ರೈತರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಾಯ

ರೈತರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಾಯ Demand for the government to fulfill farmers' demands

ಧಾರವಾಡ  18 : ರಾಜ್ಯದಲ್ಲಿ ಬರಗಾಲ ಘೋಷಿಸಬೇಕು  ಮತ್ತು ವೃದ್ಯಾಪ ವೇತನ, ವಿಧವಾ ವೇತನ  ಬಿಡುಗಡೆ ಮಾಡಲು ಒತ್ತಾಯಿಸಿ ಜುಲೈ 20 ಸೋಮವಾರದಂದು ಪ್ರತಿಭಟನೆ.  ಮಾನ್ಯರೇ  ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆ ಎಂಎಸ್) ವತಿಯಿಂದ 20 ಜುಲೈ 2026ರಂದು ರಾಜ್ಯದಾದ್ಯಂತ ಬರಗಾಲ ಘೋಷಿಸಲು ಒತ್ತಾಯಿಸಿ  ಇಂದು ಧಾರವಾಡ ತಾಲೂಕಿನ ಕೊಟಬಾಗಿ,  ಕಲ್ಲೇ ಕಬ್ಬೇನೂರ ಹಾರಬೆಳವಾಡಿ,  ನವಲಗುಂದ ತಾಲೂಕಿನ ಶಿರೂರ  ಗ್ರಾಮದಲ್ಲಿ ಪ್ರಚಾರ ಮಾಡಿ,  20 ಜುಲೈ  ಸೋಮವಾರದಂದು  ನಡೆಯುವ ಪ್ರತಿಭಟನೆಗೆ  ಹೆಚ್ಚಿನ  ರೈತ  ಬಾಂಧವರು  ಭಾಗವಹಿಸುವಂತೆ ಕರೆ ನೀಡಲಾಯಿತು. ಧಾರವಾಡದ ಜಿಲ್ಲಾಧಿಕಾರಿ  ಕಚೇರಿದರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.  ಆಸಕ್ತ ರೈತರು ನಂಬರಿಗೆ ಸಂಪರ್ಕಿಸಿ 7411516670, 8553363832 ಈ ನಂಬರಿಗೆ ಸಂಪರ್ಕಿಸಲು ಕೋರಲಾಗಿದೆ.