ಬೆಳಗಾವಿ ಕಿತ್ತೂರು ಕರ್ನಾಟಕ 371(ಜೆ) ಜಾರಿಗೆ ಆಗ್ರಹಿಸಿ ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ ಎಂಬ ಘೋಷಣೆಯೊಂದಿಗೆ ಕಿತ್ತೂರು ಕಲ್ಯಾಣ ಕರ್ನಾಟಕ ಸೇನೆಯನ್ನು ಸ್ಥಾಪನೆ ಮಾಡಿದ್ದೇವೆ ಎಂದು ಕಿತ್ತೂರು ಕಲ್ಯಾಣ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಸಿದ್ದನಗೌಡಾ ಎಸ್. ಪಾಟೀಲ ಹೇಳಿದರು.
ಪ್ರವಾಸಿ ಮಂದಿರಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಿತ್ತೂರು ಕಲ್ಯಾಣ ಕರ್ನಾಟಕ ಸೇನೆ ಪಕ್ಷ ಸ್ಥಾಪನೆ ಮಾಡಲು ಹಲವಾರು ಕಾರಣಗಳಿವೆ. ಕರ್ನಾಟಕ ಏಕಿಕರಣವಾದಾಗಿನಿಂದ ಈ ಭಾಗವನ್ನು ಕಡೆಗಣಿಸುತ್ತಲೇ ಬರಲಾಗಿದೆ. ನೀರಾವರಿ, ರಸ್ತೆ, ವಿದ್ಯುತ್, ಶಿಕ್ಷಣ, ಸಾರಿಗೆ(ರೈಲು) ಆರೋಗ್ಯ ಇನ್ನೂ ಹತ್ತು ಹಲವು ಕ್ಷೇತ್ರದಲ್ಲಿ ಸಮನಾಗಿ ಅನುದಾನ ನೀಡದೆ ತಾರತಮ್ಯವೆಸಗುತ್ತಾ ಬರಲಾಗುತ್ತಿದೆ ಎಂದು ಆರೋಪಿಸಿದ ಅವರು ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯ ಎಂಬ ವಿಷಯದೊಂದಿಗೆ ಏಏಏಖ ಪಾರ್ಟಿಯನನು ಸ್ಥಾಪಿಸಲಾಗಿದೆ. ಮುಂಬರುವ ದಿನಮಾನಗಳಲ್ಲಿ ದಕ್ಷಿಣ ಕರ್ನಾಟಕಕ್ಕೆ ಸಿಗಬೇಕಾದ ಸೇವಾ ಸವಲತ್ತುಗಳು ಉತ್ತರ ಕರ್ನಾಟಕಕ್ಕೂ ಸಿಗದೇ ಹೋದ್ರೆ ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯ ಎಂಬ ಘೋಷ ವಾಕ್ಯದೊಂದಿಗೆ ಮುನ್ನಡೆದು, ಪ್ರತ್ಯೇಕ ರಾಜ್ಯಕ್ಕೆ ಹೋರಾಡುತ್ತೇವೆ. ಜನ ಪಕ್ಷ ಜಾತಿ ಭೇದ ಮರೆತು ನಮ್ಮ ಪಕ್ಷದೊಂದಿಗೆ ಕೈ ಜೋಡಿಸಬೇಕೆಂದು ಅವರು ಮನವಿ ಮಾಡಿದರು.
ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ ಪಕ್ಷದ ಮಹಿಳಾ ರಾಜ್ಯ ಅಧ್ಯಕ್ಷೆ ಅನ್ನಪೂರ್ಣಾ ಅನಿಲ್ ನಿರ್ವಾಣಿ ಮಾತನಾಡುತ್ತಾ ಅಧಿವೇಶನ ಕೇವಲ ಕಾಟಾಚಾರಕ್ಕೆ ನಡೆಯುತ್ತಿರುವುದು ತುಂಬಾ ನೋವನ್ನುಂಟು ಮಾಡುತ್ತಿದೆ. ಮುಗ್ಧ ಹಳ್ಳಿ ಜನರ ದಾರಿ ತಪ್ಪಿಸುತ್ತಿರುವ ಆಡಳಿತ ಸರ್ಕಾರಗಳು ಯಾವುದೇ ಅಭಿವೃದ್ಧಿಯ ಚಿಂತನೆ ಮಾಡಲಾರದೆ ಕಾಲ ಹರಣ ಮಾಡುತ್ತಿವೆ ಎಂದರು.
ರಾಜ್ಯದ ವಿವಿಧ ಜಿಲ್ಲೆಯ ಜಿಲ್ಲಾ ಅಧ್ಯಕ್ಷ, ಉಪಾಧ್ಯಕ್ಷ, ಪ್ರದಾನ ಕಾರ್ಯದರ್ಶಿ, ಹಾಗೂ ಸಂಘಟನಾ ಕಾರ್ಯದರ್ಶಿಗಳ ಪದಾಧಿಕಾರಿಗಳ ಆಯ್ಕೆಯನ್ನು ರಾಜ್ಯ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಅನ್ನಪೂರ್ಣಾ ಅನಿಲ್ ನಿರ್ವಾಣಿ ಜಂಟಿಯಾಗಿ ಪದಾಧಿಕಾರಿಗಳ ಆದೇಶ ಪತ್ರ ನೀಡಿ ಮುಂಬರುವ ದಿನಮಾನಗಳಲ್ಲಿ ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಕರೆ ನೀಡಿದರು.
ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲ್ ಞಞಞಢಿ ನ ರಾಷ್ಟ್ರೀಯ ಅಧ್ಯಕ್ಷರು,ಅನ್ನಪೂರ್ಣಾ ನಿಲ್ ನಿರ್ವಾನಿ (ರಾಜ್ಯ ಅಧ್ಯಕ್ಷರು ಮಹಿಳಾ ಘಟಕ),ಪ್ರಸಾದ್ ಕುಲ್ಕರ್ಣಿ(ಞಞಞಢಿ ನ ಬೆಳಗಾವಿ ಜಿಲ್ಲಾಧ್ಯಕ್ಷ),ಭಾಗ್ಯಶ್ರೀ ಹಣಬರ(ಞಞಞಢಿ
ನ ಬೆಳಗಾವಿ ಜಿಲ್ಲಾಧ್ಯಕ್ಷೆ)ಉಮೇಶ್ ದೇಶನೂರ(ರಾಜ್ಯ ಉಪಾಧ್ಯಕ್ಷ),ಆನಂದ ದಬ್ಬನವರ(ಪ್ರಧಾನ ಕಾರ್ಯದರ್ಶಿ ಬೆಳಗಾವಿ),ಶ್ರೀಕಾಂತ ಮಠಪತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂದು ಆದೇಶ ನೀಡಲಾಯಿತು.