ವಿಜಯಪುರ

ಸರ್ಕಾರಿ ಜಮೀನು ಅಳತೆ, ಗಡಿ ಗುರುತು ಕಾರ್ಯ ಪೂರ್ಣಗೊಳಿಸಲು ಒತ್ತಾಯ

ಸರ್ಕಾರಿ ಜಮೀನು ಅಳತೆ, ಗಡಿ ಗುರುತು ಕಾರ್ಯ ಪೂರ್ಣಗೊಳಿಸಲು ಒತ್ತಾಯ

ಲೋಕದರ್ಶನ ವರದಿ 

ವಿಜಯಪುರ ಜು.6: ಸಾರವಾಡ ಗ್ರಾಮದ ಸರ್ವೇ ನಂ. 804/2ರ 19 ಎಕರೆ 7 ಗುಂಟೆ ಸರ್ಕಾರಿ ಜಮೀನಿನ ಅಳತೆ ಕಾರ್ಯವನ್ನು ಪೂರ್ಣಗೊಳಿಸಿ, ಗಡಿ ಗುರುತು ಸ್ಥಾಪಿಸಿ, ಅತಿಕ್ರಮಣ ತೆರವುಗೊಳಿಸಿ ತಂತಿ ಬೇಲಿ ನಿರ್ಮಿಸಿ ಸಂರಕ್ಷಣೆ ಮಾಡಬೇಕು ಎಂದು ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.  

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 5ರಂದು ನಡೆದ ಸರ್ವೇ ವೇಳೆ ಅಧಿಕಾರಿಗಳು ಜಮೀನಿನ ಸಂಪೂರ್ಣ ಅಳತೆ ನಡೆಸದೆ, ಗಡಿ ಗುರುತುಗಳನ್ನು ಸ್ಥಾಪಿಸಿಲ್ಲ. ಅಳತೆ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿ ಅಪೂರ್ಣ ವರದಿ ಸಲ್ಲಿಸಿರುವುದರಿಂದ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ಹೋಗಿದೆ ಎಂದು ಆರೋಪಿಸಿದರು.  

ಸರ್ಕಾರಿ ಜಮೀನಿನ ಗಡಿಯನ್ನು ಸ್ಪಷ್ಟವಾಗಿ ಗುರುತಿಸಿ, ಅತಿಕ್ರಮಣ ತೆರವುಗೊಳಿಸಿ ಸಾರ್ವಜನಿಕ ಹಿತಾಸಕ್ತಿಗೆ ಅನುಕೂಲವಾಗುವಂತೆ ಸಂರಕ್ಷಣೆ ಮಾಡಬೇಕೆಂದು ಅವರು ಒತ್ತಾಯಿಸಿದರು.  ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ​‍್ಕವಾಗಿ ನಿರ್ವಹಿಸಿ, ಒಂದು ವಾರದೊಳಗೆ ಮರುಸರ್ವೇ ನಡೆಸಿ 19 ಎಕರೆ 7 ಗುಂಟೆ ಜಮೀನಿನ ಗಡಿಯನ್ನು ನಿಖರವಾಗಿ ಗುರುತಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 


ಸುದ್ದಿ ಓದಿ