ದೇವಿ ಮಹಾತ್ಮೆ ಪಾರಾಯಣ, ಮೌನ ಅನುಷ್ಟಾನ ಮಂಗಳ ಕಾರ್ಯಕ್ರಮ

ಕಾರಟಗಿ 11: ತಾಲೂಕಿನ ಮೈಲಾಪುರ ಗ್ರಾಮದ ಶ್ರೀ ಯಲ್ಲಾಲಿಂಗೆಶ್ವರ ಮಠದಲ್ಲಿ 9ದಿನಗಳ ಪರ್ಯಂತವಾಗಿ ದೇವಿ ಮಹಾತ್ಮೆ ಪಾರಾಯಣ ಹಾಗೂ ಮೌನ ಅನುಷ್ಟಾನ ಮಂಗಳ ಕಾರ್ಯಕ್ರಮ ನಡೆಯಿತು.  

ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯ ವಹಿಸಿದ ಶ್ರೀ ಅಭಿನವ ಚರಂತೆಶ್ವರ  

ಸ್ವಾಮೀಜಿ  ನಂದಿಪುರ ಮಾತನಾಡಿ ಲೋಕಕ್ಕೆ ಶರಣರ ಕೊಡುಗೆ ಅಗಾಧ ನಮ್ಮ ನಾಡಿನ ಸಂತ ಶರಣರ ಅನುಷ್ಠಾನ ಲೋಕದ ಹಿತಕ್ಕಾಗಿ ಮತ್ತು ಮಾನವನ ಕಲ್ಯಾಣಕ್ಕಾಗಿ ಪ್ರತಿಯೊಬ್ಬರೂ ತನ್ನ ತಾನು ಅರಿತು ಬದುಕಿದರೆ ಅದುವೇ ಅನುಷ್ಟಾನ ಎಂದರು. 

ಮೌನ ಅನುಷ್ಟಾನಗೈದ ಪೂಜ್ಯ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ದೇಶಕ್ಕಾಗಿ ಸೇವೆ ಸಲ್ಲಿಸುವ ಸೈನಿಕ ಮತ್ತು ಅನ್ನದಾತ ಸದಾ ಕಾಲ ಸುಖಿಯಾಗಿರಲಿ, ಜಗತ್ತಿಗೆ ತಮ್ಮ ಬದುಕನ್ನೇ ಅನುಷ್ಟಾನ ಮಾಡಿಕೊಂಡು ಅಂದ ಅನಾಥ ಮಕ್ಕಳಿಗೆ ತ್ರಿವಿಧ ದಾಸೋಹದ ಮೂಲಕ ಸಂತ ಶ್ರೇಷ್ಠರಾದ ಗದಗಿನ ಪೂಜ್ಯ ಶ್ರೀ ಪುಟ್ಟರಾಜ ಗವಾಯಿಗಳು ಹಾಗು ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರನ್ನು ನೆನೆದರು,  

ಕಾರ್ಯಕ್ರಮದಲ್ಲಿ ಶ್ರೀ ವಿಶ್ವನಾಥ ಸ್ವಾಮಿ ಹಿರೇಮಠ ಆಯ್ಯನಗೌಡ ಮೇಳಮಾಳಗಿ,ಲಿಂಗನಗೌಡ ಗೋನಾಳ ಮತ್ತು ಪಂಡಿತ ಪುಟ್ಟರಾಜ ಗವಾಯಿಗಳ ಗುರು ಬಂಧುಗಳಿಂದ ಸಂಗೀತ ಹಾಗೂ ವೈಧಿಕ ಬಳಗದಿಂದ ಪೂಜೆ ಸಲ್ಲಿಸಿದರು ಭಕ್ತ ಬಳಗದಿಂದ ಸೇವೆ ಸಲ್ಲಿಸಿದರು.