ದೇವರ ದಾಸಿಮಯ್ಯ ಮನುಕುಲದ ದಾರೀದೀಪ : ಸಹಜಾನಂದ ಸ್ವಾಮೀಜಿ

ಮಹಾಲಿಂಗಪುರ 13 : ನಮ್ಮದು ಭರತ ಭೂಮಿ ಆದಿ ಕಾಲದಿಂದಲೂ ಅನೇಕ ಋಷಿ ಮುನಿಗಳು, ಸಾಧು, ಸಂತರು ಅವದೂತರು ಪವಾಡ ಪುರುಷರು ಜನಿಸಿದ ಪವಿತ್ರ ಪುಣ್ಯ ಭೂಮಿ ನಮ್ಮದು ಅಂತಹವರಲ್ಲಿ ದೇವರದಾಸಿಮಯ್ಯನವರು ಒಬ್ಬರು ಬರೆದ ವಚನಗಳು ನಮಗೆ ದಾರೀದೀಪ ಅವರು ನೆಯ್ದ ಬಟ್ಟೆಯನ್ನು ಶಿವನಿಗೆ ಕೊಟ್ಟು ದೇವರ ದಾಸಿಮಯ್ಯನಾದರೂ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ, ಅವರ ಆದರ್ಶ ಬದುಕು ಮನುಕುಲಕ್ಕೆ ದಾರೀದೀಪ,ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಬ್ರಹ್ಮ ವಿದ್ಯಾಶ್ರಮದ ಪ ಪೂ ಶ್ರೀ ಸಹಜಾನಂದ ಸ್ವಾಮೀಜಿ ಹೇಳಿದರು. 

ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ನಡೆದ ದೇವರ ದಾಸಿಮಯ್ಯನವರ ಜಯಂತಿ ಹಾಗೂ 166 ನೇ ಸಿದ್ಧಾರೂಢರ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಸಿ ಮಾತನಾಡಿ ನೆಯ್ಗೆ ಕಾಯಕ ಮಾಡುತ್ತಾ ವಚನ ವಾನ್ಮಯಕ್ಕೆ ಒಂದು ತಳಹದಿ, ಒಂದು ಪರಂಪರೆ ಹಾಕಿಕೊಟ್ಟ ಅದ್ಯ ವಚನಕಾರ ದೇವರ ದಾಸಿಮಯ್ಯ ತನ್ನ ವಚನಗಳ ಸಾಹಿತಿಕ ಗುಣ ಹಾಗೂ ಮೌಲ್ಯಗಳಿಂದ ಬಸವ ಪೂರ್ವದ ಶ್ರೇಷ್ಠ ವಚನಕಾರ. ಜನವಾಣಿ ಹಾಗೂ ದೇಸಿ ಚಂದಸ್ಸಿನಿಂದ ಹದವಾಗಿ ಪಾಕಗೊಳಿಸಿ ಮುಂದಣ ಶಿವಶರಣರಿಗೆ ದಾಸಿಮಯ್ಯ್‌ ಮಾರ್ಗದರ್ಶಿಯಾದ. ವಚನ ಒಂದು ಸಾಹಿತ್ಯ ಪ್ರಕಾರವಾಗಿ ರೂಪಗೊಳ್ಳುತ್ತಿದ್ದುದನ್ನು ಇವರ ವಚನಗಳಲ್ಲಿ ಕಾಣಬಹುದು. ಹೊಸ ಸಾಹಿತ್ಯ ಪ್ರಕಾರಕ್ಕೆ ಹೊಸ ಆಯಾಮಗಳನ್ನು ತೋರಿಸಿದವರು ದಾಸಿಮಯ್ಯ.ದೇವರ ದಾಸಿಮಯ್ಯನವರು ಜಗತ್ತಿನ ಪ್ರಥಮ ವಚನಕಾರ ಎಂದು ಗುರುತಿಸಲ್ಪಟ್ಟಿದ್ದಾರೆ ಅವರು ನೇಕಾರ ಸಮುದಾಯದ ಸೂರ್ಯನಿದ್ದಂತೆ ಅವರ ಬೆಳಕು ಸಮುದಾಯದ ಮೇಲೆ ನಿರಂತರ ಬೀಳುತ್ತೀರಬೇಕು ಅವರು ಜಗತ್ತಿನ ಮೊದಲ ವಚಣಕಾರ ನೇಕಾರ ಸಮುದಾಯದ ಸಂತ ಆದ್ಯ ವಚಣಕಾರ ದೇವರ ದಾಸಿಮಯನವರ ಜೀವನ ಮನುಕುಲದದಾರಿ ದ್ವೀಪ ದಾಸಿಮಯ್ಯ ಜನ್ಮತಃ ಸಾಮಾನ್ಯ ವ್ಯಕ್ತಿ : ಆದರೆ ಸಾಧನೆಯ ಮೂಲಕ ಅಸಾಮಾನ್ಯ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು ಎಂದರು. 

