ಜಿಲ್ಲಾ ಅಭಿವೃದ್ದಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ

ಮಹಿಳೆಯರಿಗೆ ಆರ್ಥಿಕ ನೆರವಾಗುವ ಕಾರ್ಯಕ್ರಮ ಹಾಕಿಕೊಳ್ಳಲು ಸಂಸದ ವೈ.ದೇವೇಂದ್ರ​‍್ಪ ಸೂಚನೆ 

ಹೊಸಪೇಟೆ(ವಿಜಯನಗರ): ರಾಷ್ಟ್ರೀಯ ಗ್ರಾಮೀಣ ಲಲ್ವಿಹುಡ್ ಮಿಷನ್ ಯೋಜನೆಯಡಿ ಖಾತರಿ ಯೋಜನೆಯಡಿ ಆರ್ಥಿಕವಾಗಿ ನೆರವಾಗುವ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಜೆ.ಜೆ.ಎಂ ನಲ್ಲಿಯು ಇದಕ್ಕೆ ಅವಕಾಶ ಕಲ್ಪಿಸಿರುವುದು ಆಶಾದಾಯಕ ಬೆಳೆವಣಿಗೆಯಾಗಿದೆ ಎಂದು ಸಂಸದರಾದ ವೈ.ದೇವೇಂದ್ರ​‍್ಪ ತಿಳಿಸಿದರು.  

 ಅವರು ಸೋಮವಾರ ವಿಜಯನಗರ ಕ್ರೀಡಾ ಇಲಾಖೆ ಒಳಾಂಗಣ ಸಭಾಂಗಣದಲ್ಲಿ ಏರಿ​‍್ಡಸಲಾದ ದಿಶಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪ್ರಗತಿ ಪರೀಶೀಲನೆ ನಡೆಸಿದ ವೇಳೆ ತಿಳಿಸಿದರು. ಜಿಲ್ಲೆಯಲ್ಲಿ ಮನೆ ಮನೆಗೂ ನಲ್ಲಿ ನೀರನ್ನು ಪೂರೈಕೆ ಮಾಡಲು ಜಲ ಜೀವನ್ ಮಿಷನ್ ಯೋಜನೆಯಡಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಿದ್ದು ಇಲ್ಲಿ ಕಾಮಗಾರಿಗಳಿಗೆ ಅಳವಡಿಸುವ ನಾಮಫಲಕಗಳನ್ನು ಹಾಕಲು ಮಹಿಳಾ ಸ್ವ ಸಹಾಯ ಗುಂಪುಗಳಿಂದ ತಯಾರಿಸಲಾದ ಸ್ಟ್ಯಾಂಡ್ ಪೋಸ್ಟ್‌ ಖರೀದಿಗೆ ಉದ್ದೇಶಿಸಿ ತಯಾರಿಕೆಗೆ ಮಹಿಳೆಯರಿಗೆ ತರಬೇತಿ ನೀಡಿ ಸ್ಟ್ಯಾಂಡ್ ಸಿದ್ದಪಡಿಸಿರುವುದು ಮಹಿಳೆಯರ ಆರ್ಥಿಕಾಭಿವೃದ್ದಿಗೆ ಪೂರಕವಾಗಿದೆ ಎಂದರು. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣ್ ರಾವ್ ಅವರು ಉತ್ತಗಿಯಲ್ಲಿ 160 ಮತ್ತು ಮೈಲಾರದಲ್ಲಿ 190 ಸ್ಟ್ಯಾಂಡ್‌ಗಳನ್ನು ತಯಾರಿಸಲಾಗಿದೆ ಎಂದು ಈ ವೇಳೆ ಪ್ರಸ್ತಾಪಿಸಿದರು.  

 ಯೋಜನಾ ವಿಭಾಗದ ಇಂಜಿನಿಯರ್‌ಗೆ ನೋಟಿಸ್; ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಭೆಗೆ ಯಾವುದೇ ಅನುಮತಿ ಪಡೆಯದೇ ಗೈರಾಗಿದ್ದು ಕಚೇರಿ ತಾಂತ್ರಿಕ ಸಹಾಯಕರನ್ನು ಕಳುಹಿಸಲಾಗಿದೆ. ಸಭೆಗೆ ಮಾಹಿತಿ ನೀಡಲು ಸಹ ಇವರು ವಿಫಲವಾಗಿದ್ದು ಯಾವುದೇ ಪೂರ್ವಾನುಮತಿ ಪಡೆಯದೇ ಗೈರಾಗಿರುವ ಕಾರ್ಯಪಾಲಕ ಇಂಜಿನಿಯರ್‌ಗೆ ನೋಟಿಸ್ ನೀಡಲು ಸಿಇಓ ಗೆ ಸೂಚನೆ ನೀಡಿದರು. ಪಿಎಂಜಿಎಸ್‌ವೈ ಯೋಜನೆಯಡಿ ನಿರ್ಮಾಣ ಮಾಡಲಾದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ ಎಂದು ಸಾಕಷ್ಟು ದೂರುಗಳಿದ್ದು ಇದಕ್ಕೆ ಯೋಜನಾ ವಿಭಾಗದ ಇಂಜಿನಿಯರ್ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಮಾಹಿತಿ ಇದ್ದ ಕಾರಣ ಸಭೆಗೆ ಗೈರಾಗಿದ್ದಾರೆ ಎಂದು ಸಂಸದರು ತಮ್ಮ ಅಸಮಧಾನ ವ್ಯಕ್ತಪಡಿಸಿದರು.  

