ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
Demand for fulfillment of various demands
ಇಂಡಿ 2: ಭಾರತೀಯ ಕಿಸಾನ್ ಸಂಘ ಇಂಡಿ ತಾಲ್ಲೂಕು ಘಟಕ ವತಿಯಿಂದ ನೂರಾರು ರೈತರು ಸೇರಿ ಇಂಡಿ ನಗರದ ಮಿನಿ ವಿಧಾನಸೌಧ ಮುಂಬಾಗದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆಲ ಹೊತ್ತು ಧರಣಿ ಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರುನಾಥ್ ಬಗಲಿ ಮಾತನಾಡಿ ಮಾನ್ಯ ಜಿಲ್ಲಾಧಿಕಾರಿಗಳು ವಿಜಯಪೂರ ಆದೇಶ ಅನ್ವಯ ಸದರಿ ಇಂಡಿ ತಾಲ್ಲೂಕಿನ ನಾದ ಕೆ ಡಿ ಗ್ರಾಮದ ಸರ್ವೆ ನಂಬರ್ 139 ರಿಂದ 147ರ ತನಕ ಹಾಗೂ ಶಿರಶ್ಯಾಡ ಗ್ರಾಮದ ಹಾಗೂ ಅರ್ಜುಣಗಿ ( ಬಿಕೆ ್ಘ ಕೆಡಿ) ಗ್ರಾಮದಲ್ಲಿ ಪಹಣಿಗಳಲ್ಲಿ ಕಾಲಂ ನಂಬರ 11 ರಲ್ಲಿನ ಕರ್ನಾಟಕ ವಕ್ಘ್ ಬೋರ್ಡ್ ಹೆಸರು ತೆಗೆದು ಹಾಕಬೇಕು ಮತ್ತು ನಾದ (ಕೆ ಡಿ) ಗ್ರಾಮದ ಜಮಖಂಡಿ ಶುಗರ್ಸ್ ಲೀ ಘಟಕ 2 ಸಕ್ಕರೆ ಕಾರ್ಖಾನೆಯ ಚಿಮಣಿಯ ಹೋಗೆಯ ಜೊತೆಗೆ ಬೂದಿ ಹಾರುವುದರಿಂದ ನಾದ, ಅರ್ಜುಣಗಿ ಗ್ರಾಮದ ಎಲ್ಲ ಜಮಿನಗಳ ಬೆಳೆಗಳ ಮೇಲೆ ತೆರೆದ ಬಾವಿಯಲ್ಲಿ ಮನೆಗಳ ಮೇಲೆ ಬೂದಿ ಬಿದ್ದು ಪರಿಸರ ಮಾಲಿನ್ಯವಾಗುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು ಸದರಿ ವಿಷಯ ಹಲವಾರು ಸಲ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು ಕೂಡಾ ಯಾವುದೇ ಪರಿಹಾರೋಪಾಯ ಕಂಡುಕೊಂಡಿಲ್ಲ. ಈ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಖಾನೆಯ ಎಂ ಡಿ ಇವರಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.ಧರಣಿ ನಿರತ ರೈತರ ಬಳಿ ಬಂದ ಕಂದಾಯ ಇಲಾಖೆಯ ಅಧಿಕಾರಿಗಳು ರೈತರ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಈರಣ್ಣ ಗೋಟ್ಯಾಳ ದತ್ತಾತ್ರೇಯ ಡೋಣಿ ಮಹಬೂಬಸಾಬ ಮುಲ್ಲಾ ಈರಣ್ಣ ಬಿರಾದಾರ ಚನ್ನಪ್ಪ ಮಿರಗಿ ಶರಣಪ್ಪ ತಾರಾಪೂರ ಚಂದಪ್ಪ ಮಿರಗಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 