ಶಿರಹಟ್ಟಿ ಬರಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ

ಶಿರಹಟ್ಟಿ ಬರಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ  Demand to declare Shirahatti a drought-hit area

ಶಿರಹಟ್ಟಿ   16: ತಾಲೂಕು ಬರಗಾರ ಪ್ರದೇಶ ಎಂದು ಘೋಷಿಸಿ ಎಕರೆಗೆ 50 ಸಾವಿರ ಪರಿಹಾರ ನೀಡುವಂತೆ ಶಾಸಕ- ಡಾ ಚಂದ್ರು ಲಮಾಣಿ ಮನವಿ  ಲಕ್ಷ್ಮೇಶ್ವರ " ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ ಚಂದ್ರು ಲಮಾಣಿ ಅವರು ಗುರುವಾರ ಬೆಂಗಳೂರಿನಲ್ಲಿ ಪ್ರಧಾನ ಕಾರ್ಯದರ್ಶಿಗಳು ಕಂದಾಯ (ವಿಪತ್ತು ನಿರ್ವಹಣೆ) ಅವರನ್ನು ಮಾನ್ಯ ಜನಪ್ರಿಯ ಶಾಸಕರಾದ ಡಾ.ಚಂದ್ರು ಕೆ. ಲಮಾಣಿಯವರು ಭೇಟಿ ಮಾಡಿ, ಮುಂಗಾರು ಮಳೆ ಬಾರದಿರುವುದರಿಂದ ಬಿತ್ತಿದ ಬೆಳೆ ಹಾಳಾಗಿ ರೈತರ ಸ್ಥಿತಿ ದಾರುಣವಾಗಿದೆ. ಭೂಮಿಗೆ ನೀರಿಲ್ಲಾದಿರುವುದರಿಂದ ಸಹಜವಾಗಿ ಪಶುಗಳಿಗೆ ನೀರು ಮತ್ತು ಮೇವಿನ ಕೊರತೆ ಉಂಟಾಗಿದೆ.

ಪಶುಗಳ ಪಾಲನೆ ಸಾಧ್ಯವಾಗದೆ ರೈತರು ಸಂತೆಯಲ್ಲಿ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಭವಿಷ್ಯದ ಬೆಳೆಯ ಲಾಭ ಬಾರದಿದ್ದರೂ, ಈಗಾಗಲೇ ಸಾಲ ಮಾಡಿ ಬಿತ್ತಿದ ಬೀಜಗಳು ಮಳೆ ಇಲ್ಲದೆ ಹಾಳಾಗಿ ಹೋಗಿದ್ದು ರೈತನು ಪರಿಹಾರ ಕಾಣದೇ ಕಂಗಾಲಾಗಿದ್ದಾನೆ.ಆದ ಕಾರಣ ರೈತನ ಬೆನ್ನಿಗೆ ನಿಂತು ಪ್ರತಿ ಎಕರೆಗೆ 50000 ಪರಿಹಾರ ಹಣ ನೀಡಲು ಘೋಷಣೆ ಮಾಡಬೇಕು. ನನ್ನ ಶಿರಹಟ್ಟಿ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಗೊಳಿಸಿ ರೈತರಿಗೆ ನೆರವುಯಾಗಬೇಕೆಂದು ಮನವಿ ಸಲ್ಲಿಸಲಾಯಿತು.