ಬಂತನಾಳ ಮಠದ ಉತ್ತರಾಧಿಕಾರಿ ನೇಮಕಕ್ಕೆ ಭಕ್ತರ ಒಮ್ಮತ

ಬಂತನಾಳ ಮಠದ ಉತ್ತರಾಧಿಕಾರಿ ನೇಮಕಕ್ಕೆ ಭಕ್ತರ ಒಮ್ಮತ Devotees agree to appoint successor to Banthanala Mutt

ಲೋಕದರ್ಶನ ವರದಿ 

ತಾಂಬಾ 24 : ಬಂಥನಾಳದ ವೃಷಭ ಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಯಾಗಿ ನೇಮಿಸುವ ಪೂರ್ವಭಾವಿ ಸಭೆಯಲ್ಲಿ ಬಂಥನಾಳ ಶ್ರೀಮಠದ ಭಕ್ತರಾದ ಮಲ್ಲಯ್ಯ ಸಾರಂಗಮಠ, ಜಿ.ವೈ.ಗೋರನಾಳ, ರವಿ ಭೋಳೆಗಾವ ಮಾತನಾಡಿ ಯರನಾಳದ ಸಂಗನಬಸವ ಶಿವಯೋಗಿಗಳು ಹಾಗೂ ಬಂಥನಾಳದ ಈಗಿನ ಪೀಠಾಧ್ಯಕ್ಷರು ತಗೆದುಕೊಂಡ ನಿರ್ಣಯಕ್ಕೆ ಎಲ್ಲ ಭಕ್ತ ಸಮೂಹ ಒಕ್ಕೂರಿಲಿನ ಒಪ್ಪಿಗೆಯನ್ನು ಸುಚಿಸಿತ್ತು.  ಈ ಸಭೆಯಲ್ಲಿ ತಾಂಬಾ, ತೆನಿಹಳ್ಳಿ, ಗೊರನಾಳ, ಬನ್ನೆಟ್ಟಿ, ಹಿರೇರೂಗಿ, ಹಿರೇಮಸಳಿ, ಸಂಗೋಗಿ, ಬಂಥನಾಳ, ರಾಮನಳ್ಳಿ, ವಾಢೇ, ಸುರಗಿಹಳ್ಳಿ, ಬಳಗಾನೂರ, ಚಾಂದಕವಟೆ, ಚ್ಚಿಕ್ಕರೂಗಿ, ಶಿವಣಗಿ, ಕಡ್ಲೇವಾಡ, ಗಂಗನಹಳ್ಳಿ, ಚಟ್ಟರಕಿ, ಶಿವಪೂರ ಸೇರಿದಂತೆ ಮತ್ತಿತರ ಗ್ರಾಮಗಳಿಂದ ಆಗಮಿಸಿದ ಸಾವೀರಾರು ಭಕ್ತರು ಶ್ರೀಗಳ ಇಚ್ಚೆಗೆ ಒಪ್ಪಿಗೆಯನ್ನು ಸುಚಿಸಿದರು.