ರಾಯಬಾಗ

ಕೃಷ್ಣಾ ನದಿ ತೀರದ ಗ್ರಾಮಗಳಿಗೆ ತಕ್ಷಣ ವಿದ್ಯುತ್ ಪೂರೈಸಲು ಆಗ್ರಹ

ಕೃಷ್ಣಾ ನದಿ ತೀರದ ಗ್ರಾಮಗಳಿಗೆ ತಕ್ಷಣ ವಿದ್ಯುತ್ ಪೂರೈಸಲು ಆಗ್ರಹ

ಕೃಷ್ಣಾ ನದಿ ತೀರದ ಗ್ರಾಮಗಳಿಗೆ ತಕ್ಷಣ ವಿದ್ಯುತ್ ಪೂರೈಸಲು ಆಗ್ರಹ  

ರಾಯಬಾಗ 16 ; ತಾಲ್ಲೂಕಿನ  ಬಾವನಸೌಂದತ್ತಿಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು ಕೃಷ್ಣಾನದಿ ದಡದಲ್ಲಿರುವ ಗ್ರಾಮಗಳಿಗೆ ವಿದ್ಯುತ್ ನೀಡಬೇಕು ಎಂದು ಮಾಜಿ ಗ್ರಾಪಂ ಸದಸ್ಯ ಅನೀಲ ಹಂಜೆ ಅವರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಹೆಚ್ಚಿರುವುದರಿಂದ ಕೃಷ್ಣಾನದಿ ದಡದಲ್ಲಿ ವಾರಕ್ಕೆ ಎರಡು ದಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ ಹಿನ್ನೆಲೆ ವಾರಕ್ಕೆ ಎರಡು ದಿನ ವಿದ್ಯುತ್ ಕಡಿತಗೊಳಿಸುತ್ತ ಬರಲಾಗುತ್ತಿದೆ. ಆದರೆ ಈಗ ಕೃಷ್ಣಾನದಿ ನೀರು ತುಂಬಿ ಹರಿಯುತ್ತಿದ್ದು ನೀರಿನ ಅಭಾವ ನೀಗಿದೆ. ಆದರೆ ನದಿ ಪಾತ್ರದ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸುತ್ತಿದೆ. ಹಾಗಾಗಿ ಆದೇಶ ಹಿಂಪಡೆದು ತಕ್ಷಣ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ ತಾಲೂಕಿನ ನೂರಾರು ಗ್ರಾಮಗಳ ಲಕ್ಷಾಂತರ ರೈತರ ಜಮೀನುಗಳಿಗೆ ನೀರು ಅವಶ್ಯಕತೆ ಇದೆ. ಅದಕ್ಕೂ ಮೇಲಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ತಕ್ಷಣ ಜಿಲ್ಲಾಧಿಕಾರಿಗಳು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಈ ವೇಳೆ ಮಾಜಿ ಗ್ರಾಪಂಅಧ್ಯಕ್ಷ ರಾಮಚಂದ್ರ ಕಾಟೆ, ಅಜೀತ ಖೆಮಲಾಪುರೆ, ಸತ್ಯಪ್ಪ ಭಿಷ್ಠೆ, ಅಜೀತ ಕುಂಬಾರ, ವಿನೋಧ ಹಿರೇಮಠ, ಪಾಂಡುರಂಗ ದೇಸಾಯಿ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