆಯು ಬಳ್ಳಾರಿ ನಗರದ ಉತ್ತರ ಭಾಗದಲ್ಲಿನ ಗ್ರಾಮಗಳಾದ ಬಳ್ಳಾರಿ, ಕೊಳಗಲ್ಲು, ಶ್ರೀಧರಗಡ್ಡೆ, ಕಪ್ಪಗಲ್ಲು-ಸಿರಿವಾರ ಹಾಗೂ ಕಕ್ಕಬೇವಿನಹಳ್ಳಿ ರೈತರ ಜಮೀನಿನಲ್ಲಿ ಹಾದು ಹೋಗುತ್ತದೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ವಿವರಿಸಿದರು.
ಬಳ್ಳಾರಿ ನಗರದ ಉತ್ತರ ಭಾಗದ ರಾಷ್ಟ್ರೀಯ ಹೆದ್ದಾರಿ-63 ರಿಂದ ಪ್ರಸ್ತಾಪಿತ ವಿಮಾನ ನಿಲ್ದಾಣಕ್ಕೆ ಸಂಪರ್ಕ ರಸ್ತೆಯ ಯೋಜನೆ ಎ.ಡಿ.ಡಿ ಇಲಾಖೆಯಿಂದ ಆಡಳಿತಾತ್ಮಕ ಮಂಜೂರಾತಿಯಾಗಿತ್ತು; ಅದರಂತೆ ಸದರಿ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಮನಿ ಟ್ರಾನ್ಸ್ಪೋಟರ್ೆಕ್ ಕನ್ಸಲ್ಟೆಂಟ್ ಅವರು 110ಕೋಟಿ ರೂ.ಗೆ ತಯಾರಿಸಿ ಸಲ್ಲಿಸಿರುತ್ತಾರೆ. ತಾಂತ್ರಿಕ ಬಿಡ್ಗಳ ಅನುಮೋದನೆ ಹಂತದಲ್ಲಿ ಪ್ರಸ್ತಾಪಿತ ಯೋಜನೆ ಕೈಬಿಡಲಾಗಿತ್ತು. ಪ್ರಸ್ತಾಪಿತ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ವಿಶೇಷ ಅನುದಾನದಲ್ಲಿ ಕೈಗೊಳ್ಳಲು ಪ್ರಸ್ತಾವನೆಯನ್ನು ಸಕರ್ಾರಕ್ಕೆ ಸಲ್ಲಿಸಲು ಇತ್ತೀಚೆಗೆ ನಡೆದ ಬುಡಾ ಸಭೆಯಲ್ಲಿ ನಿರ್ಧರಿಸಲಾಗಿತ್ತು ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ತಿಳಿಸಿದರು.
ಈ ಪರಿಷ್ಕೃತ ಯೋಜನಾ ಮೊತ್ತವು 170 ಕೋಟಿ ರೂ.ಗಳಾಗಿದ್ದು, ಸದರಿ ರಸ್ತೆ ಮಹಾ ಯೋಜನೆ ಅನುಮೋದಿತ ರಸ್ತೆಯಾಗಿದ್ದು, ವಿಮಾನ ನಿಲ್ದಾಣಕ್ಕೆ ಪ್ರಸ್ತಾಪಿತ ರಸ್ತೆ ಸಂಪರ್ಕವು ಅತ್ಯವಶ್ಯಕವಾಗಿರುತ್ತದೆ. ಆದ ಕಾರಣ ವಿಶೇಷ ಅನುದಾನದಲ್ಲಿ 170ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದರು.ಬಳ್ಳಾರಿ ನಗರದ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಚಿವರೊಂದಿಗೆ ಬುಡಾ ಅಧ್ಯಕ್ಷರು ಸುಧೀರ್ಘ ಚಚರ್ೆ ನಡೆಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 