ನಂತರ ಮಾತನಾಡಿದ ಬೆಳಗಲಿಯ ಯೋಗ ಗುರು ಸದಾಶಿವ ಗುರೂಜಿ ಯೋಗ್ಯ ಗುರುವಿನ ಲಕ್ಷಣ, ಭಕ್ತಾಭಿಮಾನ, ದಾಶ್ಯಭಾವ, ಸಮರಾ​‍್ಣಭಾವ, ಧರ್ಮ, ನೀತಿ ಮೊದಲಾದ ವಿಷಯಗಳು ದಾಸಿಮಯ್ಯನ ವಚನಗಳಲ್ಲಿ ಚೆನ್ನಾಗಿ ಪ್ರತಿಪಾದಿತವಾಗಿವೆ. ಯಾವುದೇ ಅನುಭವವು ಸಹೃದಯರಿಗೆ ತಲುಪುವಂತೆ ಉಪಮೆ ರೂಪಕಾದಿಗಳ ಮೂಲಕ ಹೇಳುವ ರೀತಿ ಸೊಪಜ್ಞತೆಯಿಂದ ಕೂಡಿದೆ. ಭಾಷೆಯಲ್ಲಿ ಸರಳತೆ ಕಂಡುಬದರೂ ಭಾವದಲ್ಲಿ ಅರ್ಥ ಶ್ರೀಮಂತಿಕೆ ಎದ್ದು ಕಾಣುತ್ತದೆ. ಇವರ ವಚನಗಳಲ್ಲಿ ಸಮಾಜವಿಮರ್ಶೆ ಕಟುವಾಗಿ ವಿಡಂಬನಾತ್ನಕವಾಗಿ ನಿರೂಪಿತವಾಗಿದೆ.ದಾಸಿಮಯ್ಯನವರು ತಮ್ಮ ಬುದ್ದಿಯ ಮಿಂಚಿಗೆ, ಭಾವದ ಬೆಳಕಿಗೆ ಅನುಭಾವದ ಉಸಿರಿಗೆ ಆಕಾರವನ್ನು ನೀಡುವಾಗ ಆಡು ನುಡಿಯನ್ನು ಬಳಸಿ ಕೊಂಡುದುದರಿಂದ ಆತನ ಭಾಷೆಯಲ್ಲಿ ಕಸುವಿದೆ, ಕಾವಿದೆ, ಹೊಸತನವಿದೆ, ಜೀವಂತಿಕೆಯಿದೆ. ಸಾಹಿತ್ಯ, ಭಾವ, ಕಾವ್ಯ, ಭಾಷೆ, ಸೌಂದರ್ಯ, ಎಲ್ಲ ದ್ರಷ್ಟಿಯಿಂದಲು ದಾಸಿಮಯ್ಯನ ವಚನಗಳು ತುಂಬಾ ಎತ್ತರಕ್ಕೆ ನಿಲ್ಲುತ್ತವೆ ಉದಾತ್ತವಾದ ಭಾವಗಳನ್ನು ಬಹು ಚಮತ್ಕಾರವಾಗಿ ಸುಲಭವಾದ ಮಾತುಗಳಲ್ಲಿ ಓದಿದರೆ ಮನಸ್ಸಿಗೆ ಹಿಡಿಯುವ ಹಾಗೆ ಒಂದೊಂದು ಅರ್ಥಗರ್ಭಿತವಾದ ಉಪಮಾನದಿಂದ ಒಂದೊಂದು ದೊಡ್ಡ ಚಿತ್ರವೇ ಕಣ್ಣುಮುಂದೆ ನಿಂತ ಹಾಗೆ ಕಾಣುತ್ತದೆ. ಸ್ವತಂತ್ರ ವಿಚಾರ ವ್ಯಕ್ತಿತ್ವದಿಂದ ಘನತೆಯನ್ನು ಪಡೆದಿರುವ ದಾಸಿಮಯ್ಯ ಬಸವಣ್ಣನವರನ್ನೇ ಮೊದಲು ಮಾಡಿಕೊಂಡು ಮುಂದಿನ ಶರಣರಿಗೆ ಆದರ್ಶಪ್ರಾಯವಾಗಿ ನಿಲ್ಲುತ್ತಾರೆ. 

