ಮರಗಾಲು ಕಟ್ಟಿಕೊಂಡು ಶ್ರೀಶೈಲ ಮಲ್ಲಿಕಾರ್ಜುನನ ಸನ್ನಿದಿಗೆ ಹೊರಟ ಭಕ್ತರು

* ವಿಶಿಷ್ಠ ಭಕ್ತಿಯನ್ನು ಸಮರ​‍್ಿಸುವ ಗ್ರಾಮಸ್ಥರು, * ಶ್ರೀಕಂಬಿ ಮಲ್ಲಯ್ಯ ದೇವರ ಹೊತ್ತು ತರಳುವ ಭಕ್ತರು,  

ಸಂಜೀವ ಮುಷ್ಠಗ್ವಿ 

ಉಳ್ಳಾಗಡ್ಡಿ-ಖಾನಾಪೂರ:-ನೇಗಿಲಯೋಗಿಗಳು ತಮ್ಮ ಹೊಲ-ಗದ್ದೆಗಳ ಕಾಯಕವನ್ನು ಮುಗಿಸಿಕೊಂಡು ಮಠ-ಮಾನ್ಯ ತೀರ್ಥಕ್ಷೇತ್ರಗಳಿಗೆ ಹೊಗಿ ಭಕ್ತಿಯನ್ನು ಸಮರ​‍್ಿಸುವ ವಿಶಿಚ್ಠ ಆಚರಣೆಗಳು ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುತ್ತವೆ ಇಂಥ ಅಪರೂಪದ ದೃಶ್ಯ ರವಿವಾರ ದಿ,5 ರಂದು ಕಾಣಸಿಕ್ಕಿತು, 

ನಿರಂತರವಾಗಿ ಗ್ರಾಮೀಣ ವಲಯದಿಂದ ಕಳೆದ 10 ವರ್ಷಗಳಿಂದ ಉಳ್ಳಾಗಡ್ಡಿ-ಖಾನಾಪೂರ ಗ್ರಾಮದಿಂದ ಭಕ್ತರು ಶ್ರೀಶೈಲಕ್ಕೆ ಪಾದ ಯಾತ್ರೆ ಮೂಲಕ ತೆರಳುವುದು ವಾಡಿಕೆ,  

ವಿಶಿಷ್ಠ ಸೇವೆ:-ಶ್ರೀಶೈಲ ಮಲ್ಲಿಕಾರ್ಜುನನ ಸನ್ನಿದಿಗೆ ಕಳೆದ ಎರಡು ವರ್ಷಗಳಿಂದ ಗ್ರಾಮದ ಯುವಕರಾದ ಮಹಾಂತೇಶ ಗಿರಮಲ್ಲನವರ ಹಾಗೂ ಶಿವಾನಂದ ಚೌಗಲಾ, ವಿಶಿಷ್ಠ ಹರಕೆಯಾದ ಮರಗಾಲು ನಡಿಗೆ" "ಮರಗಾಲು ಕಟ್ಟಿಕೊಂಡು ಈ ಇಬ್ಬರು ಯುವಕರು ಶ್ರೀಶೈಲಕ್ಕೆ ಸುಮಾರು 10 ದಿನಗಳಿಂದ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಈ ಸೇವೆ ಸಲ್ಲಿಸುತ್ತಿದ್ದಾರೆ, 

ಭವ್ಯ ಮೆರವಣಿಗೆ:-ಗ್ರಾಮದಿಂದ ತೆರಳುವ ಭಕ್ತರನ್ನು ಗ್ರಾಮಸ್ತರು ಅತ್ಯಾದರದಿಂದ ನೀರು ಹಾಕಿ, ಪದ್ದತಿಯಂತೆ ಪೂಜೆ ನೆರವೆರಿಸಿ ಕಂಬಿ ಮಲ್ಲಯ್ಯ ದೇವರನ್ನು ಹೊತ್ತು ಪಾದಯಾತ್ರೆಯಲ್ಲಿ ತೆರಳುವವರನ್ನು ಬಿಳ್ಕೋಡು ಸಂದರ್ಭ ವಿಶಿಷ್ಠವೇ ಹೌದು..ಽ 

ಭಕ್ತಸಮೂಹ:-ಶ್ರೀಶೈಲ ಮಲ್ಲಿಕಾರ್ಜುನ ದೇವರ ಸನ್ನಿಧಿಗೆ ಉಳ್ಳಾಗಡ್ಡಿ-ಖಾನಾಪೂರ, ಹಂಚಿನಾಳ,ಕುರಣಿ,ಕುರಣಿವಾಡಿ, ಗ್ರಾಮಗಳಿಂದ ಸುಮಾರು 300 ಕ್ಕೂ ಹೆಚ್ಚು ಜನ ಭಕ್ತರು ಪಾದಯಾತ್ರೆಯ ಮೂಲಕ ಸುಮಾರು 10 ದಿನಗಳ ಕಾಲ ತೆರಳಿ ದೇವರ ಸನ್ನಿದಿಗೆ ಪಾತ್ರರಾಗಿ ಹರಕೆ ತೀರಿಸಿ ಬರುತ್ತಾರೆ, 

ಇಂಥ ವಿಶಿಷ್ಠ ಆಚರಣೆಗಳು ಇಂದಿಗೂ ಗ್ರಾಮೀಣ ವಲಯವಾದ ಉಳ್ಳಾಗಡ್ಡಿ-ಖಾನಾಪೂರದಲ್ಲಿ ನಡೆಯುತ್ತಿರುವುದು ವಿಶಿಷ್ಠ