ಶಿಕ್ಷಣ ಮತ್ತು ಸಂಘಟನೆಯಿಂದ ವಿಶ್ವಕರ್ಮ ಸಮಾಜದ ಅಭಿವೃದ್ಧಿ ಸಾಧ್ಯ: ಸಂಸದ ರಾಜಶೇಖರ ಹಿಟ್ನಾಳ
Development of the Vishwakarma community is possible through education and organization: MP Rajashek
ಕೊಪ್ಪಳ 14: ವಿಶ್ವಕರ್ಮ ಸಮಾಜವು ಶ್ರಮಜೀವಿಗಳ ಸಮುದಾಯವಾಗಿದ್ದು, ಸಮಾಜದ ಸಮಗ್ರ ಅಭಿವೃದ್ಧಿಗೆ ಸಂಘಟನೆಯ ಬಲ ಹಾಗೂ ಶಿಕ್ಷಣವೇ ಪ್ರಮುಖ ಆಧಾರ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು. ನಗರದ ಶಿವಶಾಂತ ಮಂಗಳ ಭವನದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಹಾಗೂ ಏಳು ತಾಲೂಕುಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದ ಕೀರ್ತಿಯನ್ನು ಹೆಚ್ಚಿಸಬೇಕು. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು. ಕೊಪ್ಪಳ ಜಿಲ್ಲೆಯ ವಿಶ್ವಕರ್ಮ ಸಮಾಜ ಉತ್ತಮ ಸಂಘಟನಾ ಶಕ್ತಿಯನ್ನು ಹೊಂದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಸಮಾಜದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ. ಮುಂದಿನ ದಿನಗಳಲ್ಲಿ ಸಮಾಜದ ಬಡ ಕುಟುಂಬಗಳಿಗೆ ವಿವಿಧ ಮೂಲಸೌಕರ್ಯ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಶೇಷಪ್ಪಯ್ಯ ಸ್ವಾಮೀಜಿ, ಶ್ರೀ ನಾಗಮೂರ್ತಿ ಸ್ವಾಮೀಜಿ, ಶ್ರೀ ಗುರುನಾಥ ಸ್ವಾಮೀಜಿ, ಶ್ರೀ ನಾಗಲಿಂಗ ಸ್ವಾಮೀಜಿ ಹಾಗೂ ಶ್ರೀ ಸೂರ್ಯನಾರಾಯಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಏಳು ತಾಲೂಕುಗಳ ನೂತನ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿ, ಸಂಘಟನೆಯ ಬಲವರ್ಧನೆ ಹಾಗೂ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ದೇವೇಂದ್ರ್ಪ ಬಡಿಗೇರ, ವಿರೇಶ್ ವಿಶ್ವಕರ್ಮ, ಶ್ರೀನಿವಾಸ ಪಂಡಿತ್, ಅಮರೇಶ್ ಪಟ್ಟಾರ್, ದೇವೇಂದ್ರ ವಿಶ್ವಕರ್ಮ, ಗುರುಮೂರ್ತಿ ಬಡಿಗೇರ, ಆಂಜನೇಯ ವಿಶ್ವಕರ್ಮ, ಮಹಾಂತೇಶ ವಿಶ್ವಕರ್ಮ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 