 ಅಂಗನವಾಡಿ ಕಟ್ಟಡಗಳು ಅಪೂರ್ಣ; ವಿವಿಧ ಯೋಜನೆಯಡಿ ಅನುದಾನವನ್ನು ನೀಡಿದ್ದರೂ ಸಹ ಅಂಗನವಾಡಿ ಕಟ್ಟಡಗಳನ್ನು 2016 ರಿಂದ ನಿರ್ಮಾಣ ಮಾಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಒಟ್ಟು 115 ಅಂಗನವಾಡಿಗಳ ನಿರ್ಮಾಣಕ್ಕಾಗಿ 16 ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ 10.35 ಕೋಟಿ ವೆಚ್ಚ ಮಾಡಿ 88 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಇನ್ನೂ 19 ಕಾಮಗಾರಿಗಳು ಪ್ರಗತಿಯಲ್ಲಿದ್ದು 8 ಕಾಮಗಾರಿಗಳು ಆರಂಭವಾಗಿರುವುದಿಲ್ಲ. ಅಧಿಕಾರಿಗಳು ಜಾಗದ ಸಮಸ್ಯೆ ಇದ್ದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಹಣ ನೀಡಿದರೂ ಕೆಲಸ ಮಾಡಲ್ಲವೆಂದರೇ ಹೇಗೆ ಎಂದು ಕೆಆರ್‌ಡಿಎಲ್ ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ತಿಳಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ ಜಿಲ್ಲೆಗೆ ಕೆಕೆಆರ್‌ಡಿಬಿ, ಡಿಎಂಎಫ್ ಸೇರಿದಂತೆ ಇಲಾಖೆ ಅನುದಾನಗಳು ಬರಲಿದ್ದು ಇದಕ್ಕೆ ಆಯಾ ಇಲಾಖೆಗಳು ಅಸೆಟ್ ಮಾನಿಟೈಜೇಷನ್ ಮಾಡಿಕೊಳ್ಳಬೇಕೆಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಜನರ ಸ್ವ ಉದ್ಯೋಗಕ್ಕೆ ಸಾಲ, ಸೌಲಭ್ಯಕ್ಕೆ ಕೊಡಿಸಿ; ಜನರಿಗೆ ವಿವಿಧ ಅಭಿವೃದ್ದಿ ನಿಗಮಗಳಿಂದ ಸ್ವ ಉದ್ಯೋಗಕ್ಕಾಗಿ ಸಾಲ, ಸೌಲಭ್ಯವನ್ನು ನೇರವಾಗಿ ಹಾಗೂ ಬ್ಯಾಂಕ್ ಮೂಲಕ ಸಾಲವನ್ನು ನೀಡಲಾಗುತ್ತಿದ್ದು ಯಾವ ಬ್ಯಾಂಕ್‌ಗಳಲ್ಲಿ ಸಾಲ ನೀಡುವುದಿಲ್ಲವೋ ಅಂತಹ ಬ್ಯಾಂಕ್ ಮ್ಯಾನೇಜರ್‌ಗೆ ಮಾಹಿತಿ ನೀಡಿ ಸಾಲ ಕೊಡಿಸಲು ಕಾಲ ಕಾಲಕ್ಕೆ ಲೀಡ್ ಬ್ಯಾಂಕ್ ಸಭೆಯನ್ನು ನಡೆಸಬೇಕೆಂದು ಸೂಚನೆ ನೀಡಿದರು. ಈ ವೇಳೆ ಲೀಡ್ ಬ್ಯಾಂಕ್ ಮ್ಯಾನೇಜರ್ ಸಭೆಗೆ ಕೆಲವೇ ಕೆಲವು ಇಲಾಖೆ ಅಧಿಕಾರಿಗಳು ಬರುತ್ತಾರೆ. ಸಭೆಗೆ ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಬಂದಲ್ಲಿ ಸಮಸ್ಯೆಗಳನ್ನು ನೇರವಾಗಿ ಆಯಾ ಬ್ಯಾಂಕ್‌ಗಳ ಮ್ಯಾನೇಜರ್ ಜೊತೆ ಚರ್ಚಿಸಿ ಇತ್ಯರ್ಥ ಮಾಡಲು ಅನುಕೂಲವಾಗುತ್ತದೆ ಎಂದಾಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಬ್ಯಾಂಕರ​‍್ಸ‌ಗಳ ಸಭೆಯನ್ನು ನಡೆಸಿ ಕ್ರಮ ಕೈಗೊಳ್ಳಲು ಸಂಸದರು ತಿಳಿಸಿದರು.  

 ಖಾತರಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ; ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ವಿಜಯನಗರ ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿದೆ. ಮೊದಲ ಸ್ಥಾನ ಬಳ್ಳಾರಿಯಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ 66.30 ಲಕ್ಷ ಮಾನವ ದಿನಗಳ ಸೃಜನೆ ಗುರಿಯಲ್ಲಿ ಈಗಾಗಲೇ 53.47 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು 204.86 ಕೋಟಿ ಆರ್ಥಿಕ ಗುರಿಯಲ್ಲಿ ಬಿಡುಗಡೆಯಾದ 158.60 ಕೋಟಿಯಲ್ಲಿ 155.13 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಿಇಓ ಸಭೆಯಲ್ಲಿ ತಿಳಿಸಿದಾಗ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದರು. ಖಾತರಿಯಲ್ಲಿ ಸ್ವ ಉದ್ಯೋಗಕ್ಕಾಗಿ 136 ಕೋಳಿ ಶೆಡ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.  

 ಸಭೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಶ್ರೀಹರಿಬಾಬು, ದಿಶಾ ಸಮಿತಿ ಸದಸ್ಯೆ ಕುಸುಮ ಜಗದೀಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.