ಪ್ರಾಸ್ತಾವಿಕವಾಗಿ ಮಾತನಾಡಿದ ಶರಣರಾದ ಮಲ್ಲಪ್ಪಣ್ಣ ಕಟಗಿ ದಾಸಿಮಯ್ಯ ನಡೆಸುತ್ತಿದ್ದ ಶಿವಕಾರುಣ್ಯಗೋಷ್ಠಿಗಳು ಮುಂದೆ ಬಸವಣ್ಣನವರ ಕಾಲದಲ್ಲಿ " ಅನುಭವ ಮಂಟಪ " ದಂತಹ ಲೋಕಪ್ರಿಯ ವಿಚಾರಗೋಷ್ಠಿಗಳು ರುಪುಗೊಳ್ಳಲು ಕಾರಣವಾಯಿತು. ದಾಸಿಮಯ್ಯ ಆರಂಭಿಸಿದ ಧಾರ್ಮಿಕ ಸಾಮಾಜಿಕ ಸುಧಾರಣೆಗಳು ಮುಂದುವರಿದು ಬಸವಣ್ಣ ಮತ್ತು ಸಮಕಾಲಿನ ಶರಣರ ಕಾಲದಲ್ಲಿ ಸಮಸಮಾಜದ ನಿರ್ಮಾಣಕ್ಕೆ ಬುನಾದಿಯಾದವು.ದಾಸಿಮಯ್ಯನವರ ಆದರ್ಶ ವ್ಯಕ್ತಿತ್ವ ಬಸವಣ್ಣ ಮತ್ತು ಇತರ ಶರಣರ ಮೇಲೆ ಗಾಡವಾದ ಪ್ರಭಾವ ಬೀರಿವೆ. ಬಸವಣ್ಣನವರ ಸಮಗ್ರ ಚಟುವಟಿಕೆಗಳಿಗೆ ದಾಸಿಮಯ್ಯ ಪ್ರೇರಕ ಶಕ್ತಿ. ನ್ಯಾಯಬದ್ದವಾದ ವಿಚಾರ ಮತ್ತು ಸೌಜನ್ಯದಿಂದಲೇ ಅನ್ಯರನ್ನು ಪರಿವರ್ತಿಸಿದ ಕೀರ್ತಿ ಅವರದ್ದು. 

ಇಂದಿನ ಕಾರ್ಯಕ್ರಮದಲ್ಲಿ  ಶ್ರೀಶೈಲ ಬಾಡನವರ,ವೇದಿಕೆ ಮೇಲೆ ಉಪಸ್ಥಿತರಿದ್ದರು. ಮಹಿಳೆಯರು ದಾಸಿಮಯ್ಯನವರ ಭಾವಚಿತ್ರವನ್ನು ತೊಟ್ಟಿಲಲ್ಲಿ ಇಟ್ಟು ತೋಟ್ಟಿಲು ತೂಗಿ ನಾಮಕರಣ ಮಾಡವ ಮೂಲಕಜಯಂತಿ ಕಾರ್ಯಕ್ರಮ ನೆರವೇರಿಸಿದರು. 

ಈ ಕಾರ್ಯಕ್ರಮದಲ್ಲಿ  ಮುಖಂಡರಾದ ಡಾ ಬಿ ಡಿ ಸೋರಗಾಂವಿ,ಮಲ್ಲಪ್ಪ ಬಾವಿಕಟ್ಟಿ, ಲಕ್ಕಪ್ಪ ಚಮಕೇರಿ, ನಾರಾಯಣ ಕಿರಗಿ, ಬಿ ಸಿ ಪೂಜಾರಿ,ಮಲ್ಲಪ್ಪ ಸೋರಗಾಂವಿ,ಜಿ.ಎಸ್ ಗೊಂಬಿ,ಸಿದಗಿರೇಪ್ಪ ಕಾಗಿ, ಅಲ್ಲಪ್ಪ ಗುಂಜಿಗಾಂವಿ,ಈಶ್ವರ ಚಮಕೇರಿ, ಮಹಾದೇವ ಟಿರ್ಕಿ, ಸತೀಶ ಸೋರಗಾಂವಿ, ಹುಮಾಯುನ ಸುತಾರ,ಬಾಳಿಗಿಡದ ಸರ್,ಗುರುಪಾದ ಅಂಬಿ, ಶಂಕೆರೆಪ್ಪಾ ಹಣಗಂಡಿ, ಚಂದ್ರು ಕಾಗಿ, ಶ್ರೀಶೈಲ ಕಿರಗಟಗಿ,ಪ್ರಭು ಬೆಳಗಲಿ,ಮಹಾಲಿಂಗಪ್ಪ ದಡುತಿ, ಶಂಕರ ಹಿಕಡಿ, ಶಿವಾನಂದ ಕಿತ್ತೂರ, ಶಂಕರ ಯಾದವಾಡ, ಸುಬಾಸ ಬಾವಿಕಟ್ಟಿ, ಮಹಾದೇವ ಚೆಮಕೇರಿ, ಅಲ್ಲಪ್ಪಾ ಹುನ್ನೂರ,ಶಿವಾನಂದ ಕಿತ್ತೂರ,ಮಹಾಲಿಂಗ ಬುದ್ನಿ, ಮಹಾದೇವ ಜಿಟ್ಟಿ,  ಸೇರಿದಂತೆ ಹಲವರುಇದ್ದರು. ಕಾರ್ಯಕ್ರಮವನ್ನು ಗುರುಗಳಾದ ಎಸ್ ಕೆ ಗಿಂಡೆ ನಿರೂಪಿಸಿ ವಂದಿಸಿದರು.