ವಿದ್ಯಾರ್ಥಿಗಳ ಯಶಸ್ವಿಗೆ ಜೀವನದಲ್ಲಿ ಶಿಸ್ತು ಅಗತ್ಯ : ಶ್ರೀ ನಿಂಗಪ್ಪ ಸಂಗ್ರೇಜಿಕೊಪ್ಪ
Discipline is essential for students' success in life: Sri Ningappa Sangrejikoppa
ವಿದ್ಯಾರ್ಥಿಗಳ ಯಶಸ್ವಿಗೆ ಜೀವನದಲ್ಲಿ ಶಿಸ್ತು ಅಗತ್ಯ : ಶ್ರೀ ನಿಂಗಪ್ಪ ಸಂಗ್ರೇಜಿಕೊಪ್ಪ
ಗೋಕಾಕ, 24 : ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳುವುದು ತುಂಬಾ ಅಗತ್ಯವಾಗಿದೆ ಎಂದು ಮೂಡಲಗಿಯ ಶ್ರೀ ಶ್ರೀಪಾದಬೋಧ ಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ನಿಂಗಪ್ಪ ಸಂಗ್ರೇಜಿಕೊಪ್ಪ ಹೇಳಿದರು. ಇಲ್ಲಿನ ಜೆ. ಎಸ್. ಎಸ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕಗಳ ಅಡಿಯಲ್ಲಿ ಏರಿ್ಡಸಿದ್ದ “ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ದಿನ ಮತ್ತು ಪುನಶ್ಚೇತನ ಕಾರ್ಯಕ್ರಮ”ದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳ ಯಶಸ್ವಿಗೆ ಶಿಸ್ತು ಅಗತ್ಯವೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಬಿ. ಎಮ್. ತುರಡಗಿ ವಹಿಸಿದ್ದರು. ಉಪ-ಪ್ರಾಚಾರ್ಯರಾದ ಡಾ. ಆರ್. ಎಸ್. ಬಳಿಗಾರ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಡಾ. ಸಿ. ಎ. ಮಸರಗುಪ್ಪಿ(ಘಟಕ-1) ಮತ್ತು ಶ್ರೀ ಎಂ. ವ್ಹಿ. ಗೊರಗುದ್ದಿ (ಘಟಕ-2), ಉರ್ದು ವಿಭಾಗದ ಮುಖ್ಯಸ್ಥರಾದ ಡಾ, ಕೆ. ಆಯ್. ಇಂಡಿಕಾರ ಅವರು ಉಪಸ್ಥಿತರಿದ್ದರು.
ಕು. ಸಾನಿಯಾ ದೇಸಾಯಿ ಸ್ವಾಗತಿಸಿದರು. ಕು. ವಂದನಾ ಮತ್ತು ಸಂಗಡಿಗರು ಎನ್.ಎಸ್.ಎಸ್. ಭಾವೈಕ್ಯತಾ ಗೀತೆ ಹಾಡಿದರು. ಶ್ರೀ ಎಂ. ವ್ಹಿ. ಗೊರಗುದ್ದಿ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕು. ವೈಷ್ಣವಿ ಕಲ್ಯಾನಂದ ವಂದನಾರೆ್ಣ ಮಾಡಿದರು ಹಾಗೂ ಕು. ಲಕ್ಷ್ಮೀ ಬಾಗಾದಿ ಕಾರ್ಯಕ್ರಮವನ್ನು ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 