ಹುಟ್ಟು ಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ
Distribution of fruits to patients on the occasion of the birthday
ಯರಗಟ್ಟಿ 10: ದಲಿತ ಮುಖಂಡ, ಎಸ್.ಬಿ. ಪೌಂಡೇಶನ್ ಸಂಸ್ಥಾಪಕ ಸುರೇಶ ಭಜಂತ್ರಿ ಅವರ ಹುಟ್ಟು ಹಬ್ಬದ ನಿಮಿತ್ಯ ಸುರೇಶಅಣ್ಣಾ ಅಭಿಮಾನಿ ಬಳಗದಿಂದ ರೋಗಿಗಳ ಹೆಣ್ಣು ಹಂಪಲು ಹಾಗೂ ಅಂಬೇಡ್ಕರ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದರು.ನಂತರ ರಬಕವಿಯ ನದಾಫ ಹೈಟೆಕ್ ಕಣ್ಣಿನ ಆಸ್ಪತ್ರೆ ಹಾಗೂ ಎಸ್.ಬಿ. ಫೌಂಡೇಶನ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಇವರ ಆಶ್ರಯದಲ್ಲಿ ವಯೋವೃದ್ಧರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ರಫೀಕ ಡಿ.ಕೆ ಸುರೇಶ ಭಜಂತ್ರಿ ಅವರು ಹುಟ್ಟು ಹಬ್ಬದ ನಿಮಿತ್ಯ ಅನಾಥಾಶ್ರಮಗಳು,
ವೃದ್ಧಾಶ್ರಮಗಳು ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸುವುದು ಅತ್ಯಂತ ಶ್ರೇಷ್ಠ ಹಾಗೂ ಸಮಾಜಮುಖಿ ಕಾರ್ಯವಾಗಿದೆ. ಇದು ಬಡವರಿಗೆ ಮತ್ತು ನಿರ್ಗತಿಕರಿಗೆ ನೆರವಾಗುವುದಲ್ಲದೆ, ನಿಮ್ಮ ಹುಟ್ಟು ಹಬ್ಬಕ್ಕೆ ಸಾರ್ಥಕತೆಯನ್ನು ತಂದುಕೊಡುತ್ತದೆ ಎಂದು ಹೇಳಿದರು.ಈ ವೇಳೆ ದಲಿತ ಮುಖಂಡರಾದ ಮಾರುತಿ ಭಜಂತ್ರಿ, ಬಸವರಾಜ ಕಟ್ಟಿಮನಿ, ರಮೇಶ ಗಿಡ್ಡವಗೋಳ, ಕರವೇ ಅಧ್ಯಕ್ಷ, ರಫೀಕ ಡಿ. ಕೆ., ಮಹಾಂತೇಶ ಕಲ್ಲೋಳ್ಳಿ, ಕಿರಣ ಭೋವಿ, ಫಾರಕ್ ಅತ್ತಾರ, ಕೊಟ್ರೇಶ ಎ, ಮುದಕ್ಕಪ್ಪ ಕರಿಗೊಣ್ಣವರ, ಫಕ್ಕೀರ ಬಸಿಡೋಣಿ, ಅಪ್ಪು ಕರಿಗೊಣ್ಣವರ, ಸಿದ್ದಪ್ಪ ಕರಿಗೊಣ್ಣವರ, ಮಾಳಪ್ಪ ಕರಿಗಾರ, ಗೌಡಪ್ಪ ಆಲದಕಟ್ಟಿ ಸೇರಿದಂತೆ ಅನೇಕರು ಇದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 