ಖಾಯಂ ತಹಸಿಲ್ದಾರ್ ಕಾರ್ಯಾಲಯ ಕಟ್ಟಡ ನಿರ್ಮಿಸಲು ವಿವಿಧ ಸಂಘಟನೆಗಳ ಅಗ್ರಹ
ಕುಕನೂರು 25: ಪಟ್ಟಣದಲ್ಲಿ ತಾಲೂಕ ಕೇಂದ್ರವನ್ನಾಗಿಸಿ ಇಲ್ಲಿಯ ತನಕ ಸರ್ಕಾರಿ ಕಾರ್ಯಾಲಯಗಳಿಗೆ ಸ್ವಂತ ಕಟ್ಟಡಗಳಿಲ್ಲದೆ ಸ್ಥಳಾಂತರ ಗೊಳ್ಳುತ್ತಿರುವ ಕಾರ್ಯವಾಗಿದ್ದು ಇದರಿಂದ ಬೇಸತ್ತ ಜನತೆ ಕಾಯಂ ಕಟ್ಟಡ ನಿರ್ಮಿಸುವಂತೆ ತಹಸಿಲ್ದಾರರನ್ನು ಒತ್ತಾಯಪಡಿಸಿರುತ್ತಾರೆ.
ಇತ್ತೀಚಿಗಷ್ಟೇ ಗುದ್ನೆಪ್ಪನ ಮಠದ ಪ್ರದೇಶದಲ್ಲಿ ತಾಲೂಕ ಆಡಳಿತ ಕಾರ್ಯಾಲಯ, ತಾಲೂಕ ನ್ಯಾಯಾಲಯಗಳ ಸಂಕಿರಣ ಹಾಗೂ ಬುದ್ಧ ಬಸವ ಅಂಬೇಡ್ಕರ್ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಸ್ಥಳ ಪರೀಶೀಲನೆ ಮಾಡಿದ್ದು ಜಾಗದಲ್ಲಿ ಕಟ್ಟಡ ಕಟ್ಟಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಕಟ್ಟಡಗಳು ನಿರ್ಮಾಣವಾಗುವುದು ವಿಳಂಬವಾಗುತ್ತಿರುವುದನ್ನು ಅರಿತ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಸೇರಿಕೊಂಡು ಶೀಘ್ರದಲ್ಲಿ ಕಾಯಂ ಕಟ್ಟಡ ನಿರ್ಮಿಸುವಂತೆ ಆಗ್ರಹಪಡಿಸಿರುತ್ತಾರೆ.
ಗುದ್ನೆಪ್ಪನ ಮಠದ ಜಾಗದಲ್ಲಿ ಸರ್ಕಾರಿ ಕಾರ್ಯಾಲಯಗಳ ಕಟ್ಟಡ ನಿರ್ಮಿಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ಯರ ಮತ್ತು ಸುತ್ತಮುತ್ತಲಿನ ರೈತರ ಮನವೊಲಿಸಿ ಅಲ್ಲಿ ಆಡಳಿತ ಕಟ್ಟಡ ನಿರ್ಮಿಸಲು ಮುಂದಾದಲ್ಲಿ ಸೂಕ್ತ ಸ್ಥಳದಲ್ಲಿ ಕಾರ್ಯಾಲಯಗಳ ಕಟ್ಟಡವನ್ನು ನಿರ್ಮಾಣ ಮಾಡಿದಂತಾಗುತ್ತದೆ ಎಂದು ಕುಕನೂರು ನಾಗರಿಕರ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ತಾಲೂಕ ಹಮಾಲರ ಸಂಘ ದ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರುಸೇರಿದಂತೆ ವಿವಿಧ ಸಹಕಾರಿ ಸಂಘಗಳ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿಕೊಂಡು ತಹಸಿಲ್ದಾರರಿಗೆ ಮನವಿ ಸಲ್ಲಿಸಿರುತ್ತಾರೆ.
ಈ ಸಂದರ್ಭದಲ್ಲಿ ವಕೀಲರ ಸಂಘದ ಸದಸ್ಯ ಬಸವರಾಜ ಜಂಗ್ಲಿ ಮಾತನಾಡುತ್ತಾ ಶಾಸಕರು ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಶ್ರಮ ಪಡುತ್ತಿದ್ದು ಈ ಕಾರ್ಯವು ಸೂಕ್ತ ಸಮಯದಲ್ಲಿ ಪೂರ್ಣಗೊಂಡಾಗ ಶಾಸಕರ ಶ್ರಮಕ್ಕೆ ಬೆಲೆ ನೀಡಿದಂತಾಗುತ್ತದೆ ಎಂದು ಹೇಳಿದರು. ಸಂಘದ ಅಧ್ಯಕ್ಷ ನಿಂಗಪ್ಪ ಗೊರಲೆಕೊಪ್ಪ ಮಾತನಾಡಿ ಈ ಹಿಂದೆ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಅವಧಿಯಲ್ಲಿ ಹಮಾಲರ ಕಾಲೋನಿ ನಿರ್ಮಾಣ ಮಾಡಬೇಕಾದ ಸ್ಥಳದಲ್ಲಿ ಪದವಿ ಪೂರ್ವ ಕಾಲೇಜಿನ ಕಟ್ಟಡ ನಿರ್ಮಾಣ ಮಾಡಿದರು ಅದೇ ರೀತಿ ಈಗ ಪ್ರದೇಶದಲ್ಲಿ ಅಥವಾ ಕೊಪ್ಪಳ ರಸ್ತೆಯ ಹೆದ್ದಾರಿಗೆ ಹೊಂದಿಕೊಂಡಂತೆ ತಾಲೂಕ ಕಾರ್ಯಾಲಯಗಳು ನಿರ್ಮಾಣಗೊಳ್ಳಲಿ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ, ಗಗನ್ ನೋಟಗಾರ, ನೂರುದ್ದೀನ್ ಸಾಬ್ ಗುಡಿಯಿಂದಲ್, ನಿಂಗಪ್ಪ ಗುರ್ಲೆಕೊಪ್ಪ, ದಲಿತ ಸಂಘರ್ಷ ಸಮಿತಿ ಸದಸ್ಯರು, ಕುಕನೂರು ನಾಗರಿಕ ವೇದಿಕೆ ಮಂಜುನಾಥ ಸೋಂಪುರ, ಮುತ್ತು ವಾಲ್ಮೀಕಿ, ಬಸವರಾಜ ಜಂಗ್ಲಿ, ಹೊನ್ನಪ್ಪ ಮುರುಡಿ, ರಮೇಶ ಗಜಕೋಶ, ಮಂಜುನಾಥ ಎಡೆಯಾಪುರ, ಮಹಮ್ಮದ್ ರಫಿ, ಪ್ರಶಾಂತ್ ರಾಟಿಮನಿ ಇನ್ನಿತರರು ಪಾಲ್ಗೊಂಡಿದ್ದರು