ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ: ಬಿಇಓ ಮುಜಾವರ
Develop a proactive attitude in children: BEO Mujawara
ಲೋಕದರ್ಶನ ವರದಿ
ಇಂಡಿ 16: ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವುದಕ್ಕೆ ಸೀಮಿತಗೊಳಿಸದೇ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ವಿಜ್ಞಾನ ವಸ್ತು ಪ್ರದರ್ಶನದಂತಹ ವೇದಿಕೆ ಕಲ್ಪಿಸುವುದು ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೈಯಿದಾ ಅನ್ನಿಸ್ ಮುಜಾವರ ಹೇಳಿದರು.
ಸೋಮವಾರದಂದು ನಗರದ ಸರಕಾರಿ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳಿಗೆ ರಚನಾತ್ಮಕ ಮತ್ತು ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ. ಈ ಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಪರಿಪೂರಕವಾಗಿದೆ ಎಂದು ಹೇಳಿದರು.ವಿಶ್ರಾಂತ ಪ್ರಾಚಾರ್ಯ ಬಾಬುಸಾಬ್ ಸೌದಾಗರ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ತಮ್ಮ ವಿಜ್ಞಾನ ಪಠ್ಯಕ್ಕೆ ಸಂಬಂಧಿಸಿದ ಮಾದರಿಗಳ ತಯಾರಿಕೆಗೆ ಪ್ರೊತ್ಸಾಹ ನೀಡುವುದರಿಂದ ಅವರಲ್ಲಿ ಜ್ಞಾನಾಭಿವೃದ್ಧಿಗೆ ಹೆಚ್ಚು ಪ್ರೇರಣೆ ಸಿಗಲಿದೆ ಎಂದು ತಿಳಿಸಿದರು. ಶಿಕ್ಷಕ ಸಂತೋಷ ಬಂಡೆ ಮಾತನಾಡಿ,’ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿನ ನೈಜತೆ, ಕ್ರಿಯಾತ್ಮಕ ಚಟುವಟಿಕೆ ಹಾಗೂ ಮಕ್ಕಳ ಸುಪ್ತ ಪ್ರತಿಭೆ ಅರಳುತ್ತದೆ. ಇಂದಿನ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಿದೆ’ ಎಂದರು.ಜಿಓಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲಾಭಕ್ಷ ವಾಲೀಕಾರ, ಯುವ ಮುಖಂಡ ಜಾವೀದ ಮೊಮಿನ್ ಮಾತನಾಡಿದರು.
ಹುಮಾಯೂನ್ ಬೀಳವಾರ, ಮುಜೀಬ್ ಬಾಗವಾನ, ಪತ್ರಕರ್ತರಾದ ಸದ್ದಾಂಹುಸೇನ್ ಜಮಾದಾರ, ರಾಜು ಚಾಬುಕಸವಾರ, ಉರ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಾಂಡು ರಾಠೋಡ, ಇಂಡಿ ಉರ್ದು ಕ್ಲಸ್ಟರ್ ಸಿಆರ್‌ಪಿ ಪರ್ವೇಜ್ ಪಟೇಲ್, ಸಮಾಜ ಸೇವಕ ಹಸನ ಮುಜಾವರ, ಮುಖ್ಯ ಶಿಕ್ಷಕ ಯಾಸೀನ್ ತುರ್ಕಿ, ಶಾಕೀರ್ ನಾಗೂರ, ಎಸ್ ಎಸ್ ಅರಬ, ಎ ಎ ಇಂಡೀಕರ, ಎನ್ ಎಸ್ ದೇವರ, ಗೌರಮ್ಮ ನಿಡಗುಂದಿ, ಅತಿಥಿ ಶಿಕ್ಷಕ ರಾದ ಯಾಸ್ಮಿನ್ ಅರಬ, ಅಫ್ತಾಬ್ ತುರ್ಕಿ, ಮಿಶ್ಬಾ ನಾಗಠಾಣ, ರುಬಿನಾ ಮಕಾನದಾರ, ಮಿಶ್ಬಾ ಇಂಡಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 