ಮಹಲಿಂಗಪುರ

ವಿಪತ್ತು ನಿರ್ವಹಣಾ ಮುಂಜಾಗ್ರತಾ ಸಭೆ

ವಿಪತ್ತು ನಿರ್ವಹಣಾ ಮುಂಜಾಗ್ರತಾ ಸಭೆ

ಮಹಾಲಿಂಗಪುರ 08: ಪುರಸಭೆ ನೂತನ ಮುಖ್ಯಾಧಿಕಾರಿ ನಾಮದೇವ ಲಮಾನಿ ಅಧ್ಯಕ್ಷತೆಯಲ್ಲಿ ಸೋಮವಾರ ಮುಂಜಾನೆ ವಿಪತ್ತು ನಿರ್ವಹಣಾ ಮುಂಜಾಗ್ರತಾ ಸಭೆ ನಡೆಯಿತು. 

ಈ ಸಭೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ವಸತಿ, ಆಹಾರ, ಆರೋಗ್ಯ, ಹೆಸ್ಕಾಂ, ಪೋಲೀಸ್ ಇಲಾಖೆ, ತಾಲೂಕು ಅಗ್ನಿಶಾಮಕ ದಳ, ಶಿಕ್ಷಣ ಇಲಾಖೆ (ಸಿಆರ್ಸಿ), ಜಿಎಲ್ ಬಿಸಿ, ಪಿಡಬ್ಲ್ಯೂಡಿ ಮತ್ತು ಪಶು ವೈದ್ಯಾಧಿಕಾರಿಗಳು ಭಾಗವಹಿಸಿ ವಿಪತ್ತು ಕುರಿತು ತಯಾರಿಯನ್ನು ಸಭೆಗೆ ತಿಳಿಸಿದರು. ಪುರಸಭೆ ಅಧಿಕಾರಿಗಳಾದ ಎಸ್‌. ಎನ್‌.ಪಾಟೀಲ್, ಎಂ ಎಸ್ ಮುಗಳಖೋಡ ಇದ್ದರು. 


ಸುದ್ದಿ ಓದಿ